ಮಂಗಳವಾರ, ಏಪ್ರಿಲ್ 29, 2025
HomekarnatakaDK Shivakumar vs Ramesh Jarakiholi : ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ಸಿಬಿಐ ಅಸ್ತ್ರ...

DK Shivakumar vs Ramesh Jarakiholi : ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ಸಿಬಿಐ ಅಸ್ತ್ರ : ಬಿಜೆಪಿ ಹೈಕಮಾಂಡ್ ಮೊರೆ ಹೋದ ರಮೇಶ ಜಾರಕಿಹೊಳಿ

- Advertisement -

ಬೆಳಗಾವಿ: ರಾಜ್ಯ ಬಿಜೆಪಿ ಸರಕಾರದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣವೇ ಇಲ್ಲ. ಮೊನ್ನೆಯಷ್ಟೇ ಸಿಡಿ ಷಡ್ಯಂತ್ರದ ಬಗ್ಗೆ ಡಿಕೆ ಶಿವಕುಮಾರ್ (DK Shivakumar vs Ramesh Jarakiholi) ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಸಿಬಿಐಗೆ ವಹಿಸುವಂತೆ ದುಂಬಾಲು ಬಿದ್ದಿದ್ದರು. ಈಗ ಸಿಎಂ ಮೊರೆ ಹೋಗಿ ಪ್ರಯೋಜನವಿಲ್ಲ ಎನ್ನುತ್ತ ಸಿಬಿಐ ಅಸ್ತ್ರಕ್ಕಾಗಿ ಹೈಕಮಾಂಡ್ ಮೊರೆ ಹೋಗಲು ದೆಹಲಿಗೆ ಹಾರಿದ್ದಾರೆ.

ಮುಂದಿನ ಸರ್ಕಾರ ರಚನೆ ಹಾಗೂ ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಅಶ್ಲೀಲ ಸಿಡಿ ಪ್ರಕರಣ ಮುಳುವಾಗುವ ಲಕ್ಷಣವಿದೆ. ಡಿಕೆಶಿ ವಿರುದ್ಧ ‘ಸಿಡಿ’ದೆದ್ದಿರುವ ರಮೇಶ್ ಜಾರಕಿಹೊಳಿ ಶತಾಯ ಗತಾಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕಮಾಂಡ್ ಹಾಗೂ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ. ರಮೇಶ್ ಜಾರಕಿಹೊಳಿ ಗುರುವಾರ ಬೆಂಗಳೂರಿಂದ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯಾಗಿ ಸಿಡಿ ಪ್ರಕರಣದ ಬಗ್ಗೆ ವಿವರಿಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಲಿದ್ದಾರಂತೆ. ಬಜೆಟ್ ಅಧಿವೇಶನ ಹಿನ್ನೆಲೆ ಬ್ಯುಸಿಯಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಿರ್ಧರಿಸೋ ರಮೇಶ್ , ಅಮಿತ್ ಶಾ ಭೇಟಿಗೆ ಸಮಯ ಕೇಳಿದ್ದಾರೆ.

ತಮ್ಮ ವಿರುದ್ಧ ಬಿಡುಗಡೆಯಾಗಿದ್ದ ಸಿಡಿ ಹಿಂದೆ ಡಿಕೆಶಿ ಕೈವಾಡವಿದೆ. ಇದರ ಬಗ್ಗೆ ಸಾಕಷ್ಟು ಸಾಕ್ಷಾಧಾರವಿದೆ. ಹೀಗಾಗಿ ಈ ಪ್ರಕರಣವನ್ನು ನೀವು ಸಿಬಿಐಗೆ ವಹಿಸಬೇಕು. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆಗೆ ನಾನು ಕಾರಣವಾದೇ ಎಂಬ ದ್ವೇಷಕ್ಕೆ ಡಿಕೆಶಿಯವರೇ ಮುಂದೇ ನಿಂತು ಸಿಡಿ ಷಡ್ಯಂತ್ರ ಮಾಡಿಸಿದ್ದಾರೆ. ಸಿಬಿಐ ತನಿಖೆಯಿಂದ ತಪ್ಪಿತಸ್ಥರು ಹಾಗೂ ಷಡ್ಯಂತ್ರದ ಮಾಸ್ಟರ್ ಮೈಂಡ್ ನ್ನು ಹೊರತರಲು ಸಾಧ್ಯ. ಹೀಗಾಗಿ ಪ್ರಕರಣವನ್ನು ಸಿಬಿಐನಿಂದ ತನಿಖೆ ಮಾಡಿಸುವಂತೆ ರಮೇಶ್ ಒತ್ತಾಯಿಸಲಿದ್ದಾರಂತೆ.

ಚುನಾವಣೆ ಹೊತ್ತಿನಲ್ಲಿ ಈ ಪ್ರಕರಣ ಸಿಬಿಐ ಕೈ ಸೇರಿದ್ರೇ ಅನಿವಾರ್ಯವಾಗಿ ಡಿಕೆಶಿ ಹಾಗೂ ಅವರ ಬೆಂಬಲಿಗರು ವಿಚಾರಣೆ ಎದುರಿಸಬೇಕಾಗುತ್ತದೆ. ಇದು ಬಿಜೆಪಿಗೆ ಚುನಾವಣಾ ಅಸ್ತ್ರವಾಗಿ ಬಳಕೆಯಾಗಲಿದೆ. ಕಾಂಗ್ರೆಸ್ಸಿಗರ ಷಡ್ಯಂತ್ರದಿಂದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡರು ಎಂಬುದನ್ನು ನಿರೂಪಿಸಿ ಚುನಾವಣೆಯಲ್ಲಿ ತಮ್ಮ ವರ್ಚಸ್ಸನ್ನು ಮರಳಿ ಪಡೆದುಕೊಳ್ಳುವುದು ಅಲ್ಲದೇ ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಮುಜುಗರ ತರೋದು ರಮೇಶ್ ಜಾರಕಿಹೊಳಿ ತಂತ್ರವಾಗಿದೆ.

ಇದಕ್ಕಾಗಿ ಕಳೆದ ಎರಡು ದಿನಗಳಿಂದ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ತನಿಖೆ ಮಾಡಿಸುವಂತೆ ಒತ್ತಾಯಿಸಿದ್ದ ರಮೇಶ್ ಈಗ ನೇರವಾಗಿ ಹೈಕಮಾಂಡ್ ಬಳಿಯೇ ತಮ್ಮ ಬೇಡಿಕೆ ಮುಂದಿಟ್ಟಿದ್ದು ಬಿಜೆಪಿ ಹೈಕಮಾಂಡ್ ತಮಗಾದ ಮುಜುಗರಕ್ಕೆ ಪ್ರತಿಕಾರ ಪಡೆಯಲು ಡಿಕೆಶಿ ವಿರುದ್ಧ ಸಿಬಿಐ ಅಸ್ತ್ರ ಪ್ರಯೋಗಕ್ಕೆ ಸಿದ್ಧವಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : CM Jagan Mohan Reddy : ಆಂಧ್ರಪ್ರದೇಶದ ರಾಜಧಾನಿ ವಿಶಾಖಪಟ್ಟಣಂ : ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಇದನ್ನೂ ಓದಿ : President Draupadi Murmu: ಮುಂಬರುವ ವರ್ಷಗಳು ಸುವರ್ಣಯುಗವಾಗಲಿ: ದ್ರೌಪದಿ ಮುರ್ಮು

CBI weapon again against DK Shivakumar vs Ramesh Jarakiholi went to BJP high command

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular