Cooker bomb blast case: ಚಾರ್ಜ್‌ ಶೀಟ್‌ ನಲ್ಲಿ ಬಯಲಾಯ್ತು ಉಗ್ರರ ಹುನ್ನಾರ

ಶಿವಮೊಗ್ಗ : (Cooker bomb blast case) ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಸೇರಿದಂತೆ ಹಲವು ಉಗ್ರ ಚಟುವಟಿಕೆಗಳ ಜಾಡು ಹಿಡಿದು ತನಿಖೆಗಿಳಿದ ರಾಷ್ಟ್ರೀಯ ತನಿಖಾ ದಳ ಶಿವಮೊಗ್ಗದಲ್ಲಿ ಇಸ್ಲಾಮಿಕ್‌ ಸ್ಟೇಟ್ಸ್‌ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಚಾರ್ಜ್‌ ಶೀಟ್‌ ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ದೇಶದ ಐಕ್ಯತೆ ಮತ್ತು ಸಾರ್ವಭೌಮತ್ಕಕ್ಕೆ ದಕ್ಕೆ ತಂದಿರುವ ಉಗ್ರಗಾಮಿಗಳ ಬಗ್ಗೆ ಮಾಹಿತಿ ಬಯಲಾಗಿದ್ದು, ಶಂಕಿತ ಉಗ್ರರು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ ತೀರ ಸೇರಿದಂತೆ 25 ಕಡೆ ಟ್ರಯಲ್ ಬ್ಲ್ಯಾಸ್ಟ್​ ನಡೆಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ತುಂಗಾ ನದಿ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಿ ಶಂಕಿತ ಉಗ್ರ ಶಾರೀಕ್‌ ಎನ್ನುವಾತ ತಲೆಮರೆಸಿಕೊಂಡಿದ್ದ. ಇದಾದ ಬಳಿಕ ಕಳೆದ ವರ್ಷ ನವೆಂಬರ್‌ ನಲ್ಲಿ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಈ ಉಗ್ರಗಾಮಿ ಚಟುವಟಿಕೆಗಳ ಬಗೆಗಿನ ತನಿಖೆಯನ್ನು ಮಂಗಳೂರು ಪೊಲೀಸರು ಎನ್‌ಐಎಗೆ ನೀಡಿದ್ದರು. ಈ ಎಲ್ಲಾ ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ತನಿಖೆಗಿಳಿದ ತನಿಖಾ ತಂಡ ದೇಶದ ಎಲ್ಲೆಡೆ ದಾಳಿಗಳನ್ನು ನಡೆಸಿ ಹಲವರನ್ನು ಬಂಧಿಸಿತ್ತು. ಇದಲ್ಲದೇ ಉಗ್ರರ ಇನ್ನಷ್ಟು ಉಪಾಯಗಳು ಬಯಲಾಗಿದ್ದವು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಇದರಲ್ಲಿ ವಿದೇಶಿ ಉಗ್ರಗಾಮಿಗಳ ಸಲಹೆಯಂತೆ ಶಂಕಿತ ಉಗ್ರರು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ ತೀರ ಸೇರಿದಂತೆ 25 ಕಡೆ ಟ್ರಯಲ್ ಬ್ಲ್ಯಾಸ್ಟ್​ ನಡೆಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ಇದಲ್ಲದೇ ಚಾರ್ಜ್​ಶೀಟ್​​ನಲ್ಲಿ ಕುಕ್ಕರ್ ಬಾಂಬ್​ ಸ್ಫೋಟದ ಪ್ರಮುಖ ಆರೋಪಿ ಶಂಕಿತ ಉಗ್ರ ಶಾರಿಕ್​, ಮಾಜ್ ಮುನೀರ್, ಸಯ್ಯದ್ ಯಾಸಿನ್ ಹೆಸರು ಕೂಡ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಎನ್​ಐಎ ಚಾರ್ಜ್​ಶೀಟ್​​ನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಮಾಜ್ ಮುನೀರ್​​​, ಯಾಸಿನ್​​ ಇಬ್ಬರೂ ಬಿಟೆಕ್​​​ ಪದವೀಧರರಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಸಂಚನ್ನು ರೂಪಿಸಿದ್ದರು. ಆಗುಂಬೆ, ವರಾಹಿ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗಿದ್ದ ವೇಳೆ ಇಬ್ಬರು ಜಾಗಗಳ ಬಗ್ಗೆ ಮಾಹಿತಿ ಪಡೆದು ಸ್ಫೋಟಕ್ಕೆ ಸ್ಥಳ ಗುರುತಿಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ : ರಾಮನಗರದಲ್ಲಿ ಭಾರೀ ಮಳೆ : ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತ

ಇದನ್ನೂ ಓದಿ : Modi at Metro Show: ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ಮೋದಿ : ಮಾ. 25 ರಂದು ನಡೆಯಲಿದೆ ಮೆಟ್ರೊ ಶೋ

ಇದಲ್ಲದೇ ಇಬ್ಬರೂ ಶಂಕಿತ ಉಗ್ರರಿಗೆ ಕ್ರಿಪ್ಟೋ ಕರೆನ್ಸಿಯ ಮೂಲಕ ಹಣ ರವಾನೆಯಾಗುತ್ತಿತ್ತು. ಇವರು ವೇರ್ ಹೌಸ್, ಮದ್ಯದಂಗಡಿ, ಹಾರ್ಡವೇರ್ ಶಾಪ್ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುವ ಹುನ್ನಾರ ರೂಪಿಸಿದ್ದರು. ಶಂಕಿತ ಉಗ್ರ ಶಾರೀಕ್ 2022ರಲ್ಲಿ ಕದ್ರಿ ದೇವಸ್ಥಾನದಲ್ಲಿ ಬಾಂಬ್​ ಸ್ಫೋಟಿಸಲು ಹುನ್ನಾರ ರೂಪಿಸಿದ್ದನು. ಆದರೆ ಮಾರ್ಗ ಮಧ್ಯದಲ್ಲಿಯೇ ಕುಕ್ಕರ್ ಸಿಡಿದ ಹಿನ್ನಲೆ ನಡೆಯಬೇಕಿದ್ದ ಭಾರೀ ದುರಂತ ತಪ್ಪಿಹೋಗಿದೆ.

ಇದನ್ನೂ ಓದಿ : KPCL salary increase : ಸರ್ಕಾರಿ ನೌಕರರ ನಂತರ, ಎಸ್ಕಾಂಗಳು, ಕೆಪಿಸಿಎಲ್ ಸಿಬ್ಬಂದಿಗಳ ವೇತನ ಹೆಚ್ಚಳ

Cooker bomb blast case: The charge sheet revealed the ferocity of terrorists

Comments are closed.