ಹೈಕಮಾಂಡ್ ಗೆ ಸಿದ್ದರಾಮಯ್ಯ ಬಿಟ್ರಾ ಬ್ರಹ್ಮಾಸ್ತ್ರ: ಹರಿಪ್ರಸಾದ್ ಗೆ ನೋಟಿಸ್ ಜಾರಿಯಾಗಿದ್ಹೇಗೆ ?

ಸಿಎಂ ಸಿದ್ಧರಾಮಯ್ಯ (Chief Minister Siddaramaiah ) ಅವರ ವಿರುದ್ಧ ತೊಡೆ ತಟ್ಟಿದ ಒಂದೇ ಕಾರಣಕ್ಕೆ ವಿಧಾನ ಪರಿಷತ್ ಸದಸ್ಯ (MLC)  ಹಾಗೂ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್ (BK Hariprasad ) ವಿರುದ್ಧ ಹೈಕಮಾಂಡ್ ಗರಂ ಆಗಿದ್ದು, ಶೋಕಾಸ್ ನೊಟೀಸ್ (Shokas notice ) ಕೂಡ ಜಾರಿಯಾಗಿದೆ.

ಬೆಂಗಳೂರು : ಕಾಂಗ್ರೆಸ್ ನಲ್ಲಿ ಪಕ್ಷದ ಚೌಕಟ್ಟು ಮೀರಿ ಮಾತನಾಡುವ ಸಂಪ್ರದಾಯ ಹಿಂದಿನಿಂದಲೂ ಇದೆ. ಆದರೆ ಯಾರ ಮೇಲೂ ತಕ್ಷಣಕ್ಕೆ ಅಥವಾ ನಿಧಾನವಾಗಿ ಯಾವುದೇ ಗಂಭೀರ ಕ್ರಮವಾದ ಉದಾಹರಣೆ ಇಲ್ಲ. ಆದರೆ ಈ ಭಾರಿ ಮಾತ್ರ ಲೆಕ್ಕಾಚಾರದ ಹದ ಬದಲಾದಂತಿದ್ದು, ಸಿಎಂ ಸಿದ್ಧರಾಮಯ್ಯ (Chief Minister Siddaramaiah ) ಅವರ ವಿರುದ್ಧ ತೊಡೆ ತಟ್ಟಿದ ಒಂದೇ ಕಾರಣಕ್ಕೆ ವಿಧಾನ ಪರಿಷತ್ ಸದಸ್ಯ (MLC)  ಹಾಗೂ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್ (BK Hariprasad ) ವಿರುದ್ಧ ಹೈಕಮಾಂಡ್ ಗರಂ ಆಗಿದ್ದು, ಶೋಕಾಸ್ ನೊಟೀಸ್ (Shokas notice ) ಕೂಡ ಜಾರಿಯಾಗಿದೆ.

ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ( DK Shivakumar) ಬಣ ಕಾಂಗ್ರೆಸ್ ನಲ್ಲಿರೋದು ಎಷ್ಟು ನಿಜವೋ ಅಷ್ಟೇ ಸತ್ಯವಾಗಿರೋದು ಸಿದ್ಧರಾಮಯ್ಯನವರನ್ನು ದ್ವೇಷಿಸುವ ಇನ್ನೊಂದಿಷ್ಟು ಜನರು ಕಾಂಗ್ರೆಸ್ ನಲ್ಲಿದ್ದಾರೆ ಅನ್ನೋದು. ಅದರಲ್ಲಿ ಬಹುತೇಕರಿಗೆ ಸ್ಥಾನಮಾನ ಸಿಗಲಿಲ್ಲ ಅನ್ನೋದೇ ಮೊದಲ ಅಸಮಧಾನ.‌ ಇಂಥ ಅಸಮಾಧಾನಿತರ ಪೈಕಿ ಮೊದಲ ಸ್ಥಾನದಲ್ಲಿರೋದು ಹಿರಿಯ ಕಾಂಗ್ರೆಸ್ಸಿಗ, ಮಾಜಿ ರಾಜ್ಯ ಸಭಾ ಸದಸ್ಯ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಬಿ.ಕೆ. ಹರಿಪ್ರಸಾದ್ ಇತ್ತೀಚಿಗೆ ಸಿದ್ಧರಾಮಯ್ಯನವರ ವಿರುದ್ಧ ಸಮರ ಸಾರಿದ್ದರು. ಮಾತ್ರವಲ್ಲ‌ ಪರೋಕ್ಷ ವಾಗಿ ಸಿದ್ಧರಾಮಯ್ಯನವರು ಬಿಜೆಪಿಯ ಬಾಗಿಲನ್ನು ತಟ್ಟಿದ್ದರು ಎಂಬರ್ಥದಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಸಿಎಂ ಸಿದ್ಧರಾಮಯ್ಯನವರು ಕೆಂಡಾಮಂಡಲರಾಗಿದ್ದಾರೆ‌.

