Former President of KPCC : ಕಾಂಗ್ರೆಸ್ ನಲ್ಲಿ ಮತ್ತೊಂದು ಅಪಸ್ವರ: ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಅಸಮಧಾನಗೊಂಡ ಪರಮೇಶ್ವರ್

ರಾಜ್ಯದಲ್ಲಿ ಬಿಜೆಪಿಗೆ ಟಕ್ಕರ್ ಕೊಟ್ಟು ಅಧಿಕಾರಕ್ಕೆರುವ ಕನಸಿನಲ್ಲಿರೋ ಕಾಂಗ್ರೆಸ್ ಗೆ ಸಿದ್ದು ಹಾಗೂ ಡಿಕೆಶಿ ನಡುವಿನ ಶೀತಲ ಸಮರವೇ ಶತ್ರುವಾಗುತ್ತಿದೆ ಅನ್ನೋ ಮಾತಿದೆ. ಇದರ ಮಧ್ಯೆಯೇ ಈಗ ದಲಿತ ಸಿಎಂ ಆಸೆ ಇಟ್ಕೊಂಡಿರೋ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಕೈಪಾಳಯದ ಹಿರಿಯ ನಾಯಕ ಪರಮೇಶ್ವರ್ (Former President of KPCC) ಕೂಡ ಡಿಕೆಶಿ,ಸಿದ್ಧು ವಿರುದ್ದ ಅಸಮಧಾನಗೊಂಡಿದ್ದು ಆಪ್ತರ ಬಳಿ ನೋವು ತೋಡಿಕೊಂಡಿದ್ದಾರಂತೆ. ಕಾಂಗ್ರೆಸ್ ಅಧಿಕಾರಕ್ಕೆ ತರೋ ಉದ್ದೇಶದಿಂದ ಸಿದ್ದರಾಮಯ್ಯ ಹಾಗೂ ಡಿಕೆಶಿಯವರು ಒಂದಾದ ಮೇಲೊಂದರಂತೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮಾತ್ರವಲ್ಲ ಪ್ರವಾಸದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೇ ಜನಕ್ಕೆ ಯಾವ ಯಾವ ಕೊಡುಗೆ ನೀಡುತ್ತೆ ಅನ್ನೋದನ್ನು ಒಂದೊಂದಾಗಿ ಘೋಷಿಸುತ್ತಿದ್ದಾರೆ.

ಈಗಾಗಲೇ ಮನೆ ಮನೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ತಲಾ 2000 ರೂಪಾಹಿ ಸಹಾಯಧನದಂತಹ ಕೊಡುಗೆಯನ್ನು ಘೋಷಿಸಿದೆ . ಇಬ್ಬರೂ ಕಾಂಗ್ರೆಸ್ ನಾಯಕರ ಈ ಘೋಷಣೆಗಳೇ ಪರಮೇಶ್ವರ ಬೇಸರ ಹಾಗೂ ಅಸಮಧಾನಕ್ಕೆ ಕಾರಣವಾಗಿದೆಯಂತೆ. ಪ್ರವಾಸದ ವೇಳೆ ತಾವೇ ತೀರ್ಮಾನ ಮಾಡಿ ಉಚಿತ ಘೋಷಣೆ ಮಾಡುತ್ತಿದ್ದಾರೆಂದು ಪರಂ ಬೇಸರ ಮಾಡಿಕೊಂಡಿದ್ದು, ಈ ಬಗ್ಗೆ ತಮ್ಮ ಆಪ್ತರ ಬಳಿ ಬೇಸರ ಹೊರ ಹಾಕಿರುವ ಪರಮೇಶ್ವರ್, ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.ಅಷ್ಟೇ ಏಕೆ, ಡಿಸಿಎಂ, ಪ್ರಬಲ ಖಾತೆಗಳನ್ನೂ ನಿಭಾಯಿಸಿದ್ದೇನೆ.ಪಕ್ಷ ಸಂಘಟನೆಯಲ್ಲಿ ನನ್ನದೆ ಆದ ಕೊಡುಗೆ ಇದೆ.ಪ್ರಸ್ತುತ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಹ ಆಗಿದ್ದೇನೆ ಆದರೂ ತನ್ನನ್ನ ಕಡೆಗಣಿಸಿ ಉಚಿತ ಯೋಜನೆಗಳ ಘೋಷಣೆ ಮಾಡುತ್ತಿದ್ದಾರೆಂದು ಬೇಸರ ತೋಡಿಕೊಂಡೊದ್ದಾರಂತೆ.

