ಭಾನುವಾರ, ಏಪ್ರಿಲ್ 27, 2025
HomekarnatakaCM Bommai : ಅಗತ್ಯ ಎನಿಸಿದಲ್ಲಿ ಉತ್ತರ ಪ್ರದೇಶ ಮಾಡೆಲ್​ ಕರ್ನಾಟಕದಲ್ಲಿ : ಎಚ್ಚರಿಕೆ ನೀಡಿದ...

CM Bommai : ಅಗತ್ಯ ಎನಿಸಿದಲ್ಲಿ ಉತ್ತರ ಪ್ರದೇಶ ಮಾಡೆಲ್​ ಕರ್ನಾಟಕದಲ್ಲಿ : ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ

- Advertisement -

ಬೆಂಗಳೂರು : CM Bommai : ಕರಾವಳಿಯಲ್ಲಿ ಹರಿದ ಹಿಂದೂ ಯುವಕನ ನೆತ್ತರು ಬಿಜೆಪಿ ಸರ್ಕಾರದ ಆಡಳಿತವನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ರಾಜ್ಯದಲ್ಲಿ ಇಂತಹ ಹೇಯ ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ಇಲ್ಲಿನ ಕಾನೂನುಗಳ ಬಗ್ಗೆ ಭಯವೇ ಇಲ್ಲವೇ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ಈ ವಿಚಾರವಾಗಿ ಇಂದು ಮಾತನಾಡಿದ ಸಿಎಂ ಬೊಮ್ಮಾಯಿ ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್​ ಮಾಡೆಲ್​ ( Yogi model ) ಕರ್ನಾಟಕಕ್ಕೂ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಆರೋಪಿಗಳ ಮನೆಯನ್ನು ಬುಲ್ಡೋಜರ್​ನಿಂದ ನೆಲಸಮ ಮಾಡುವಂತಹ ವಿವಿಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್​ ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಕಾರ್ಯ ಮಾಡ್ತಿದ್ದಾರೆ, ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಕೂಡ ರಾಜ್ಯದಲ್ಲಿ ಇಂತದ್ದೇ ಮಾದರಿಯ ಕಠಿಣ ಕಾನೂನುಗಳು ಜಾರಿಗೆ ಬರಲಿವೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ.

ಬೊಮ್ಮಾಯಿ ನೇತೃತ್ವದ ಸರ್ಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನಾ ಸಂಭಾಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಮುಂದೆ ಕೋಮು ಗಲಭೆಯನ್ನು ಹತ್ತಿಕ್ಕಬೇಕಾದ ಸವಾಲಿದೆ. ರಾಜ್ಯದಲ್ಲಿ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ಈ ಪ್ರಕರಣ ಸಂಬಂಧ ತನಿಖೆಗೆ ಕೇರಳಕ್ಕೂ ರಾಜ್ಯದ ಪೊಲೀಸರನ್ನು ಕಳುಹಿಸಿದ್ದೇವೆ. ಅಲ್ಲದೇ ಹತ್ಯೆ ಪ್ರಕರಣದ ತನಿಖೆ ನಡೆಸಲು ಐದು ಪೊಲೀಸ್​ ತಂಡವನ್ನು ರಚಿಸಲಾಗಿದೆ. ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟಿದಂತೆಯೇ ಪ್ರವೀಣ್ ಕೊಟ್ಟಾರು ಕೊಲೆ ಪ್ರಕರಣದ ಆರೋಪಿಗಳನ್ನೂ ಹೆಡೆಮುರಿ ಕಟ್ಟುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ ಎಂದು ಹೇಳಿದ್ದಾರೆ .

ಇದನ್ನು ಓದಿ : Kota Srinivasa Pujari : ಪ್ರವೀಣ್​ ನೆಟ್ಟಾರು ಮನೆ ಕಡೆ ಮುಖ ಮಾಡದ ಕೋಟ ಶ್ರೀನಿವಾಸ ಪೂಜಾರಿ : ತನ್ನದೇ ಸಮುದಾಯದ ಯುವಕನ ಸಾವಿಗೆ ಇದೆಂಥಾ ಬೆಲೆ

ಇದನ್ನೂ ಓದಿ : BIG BREAKING : ಪ್ರವೀಣ್‌ ಹತ್ಯೆ ಪ್ರಕರಣ : ಮೊಹಮ್ಮದ್‌ ಶಫೀಕ್‌, ಜಾಕೀರ್‌ ಬಂಧನ

CM Bommai said that Yogi model measures will be implemented in Karnataka too if necessary

RELATED ARTICLES

Most Popular