CM Siddaramaiah Presure to Congress High Command How was the notice issued to BK Hariprasad
Image Credit To Original Source

40 ವರ್ಷಗಳ ಸುಧೀರ್ಘ ರಾಜಕೀಯ ಬದುಕಿನಲ್ಲಿ ನಾನು ಯಾರಿಂದಲೂ ಒಂದು ಕಪ್ಪು ಚುಕ್ಕೆಯಾಗಬಲ್ಲ ಆರೋಪಗಳನ್ನು ಸ್ವೀಕರಿಸಿಲ್ಲ. ಆದರೆ ಬಿ.ಕೆ.ಹರಿಪ್ರಸಾದ್ ಈಗ ನಾನು ಬಿಜೆಪಿಗೆ ಸೇರಬಯಸಿದ್ದೇ ಎಂಬರ್ಥದಲ್ಲಿ ಮಾತನಾಡಿದ್ದಾರೆ‌. ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಇದು ವಿಪಕ್ಷಗಳಿಗೆ ಅಸ್ತ್ರ ಒದಗಿಸಿದೆ. ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳಲ್ಲಿ ನೆಗೆಟಿವ್ ಪ್ರಚಾರವಾಗಿದೆ. ಈ ಮಾತುಗಳು ಮತದಾರರ ಮೇಲೂ ಪರಿಣಾಮ ಬೀರುತ್ತದೆ.

ಲೋಕಸಭೆ ಚುನಾವಣೆ (Loka Sabha Election) ಸಂದರ್ಭದಲ್ಲಿ ಪಕ್ಷನಿಷ್ಟೆ ಎಂದು ಹೇಳುವ ಹರಿಪ್ರಸಾದ್ ಹೇಳಿಕೆ ಪಕ್ಷಕ್ಕೆ ಮುಜುಗರ ಮತ್ತು ಡ್ಯಾಮೇಜ್ ಆಗಿದೆ. ನನ್ನ ತೇಜೋವಧೆ ಸಹಿಸೋದಿಲ್ಲ. ಹರಿಪ್ರಸಾದ್ ಬಾಯಿ ಬಂದ್ ಮಾಡಿ.ಕ್ರಮ ಕೈಗೊಳ್ಳಿ.ಒಂದು ವಾರದೊಳಗೆ ನನಗೆ ರಿಸಲ್ಟ್ ಬೇಕು.ಕ್ರಮ ಕೈಗೊಳ್ಳದಿದ್ದರೆ ಹೈಕಮಾಂಡ್ ಮೇಲೆ ಸಂಶಯ ಮೂಡಲಿದೆ ಎಂದು ನೇರವಾಗಿ ಸಿದ್ಧರಾಮಯ್ಯನವರು ರಾಹುಲ್‌ಗಾಂಧಿ (Rahul Gandhi) ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರಂತೆ.