ಹೀಗೆ ಆದರೇ ಪಕ್ಷದ ನಾಯಕರಿಗೆ ಬೆಲೆ ಇಲ್ಲದಂತಾಗುತ್ತದೆ. ಸಾಮೂಹಿಕ ನಾಯಕತ್ವಕ್ಕೆ ಅರ್ಥ ಎಲ್ಲಿದೆ ಎಂದೆಲ್ಲ ಪರಮೇಶ್ವರ ಬೇಸರವನ್ನು ಹೊರಹಾಕಿದ್ದಾರಂತೆ. ಇನ್ನೂ ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಪರಮೇಶ್ವರ್ ನಿವಾಸಕ್ಕೆ ಧಾವಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಪರಂ ಮನವೊಲಿಸುವ ಪ್ರಯತ್ನವನ್ನು ಆರಂಭಿಸಿದ್ದಾರಂತೆ.ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರ ದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದ ಸುರ್ಜೇವಾಲಾ ಡಿಕೆಶಿ ಹಾಗೂ ಸಿದ್ಧರಾಮಯ್ಯನವರ ಬಳಿ ಮಾತನಾಡಿ ಎಲ್ಲ ರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸೂಚಿಸುವುದಾಗಿ ಭರವಸೆ ನೀಡಿದ್ದಾರಂತೆ.

ಇದನ್ನೂ ಓದಿ : DK Shivakumar vs Ramesh Jarakiholi : ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ಸಿಬಿಐ ಅಸ್ತ್ರ : ಬಿಜೆಪಿ ಹೈಕಮಾಂಡ್ ಮೊರೆ ಹೋದ ರಮೇಶ ಜಾರಕಿಹೊಳಿ

ಇದನ್ನೂ ಓದಿ : President Draupadi Murmu: ಮುಂಬರುವ ವರ್ಷಗಳು ಸುವರ್ಣಯುಗವಾಗಲಿ: ದ್ರೌಪದಿ ಮುರ್ಮು

ಇದನ್ನೂ ಓದಿ : CM Jagan Mohan Reddy : ಆಂಧ್ರಪ್ರದೇಶದ ರಾಜಧಾನಿ ವಿಶಾಖಪಟ್ಟಣಂ : ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಇನ್ನೊಂದೆಡೆ ಪರೋಕ್ಷವಾಗಿ ಪರಂ ಬೆಂಬಲಕ್ಕೆ ನಿಂತಿರೋ ಖರ್ಗೆ, ಸಿದ್ಧು, ಡಿಕೆಶಿಗೆ ಪರ್ಯಾಯವಾಗಿ ಪರಂರನ್ನು ಬೆಳೆಸುವ ಉದ್ದೇಶದಿಂದ ದಲಿತ ಮತಗಳು ಹಾಗೂ ಶಾಸಕರ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸುವಂತೆಯೂ ಸೂಚನೆ ನೀಡಿದ್ದಾರಂತೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಈಗ ಗುಂಪುಗಾರಿಕೆಯ ಪ್ರಮಾಣ ಮತ್ತಷ್ಟು ಹೆಚ್ಚುವ ಮುನ್ಸೂಚನೆ ದಟ್ಟವಾಗಿದೆ.

Former President of KPCC: Another dissension in Congress: Parameshwar displeased with DK Shivkumar, Siddaramaiah

Comments are closed.