elon musk : ಟ್ವಿಟರ್​ ಖರೀದಿಯಿಂದ ಹಿಂದೆ ಸರಿದ ಎಲಾನ್​ ಮಸ್ಕ್​ : ಕಾನೂನು ಸಮರಕ್ಕೆ ಮುಂದಾದ ಟ್ವಿಟರ್​​

ಕ್ಯಾಲಿಫೋರ್ನಿಯಾ : elon musk : ಸಾಮಾಜಿಕ ಮಾಧ್ಯಮದ ಬಹುದೊಡ್ಡ ವೇದಿಕೆ ಟ್ವಿಟರ್​​ನ್ನು ಖರೀದಿ ಮಾಡುತ್ತೇನೆಂದು ಹೇಳಿದ್ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್ ಸೂಕ್ತವಾದ ಮಾಹಿತಿಯನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಟೆಸ್ಲಾ ಕಂಪನಿ ಮಾಲೀಕ ತನ್ನ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ (elon musk abandons deal ) ಎಂದು ಹೇಳಲಾಗುತ್ತಿದೆ.

ಹೂಡಿಕೆದಾರರ ಕಂಪನಿಯಾಗಿದ್ದ ಟ್ವಿಟರ್​ನನ್ನು ಖರೀದಿ ಮಾಡಿ ಖಾಸಗಿ ಕಂಪನಿಯನ್ನಾಗಿ ಮಾಡಲು ಹೊರಟಿದ್ದ ಎಲಾನ್​ ಮಸ್ಕ್​​ 3.52 ಲಕ್ಷ ಕೋಟಿ ರೂಪಾಯಿಗಳನ್ನು ನೀಡಿ ಟ್ವಿಟರ್​ ಖರೀದಿ ಮಾಡುವವರಿದ್ದರು. ಆದರೆ ನಕಲಿ ಖಾತೆಗಳ ವಿಚಾರವಾಗಿಯೇ ತಮ್ಮ ನಿರ್ಧಾರವನ್ನು ತಡೆ ಹಿಡಿದಿದ್ದರು. ಆದರೆ ಇದೀಗ ತಾವು ಟ್ವಿಟರ್​ ಕಂಪನಿಯನ್ನು ಖರೀದಿ ಮಾಡುತ್ತಿಲ್ಲ ಎಂಬ ನಿರ್ಧಾರವನ್ನು ಸ್ಪಷ್ಟವಾಗಿ ಘೋಷಣೆ ಮಾಡಿದ್ದಾರೆ. ಇತ್ತ ಟ್ವಿಟರ್​​ ಎಲಾನ್​ ಮಸ್ಕ್​ ವಿರುದ್ಧ ಬಹುದೊಡ್ಡ ಮಟ್ಟದಲ್ಲಿ ಕಾನೂನು ಹೋರಾಟಕ್ಕೆ ಅಣಿಯಾಗ್ತಿದೆ ಎಂದು ಹೇಳಲಾಗುತ್ತಿದೆ.

ಟ್ವಿಟರ್​ ಖರೀದಿಯ ಮಾತುಕತೆಗೆ ಎಲಾನ್​ ಮಸ್ಕ್​ ಮುಂದಾಗಿದ್ದ ಸಂದರ್ಭದಲ್ಲಿ ಕಂಪನಿಯು ಒಂದು ವೇಳೆ ಮಸ್ಕ್​ ಈ ಕಂಪನಿಯನ್ನು ಖರೀದಿ ಮಾಡುವ ನಿರ್ಧಾರವನ್ನು ರದ್ದುಗೊಳಿಸಿದಲ್ಲಿ 1 ಶತಕೋಟಿ ರೂಪಾಯಿಗಳನ್ನು ಬ್ರೇಕಪ್​ ಫೀ ರೂಪದಲ್ಲಿ ನೀಡಬೇಕು ಎಂಬ ಒಪ್ಪಂದವಾಗಿತ್ತಯ. ಹೀಗಾಗಿ ಈ ಒಪ್ಪಂದದ ಅಡಿಯಲ್ಲಿ ಟ್ವಿಟರ್​ ಇದೀಗ ಎಲಾನ್​ ಮಸ್ಕ್​ ವಿರುದ್ಧ ಕಾನೂನು ಸಮರ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಅಥವಾ ಎಲಾನ್​ ಮಸ್ಕ್​ ಟ್ವಿಟರ್ ಖರೀದಿ ಮಾಡಲೇಬೇಕು ಎಂದು ಕಂಪನಿಯು ಪಟ್ಟು ಹಿಡಿಯುವ ಸಾಧ್ಯತೆ ಕೂಡ ಇದೆ.

ಟ್ವಿಟರ್​ ಕಂಪನಿಗೆ ಎಲಾನ್​ ಮಸ್ಕ್​ ಪರ ವಕೀಲ ಮೈಕ್​ ರಿಂಗ್ಲರ್​ ಪತ್ರವನ್ನು ಬರೆದಿದ್ದು ನನ್ನ ಕಕ್ಷಿದಾರ ಸುಮಾರು 2 ತಿಂಗಳ ಹಿಂದೆಯೇ ಟ್ವಿಟರ್​ ಕಂಪನಿ ಬಳಿ ನಕಲಿ ಖಾತೆಗಳ ಬಗ್ಗೆ ವಿವರಣೆ ನೀಡುವಂತೆ ಕೇಳಿದ್ದಾರೆ. ಆದರೆ ಈ ಮಾಹಿತಿಯನ್ನು ನೀಡಲು ಟ್ವಿಟರ್​ ವಿಫಲವಾಗಿದೆ ಅಥವಾ ನಿರಾಕರಿಸಿದೆ. ಈ ಮೂಲಕ ಟ್ವಿಟರ್​ ಎಲಾನ್​ ಮಸ್ಕ್​​ರ ಕೋರಿಕೆಯನ್ನು ನಿರ್ಲಕ್ಷಿಸಿದಂತಾಗಿದೆ. ಹೀಗಾಗಿ ಈ ಶತಕೋಟಿ ಡಾಲರ್​ ಮಾರಾಟದ ಒಪ್ಪಂದವನ್ನು ರದ್ದು ಮಾಡಲಾಗ್ತಿದೆ ಎಂದು ಬರೆದಿದ್ದಾರೆ.

ಇದನ್ನು ಓದಿ : Vikram Is Fine : ತಮಿಳು ನಟ ವಿಕ್ರಮ್​ಗೆ ಹೃದಯಾಘಾತವಾಗಿಲ್ಲ : ವದಂತಿಗಳಿಗೆ ಕಿವಿಗೊಡಬೇಡಿ ಎಂದ ಮ್ಯಾನೇಜರ್​

ಇದನ್ನೂ ಓದಿ : amarnath yatra : ಅಮರನಾಥ ಗುಹೆಯಲ್ಲಿ ಮೇಘಸ್ಫೋಟ : ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ

twitter says it will sue tesla ceo to enforce usd 44 billion deal as elon musk abandons deal to buy twitter

Comments are closed.