ವಿಜಯಪುರ : ಮಾಜಿ ಸಚಿವರ ರಾಸಲೀಲೆ ಪ್ರಕರಣದ ಸಂತ್ರಸ್ತ ಯುವತಿಯ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿಯ ತಾಯಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ. ಓರ್ವ ಮಹಿಳಾ ಪೊಲೀಸ್ ಪೇದೆ ಹಾಗೂ ಓರ್ವ ಕಾನ್ಸಸ್ಟೇಬಲ್ ನಿಂದ ಭದ್ರತೆ ನೀಡಲಾಗಿದೆ.
ಬೆಳಗಾವಿಯಿಂದ ಇತ್ತೀಚಿಗಷ್ಟೇ ಸಂತ್ರಸ್ತ ಯುವತಿಯ ಕುಟುಂಬ ವಿಜಯಪುರಕ್ಕೆ ಶಿಫ್ಟ್ ಆಗಿತ್ತು. ಕುಟುಂಬ ಸದಸ್ಯರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿ ದ್ದು, ಯುವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆ ಎದುರಿಸುತ್ತಿದ್ದಾರೆ.