Karnataka CM : ರಾಹುಲ್‌ ಸಂಧಾನ ವಿಫಲ, ಸಭೆಯಿಂದ ಹೊರ ನಡೆದ ಡಿಕೆ ಶಿವಕುಮಾರ್

ನವದೆಹಲಿ : ಕರ್ನಾಟಕದ ಮುಖ್ಯಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Karnataka CM) ಹೆಸರು ಬಹುತೇಕ ಘೋಷಣೆ ಆಗುವ ಸಾಧ್ಯತೆಯಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕುಮಾರ್‌ ಸಿಎಂ ಸ್ಥಾನದ (Chief Minister of Karnataka) ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಡಿಕೆ ಶಿವಕುಮಾರ್‌ ಜೊತೆಗೆ ಸುಮಾರು ಒಂದು ಗಂಟೆಗಳಿಗೂ ಅಧಿಕ ಕಾಲ ಸಂಧಾನ ಸಭೆ ನಡೆಸಿದ್ದಾರೆ. ಆದರೆ ರಾಹುಲ್‌ ಗಾಂಧಿ ಅವರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಡಿಕೆ ಶಿವಕುಮಾರ್‌ ಸಂಧಾನ ಸಭೆಯಿಂದ ಹೊರ ನಡೆಸಿದ್ದಾರೆ.

ಡಿಕೆ ಶಿವಕುಮಾರ್ ಹಾಗೂ ‌ ಸಿದ್ದರಾಮಯ್ಯ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಸಿದ್ದರಾಮಯ್ಯ ರಾಹುಲ್‌ ಭೇಟಿಯ ನಂತರ ಸಿಎಂ ಸ್ಥಾನ ಖಚಿತ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ರಾಹುಲ್‌ ಜೊತೆ ಸಭೆ ನಡೆಸಿದ ಡಿಕೆ ಶಿವಕುಮಾರ್‌ ಮುಗಿಸಿಕೊಂಡು ಮನೆಯಿಂದ ಹೊರ ನಡೆಸಿದ್ದಾರೆ. ಅಲ್ಲಿಂದ ನೇರವಾಗಿ ಮಲ್ಲಿಕಾರ್ಜುನ್‌ ಖರ್ಗೆ ಅವರ ನಿವಾಸಕ್ಕೆ ತೆರಳಿ ಡಿಕೆ ಶಿವಕುಮಾರ್‌ ಅವರು ತನ್ನ ಬೇಡಿಕೆಯನ್ನು ಖರ್ಗೆ ಅವರ ಮುಂದೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಿಎಂ ಆಗಬಾರದು. ನನಗೆ ಸಿಎಂ ಸ್ಥಾನ ನೀಡದೇ ಇದ್ರೆ ನೀವು ನೀವು ಸಿಎಂ ಆಗಿ ಎಂದು ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಡಿಕೆಶಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರು ಸಿಎಂ ಆಗಲಿದ್ದಾರೆ. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಹಾಗೂ ಇನ್ನುಳಿದ ಎರಡೂವರೆ ವರ್ಷಗಳ ಕಾಲ ಡಿಕೆ ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಲಿದ್ದಾರೆ. ಅದರಲ್ಲೂ ಹೈಕಮಾಂಡ್‌ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯನಿಗೆ ನೀಡುವ ಹಾಗೆ ಕಾಣುತ್ತಿದೆ.

ಇದನ್ನೂ ಓದಿ : ಅಕ್ರಮ ಆಸ್ತಿ ಪ್ರಕರಣ : ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ಇದನ್ನೂ ಓದಿ : ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದ ಮಾಜಿ ಸಚಿವ ಸುಧಾಕರ್‌

ಹೀಗಾಗಿ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯನಿಗೆ ಅಧಿಕಾರ ನೀಡಲು ಸಿದ್ದವಿರುವುದರಿಂದಲೋ ಏನೋ ಡಿಕೆ ಶಿವಕುಮಾರ್‌ ತಮ್ಮ ಮುನಿಸನ್ನು ತೋರಿಸಿಕೊಂಡಿದ್ದಾರೆ. ಅದರೆ ಇದು ಹೈಕಮಾಂಡ್‌ನ ಅಂತಿಮ ತೀರ್ಮಾನ ಆಗುವುದಿಲ್ಲ. ಯಾಕೆಂದರೆ ಸಂಜೆಯವರೆಗೂ ಸಮಯ ಇರುತ್ತದೆ. ಹೀಗಾಗಿ ಹೈಕಮಾಂಡ್‌ ಯಾವ ರೀತಿಯಲ್ಲಿ ಅಧಿಕಾರ ಹಂಚಿಕೆ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ವಿಧಾನಸೌಧದ ಅಂಗಳದಲ್ಲೇ ಇದ್ಯಾ ಸರಕಾರದ ಅವಧಿ ನಿರ್ಧರಿಸೋ ಶಕ್ತಿ: ಇದು ರಾಜಕಾರಣದ EXCLUSIVE STORY

Chief Minister of Karnataka : Karnataka CM : Rahul talks failed, DK Shivakumar walked out of the meeting

Comments are closed.