Lockdown : 500 ಕೋಟಿ ಪ್ಯಾಕೇಜ್ ಘೋಷಣೆ : ಯಾರಿಗೆಲ್ಲಾ ಎಷ್ಟು ಕೊಟ್ರು ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ವಾರ‌ ಲಾಕ್‌ಡೌನ್ ವಿಸ್ತರಣೆ ‌ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಅಲ್ಲದೇ 500 ಕೋಟಿ‌ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಎರಡನೇ ಹಂತದ‌ ಪ್ಯಾಕೇಜ್ ನಲ್ಲಿ ಪವರ್ ಲೂಮ್ ನೇಕಾರರಿಗೆ 3 ಸಾವಿರ ರೂಪಾಯಿ, ಚಲನ ಚಿತ್ರ, ದೂರ ದರ್ಶನ, ಮಾಧ್ಯಮದವರಿಗೆ  3 ಸಾವಿರ, ಮೀನುಗಾರರಿಗೆ ( ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೊಂದಾಯಿಸಿದ ಮೀನುಗಾರರಿಗೆ) ತಲಾ 3 ಸಾವಿರ ಹಾಗೂ ನಾಡ ದೋಣಿ ಮಾಲೀಕರಿಗೆ 3 ಸಾವಿರ ರೂ. ಘೋಷಣೆ ಮಾಡಿದ್ದಾರೆ.

ರಾಜ್ಯದ 42,574 ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ, ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ, ಮುಜುರಾಯಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಗೆ ಸಿ ವರ್ಗದ ದೇವಸ್ಥಾನದಲ್ಲಿ ಕೆಲಸ ಮಾಡುವಂತ ತಲಾ ಮೂರು ಸಾವಿರ ಹಾಗೂ ಮಸೀದಿಯ‌ ಧರ್ಮ ಗುರು ಗಳಿಗೂ 3 ಸಾವಿರ‌ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದಾರೆ.

ಶಾಲೆಗಳು ಮುಚ್ಚಿದ್ದರೂ ಕೂಡ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಅರ್ಧ ಕೆ.ಜಿ. ಹಾಲಿನ ಪುಡಿ‌ ನೀಡಲಾಗುತ್ತದೆ. ಇನ್ನು ಸಂಕಷ್ಟದಲ್ಲಿರುವ ಅನುಧಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ, ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನೀಡಲಾಗು ವುದು  ಎಂದಿದ್ದಾರೆ‌.

ರಾಜ್ಯದಲ್ಲಿರುವ ಕೈಗಾರಿಕೆಗಳಿಗೆ ಜೂನ್ 2021 ನಿಗದಿತ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಎಂಎಸ್‌ಎಂಇ ಕೈಗಾರಿಕೆ ಹೊರತುಪಡಿಸಿ, ಇತರೆ ಕೈಗಾರಿಕೆಗಳ ಗ್ರಾಹಕರಿಗೆ ಮೇ, ಜೂನ್ ತಿಂಗಳ ವಿದ್ಯುತ್ ಶುಲ್ಕ ಪಾವತಿಯಿಂದ ಜುಲೈ 30ರವರೆಗೆ ವಿನಾಯ್ತಿ ನೀಡಲಾಗಿದೆ ಎಂದರು.

Comments are closed.