ಮಂಗಳವಾರ, ಏಪ್ರಿಲ್ 29, 2025
Homekarnatakacloud burst in amaranth : ಅಮರನಾಥದಲ್ಲಿ ಮೇಘಸ್ಫೋಟ : ಶಿವಮೊಗ್ಗದ ಮಹಿಳೆಯರು, ಮೈಸೂರಿನ ವಕೀಲರ...

cloud burst in amaranth : ಅಮರನಾಥದಲ್ಲಿ ಮೇಘಸ್ಫೋಟ : ಶಿವಮೊಗ್ಗದ ಮಹಿಳೆಯರು, ಮೈಸೂರಿನ ವಕೀಲರ ತಂಡ ಸುರಕ್ಷಿತ

- Advertisement -

ಶಿವಮೊಗ್ಗ/ಮೈಸೂರು/ಬೀದರ್​ : cloud burst in amaranth : ದಕ್ಷಿಣ ಕಾಶ್ಮೀರದ ಅಮರನಾಥ ಗುಹೆ ಬಳಿ ನಿನ್ನೆ ಸಂಜೆ 5:30ರ ಸುಮಾರಿಗೆ ಉಂಟಾದ ಮೇಘಸ್ಫೋಟ ಅನೇಕ ಯಾತ್ರಾರ್ಥಿಗಳ ಜೀವವನ್ನು ಬಲಿ ಪಡೆದಿದೆ. ಗುಹೆಯ ಬಳಿ ಒಂದೇ ಸಮನೆ ನೀರು ನುಗ್ಗುತ್ತಿದ್ದಂತೆಯೇ ಅಮರನಾಥ ಗುಹೆಯ ಬಳಿ ಇದ್ದ ಲಂಗರ್​ಗಳು ಹಾಗೂ ಟೆಂಟ್​ಗಳು ಕೊಚ್ಚಿ ಹೋಗಿವೆ. ಈಗಾಗಲೇ ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದ ಯಾತ್ರಾರ್ಥಿಗಳ ಪೈಕಿ 16 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.

ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಜ್ಯದ ಅನೇಕ ಯಾತ್ರಾರ್ಥಿಗಳು ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನಿಂದ ಅಮರನಾಥ ಗುಹೆಗೆ ತೆರಳಿದ್ದ ವಕೀಲರ ತಂಡ ಸುರಕ್ಷಿತವಾಗಿದೆ. ಇತ್ತ ಶಿವಮೊಗ್ಗ 16 ಮಂದಿ ಮಹಿಳೆಯರ ತಂಡ ಕೂಡ ಪ್ರವಾಹದಿಂದ ಪಾರಾಗಿದ್ದು ಶೀಘ್ರದಲ್ಲಿಯೇ ರಾಜ್ಯಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಬೀದರ್​ನ ಯುವಕರ ತಂಡ ಕೂಡ ತಾವಿಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂಬ ಸಂದೇಶವನ್ನು ಕಳಿಸಿದ್ದಾರೆ.


ಅಮರನಾಥದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕೂಡ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳುತ್ತಿದೆ. ದಕ್ಷಿಣ ಕಾಶ್ಮೀರದ ಅಧಿಕಾರಿಗೊಂದಿಗೆ ಸಂಪರ್ಕ ಸಾಧಿಸಿರುವ ಕರ್ನಾಟಕ ಕನ್ನಡಿಗ ಯಾತ್ರಾರ್ಥಿಗಳ ಬಗ್ಗೆ ಇಂಚಿಂಚೂ ಮಾಹಿತಿ ಪಡೆಯುತ್ತಿದೆ ಎನ್ನಲಾಗಿದೆ. ಮಾತ್ರವಲ್ಲದೇ ಅಮರನಾಥ ಗುಹೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರವು 080-1070, 22340676 ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದೆ.

ಇದನ್ನು ಓದಿ : amarnath yatra : ಅಮರನಾಥ ಗುಹೆಯಲ್ಲಿ ಮೇಘಸ್ಫೋಟ : ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ

ಇದನ್ನೂ ಓದಿ : Vikram Is Fine : ತಮಿಳು ನಟ ವಿಕ್ರಮ್​ಗೆ ಹೃದಯಾಘಾತವಾಗಿಲ್ಲ : ವದಂತಿಗಳಿಗೆ ಕಿವಿಗೊಡಬೇಡಿ ಎಂದ ಮ್ಯಾನೇಜರ್​

ಇದನ್ನೂ ಓದಿ : Mad Dog Bitten : ಕೋಟದಲ್ಲಿ ಹುಚ್ಚುನಾಯಿ ಭೀತಿ : ಹತ್ತಕ್ಕೂ ಅಧಿಕ ಮಂದಿಗೆ ಕಚ್ಚಿದ ನಾಯಿ

ಇದನ್ನೂ ಓದಿ : ಇಂದಿರಾ ಆಗಿ ತೆರೆಗೆ ಬಂದ ಅನಿತಾ ಭಟ್‌ : Voot Select ನಲ್ಲಿ ರಿಲೀಸ್‌

cloud burst in amaranth devotees from Karnataka are safe

RELATED ARTICLES

Most Popular