ಸಿಂಗರ್ ಆದ್ರು ಸ್ಯಾಂಡಲ್ ವುಡ್ ನಟಿ ಪುತ್ರಿ…! ಶೃತಿ ಮಗಳ ಕಂಠಸಿರಿಗೆ ಮಾರುಹೋದ ಅಭಿಮಾನಿಗಳು…!!

ಕಣ್ಣೀರು ಸುರಿಸುವ ಪಾತ್ರಗಳ ಮೂಲಕವೇ ಕನ್ನಡದ ಎದೆಯಲ್ಲಿ ಸ್ಥಾನ ಪಡೆದ ನಟಿ ಶ್ರುತಿ ಈಗಲೂ ಪೋಷಕ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಈಗ ಶೃತಿ ಮಗಳು ಇತ್ತೀಚಿನ ಕನ್ನಡ ಸಿನಿಮಾ ರಾಬರ್ಟ್ ಸಿನಿಮಾದ ಹಿಟ್ ಸಾಂಗ್ ಹಾಡೋ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಮಂಗ್ಲಿಯಂತಹ ತೆರೆಮರೆಯ ಗಾಯಕಿಗೆ ಹೆಸರು ತಂದುಕೊಟ್ಟ ಕಣ್ಣೇ ಅದಿರಿಂದಿ ಹಾಡನ್ನು ಅಷ್ಟೇ ಸುಂದರವಾಗಿ ಹಾಡುವ ಮೂಲಕ ನಟಿ ಶ್ರುತಿ ಪುತ್ರಿ ಗೌರಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.  ಕಪ್ಪು ಬಣ್ಣದ ಮಾಡರ್ನ್ ಧಿರಿಸಿನಲ್ಲಿ ಗೌರಿ ಪ್ರೊಪೆಶನಲ್ ಸಿಂಗರ್ಸ್ ಅಷ್ಟೇ ಸ್ಪಷ್ಟ ಹಾಗೂ ಸುಂದರವಾಗಿ ಕಣ್ಣೇ ಅದಿರಿಂದಿ ಎಂದು ಹಾಡಿದ್ದಾರೆ.

https://www.youtube.com/watch?v=zYTmS9nz4vQ

45 ಸೆಕೆಂಡ್ ವಿಡಿಯೋ ಮಾತ್ರ ವೈರಲ್ ಆಗಿದ್ದು, ಜನರು ಅಬ್ಬಾ ಶ್ರುತಿ ಮಗಳು ಇಷ್ಟು ಚೆನ್ನಾಗಿ ಹಾಡ್ತಾಳಾ ಅಂತ ಹುಬ್ಬೇರಿಸುತ್ತಿದ್ದಾರೆ. ಇಷ್ಟಕ್ಕೂ ಗೌರಿ ಹಾಡ್ತಿರೋದು ಇದೇ ಮೊದಲಲ್ಲ. ಶಾಸ್ತ್ರೀಯವಾಗಿ ಸಂಗೀತ ಕಲಿತಿರೋ  ಗೌರಿ ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡುಗಳನ್ನು ಹೇಳಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತ್ತಿರುವ ಗೌರಿ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಹಾಡಿನ ಮೂಲಕ ಜನರ ಮುಂದೇ ಬಂದಿದ್ದಾರೆ. ಇಷ್ಟೇ ಅಲ್ಲ ಗೌರಿಗೆ ನಟನೆಯಲ್ಲೂ ಆಸಕ್ತಿ ಇದ್ದು, ಅವರಿಗೆ ಇಷ್ಟವಾಗುವಂತ ಅವಕಾಶ ಸಿಕ್ಕರೇ ಅವರು ನಟನೆಗೂ ಸಿದ್ಧವಂತೆ.

ಈ ಹಿಂದೆಯೇ ಶ್ರುತಿ ಮಗಳು ಸಿನಿಮಾ ಇಂಡಸ್ಟ್ರಿಗೆ ಬರುತ್ತಾರೆ ಅನ್ನೋ ಮಾತಿತ್ತು.

ಈ ಮಾತಿಗೆ ಶ್ರುತಿ ಕೂಡ ಪ್ರತಿಕ್ರಿಯೆ ನೀಡಿದ್ದು, ಆಕೆ ತನ್ನ ಬದುಕಿನ ಆಯ್ಕೆಗೆ ಸ್ವತಂತ್ರಳು. ಆಸಕ್ತಿ ಇದ್ದರೇ  ನಟನೆಗೆ ಬರಲಿ. ನಾನು ಆಕೆಯನ್ನು ಯಾವುದಕ್ಕೂ ಒತ್ತಾಯಿಸುವುದಿಲ್ಲ ಎಂದಿದ್ದಾರೆ.

ಕಣ್ಣೇ ಅದಿರಿಂದಿ ಹಾಡು ಸದ್ಯ ಸಾಕಷ್ಟು ಟ್ರೆಂಡ್ ಸೃಷ್ಟಿಸಿದ್ದು, ಜನರು ಇಷ್ಟಪಡುತ್ತಿದ್ದಾರೆ.

ಆ ಹಾಡಿನ ಮೂಲಕ ಈಗ ಗೌರಿ ಕೂಡ ಮುನ್ನಲೆಗೆ ಬಂದಿದ್ದಾರೆ. ನಟನೆಗೂ ಬರ್ತಾರೋ ಇಲ್ವೋ ಆದರೆ ಗೌರಿಗೆ ಮಧುರ ಗಾಯನಕ್ಕೆ  ಮುಂದಿನ ದಿನಗಳಲ್ಲಿ  ಸಿನಿಮಾ ಸಿಂಗಿಂಗ್ ಆಫರ್ ಬಂದ್ರೇ ಅಚ್ಚರಿ ಪಡಬೇಕಿಲ್ಲ.

Comments are closed.