ಇದನ್ನೂ ಓದಿ : ಸುನಿಲ್‌ ಕನುಗೋಳ್ ಸಮೀಕ್ಷೆಯಲ್ಲಿ ಪಾಸಾದ್ರೆ ಟಿಕೇಟ್: ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೈಕಮಾಂಡ್ ಶಾಕ್

ಈ ಎಚ್ಚರಿಕೆಯ ಜೊತೆಗೆ‌ ಸಿದ್ಧರಾಮಯ್ಯ ಒಂದೊಮ್ಮೆ ಬಿ.ಕೆ.ಹರಿಪ್ರಸಾದ್ ಮಾತಿಗೆ ಕಡಿವಾಣ ಹಾಕದಿದ್ದರೇ ಏನಾಗುತ್ತೆ ಅನ್ನೋ ಎಚ್ಚರಿಕೆಯನ್ನು ನೀಡಿದ್ದಾರೆ. ನಾನು ಸುಮ್ಮನಿರುತ್ತೇನೆ.ಆದರೆ ನನ್ನ ಅಭಿಮಾನಿಗಳು, ನನ್ನ ಪರವಾಗಿರೋ ನಾಯಕರು, ಶಾಸಕರು, ಮಂತ್ರಿಗಳು ಮಾತನಾಡಲು ಆರಂಭಿಸಲಿದ್ದಾರೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಕೆ ಸಿ ವೇಣುಗೋಪಾಲ್ ಜೊತೆ ಖಡಕ್ ಆಗಿ ಮಾತನಾಡಿದ್ದಾರೆ‌.

CM Siddaramaiah Presure to Congress High Command How was the notice issued to BK Hariprasad
Image Credit To Original Source

ಸಿದ್ಧರಾಮಯ್ಯನವರ ರೋಷಾವೇಷ ನೋಡಿದ ಹೈಕಮಾಂಡ್ ಘಟನೆ ನಡೆದ ಎರಡು ಮೂರು ದಿನದಲ್ಲೇ ಬಿ.ಕೆ.ಹರಿಪ್ರಸಾದ್ ಗೆ ಶೋಕಾಸ್ ನೊಟೀಸ್ ಜಾರಿ‌ಮಾಡಿದೆ. ಈ ಘಟನೆ ಸಿದ್ಧರಾಮಯ್ಯನವರಿಗೆ ಪಕ್ಷದ ಹೈಕಮಾಂಡ್ ಮೇಲೆ ಇರುವ ಹಿಡಿತವನ್ನು ಸ್ಪಷ್ಟಪಡಿಸಿದೆ. ಅಲ್ಲದೇ ಸಿದ್ಧರಾಮಯ್ಯನವರನ್ನು ಕಟ್ಟಿ ಹಾಕುವ ಸಿದ್ಧತೆಯಲ್ಲಿದ್ದ ಡಿಕೆಶಿ ಹಾಗೂ ಬಿಕೆಎಚ್ ಟೀಂಗೆ ಶಾಕ್ ತಂದಿದೆ.

ಬಿ.ಕೆ ಹರಿಪ್ರಸಾದ್ ವಿಚಾರದಲ್ಲಿ ತುರ್ತಾಗಿ ಕ್ರಮಕೈಗೊಂಡ ಕಾಂಗ್ರೆಸ್ ಹೈಕಮಾಂಡ್ ವಿಧಾನಸಭಾ ಚುನಾವಣೆಗೂ ಮುನ್ನ ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ ಸಿದ್ಧರಾಮಯ್ಯನವರು. ಡಿಕೆಶಿ ಸಿಎಂ ಆಗೋದು ಸಾಧ್ಯವಿಲ್ಲದ ಮಾತು ಎಂಬರ್ಥದಲ್ಲಿ ಮಾತನಾಡಿದ್ದ ಶಾಸಕ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಆದರೆ ಈಗ ಸಿದ್ಧು ವಿರುದ್ಧ ಮಾತನಾಡಿದ ತಕ್ಷಣ ಬಿ.ಕೆ.ಹರಿಪ್ರಸಾದ್ ಮೇಲೆ ಕ್ರಮಕ್ಕೆ ಮುಂದಾಗಿರೋದು ಹೈಕಮಾಂಡ್ ಪಾಲಿಗೆ ಸಿದ್ಧು ಎಷ್ಟು ಮಹತ್ವದ ಪಾತ್ರ ವಹಿಸುತ್ತಾರೆ ಎಂಬ ಸಂಗತಿ ಸಾಬೀತಾದಂತಾಗಿದೆ.

CM Siddaramaiah Presure to Congress High Command How was the notice issued to BK Hariprasad

Comments are closed.