ಬೆಂಗಳೂರು : ಕೊರೋನಾ ಹಾಗೂ ಓಮೈಕ್ರಾನ್ ಭೀತಿಯ ನಡುವೆಯೂ ರಾಜ್ಯದಲ್ಲಿ ಭರ್ಜರಿ ಹೊಸವರ್ಷಾಚರಣೆ ನಡೆದಿದ್ದು ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. ಓಮೈಕ್ರಾನ್ ಭೀತಿ, ನೈಟ್ ಕರ್ಪ್ಯೂ ಇದ್ದರೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಅಡ್ಡಿಯಾಗಿಲ್ಲ.ಮದ್ಯ ಪ್ರಿಯರು ಬೇಕಷ್ಟು ಪಾನಸೇವೆ ನಡೆಸಿದ್ದು ಫಲವಾಗಿ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ದಕ್ಕಿದೆ. 2021 ರ ಕೊನೆಯ ದಿನ ರಾಜ್ಯದಲ್ಲಿ 104 ಕೋಟಿ (Record Alcohol Sale)ಮದ್ಯ ಮಾರಾಟವಾಗಿದೆ. ಹೊಸ ವರ್ಷದ ಕೊನೇ ದಿನ ನಡೆದಿದೆ ಭರ್ಜರಿ ಮದ್ಯಾರಾಧನೆ ನಡೆದಿದ್ದು ಅಬಕಾರಿ ಇಲಾಖೆ ವರ್ಷದ ಆದಾಯವನ್ನು ಒಂದೇ ದಿನದಲ್ಲಿ ಗಳಿಸಿದ ಸಂಭ್ರಮದಲ್ಲಿದೆ.
ದಾಖಲೆಗಳ ಪ್ರಕಾರ ಡಿಸೆಂಬರ್-24 ರಿಂದ ಡಿಸೆಂಬರ್-31 ವರೆಗೆ 639 ಕೋಟಿ ಆದಾಯ ರಾಜ್ಯದಲ್ಲಿ ಅಬಕಾರಿ ಇಲಾಖೆಗೆ ದಕ್ಕಿದ್ದರೇ, 2020 ರಲ್ಲಿ ಒಟ್ಟು519 ಕೋಟಿ ಆದಾಯ ಗಳಿಸಿತ್ತು. ಕೊರೋನಾ ನಡುವೆಯೂ ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಈ ವರ್ಷ ಶೇ 23 ರಷ್ಟು ಹೆಚ್ಚುವರಿ ಅದಾಯ ಗಳಿಸಿದೆ. ಡಿಸೆಂಬರ್-24 ರಿಂದ 31 ವರೆಗೆ 17.18 ಲಕ್ಷ ml ಬಾಕ್ಸ್ ಮಾರಾಟವಾಗಿದ್ದು ನಿನ್ನೆ ಬಂದೇ ದಿನ 2.43 ಲಕ್ಷ ಐಎಂಎಲ್ ಬಾಕ್ಸ್ ಮಾರಾಟವಾಗಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 10.13 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಹಣದ ಹೊಳೆಯನ್ನೇ ಹರಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಭಯಕ್ಕೆ ನೈಟ್ ಕರ್ಪ್ಯೂ ಜಾರಿಯಾಗಿತ್ತು. ಹೀಗಾಗಿ ಮದ್ಯದ ಹೊಳೆ ಹರಿಯುವ ಬಾರ್, ಪಬ್ ಹಾಗೂ ರೆಸ್ಟೋರೆಂಟ್ ಗಳು ತಮ್ಮ ವ್ಯಾಪಾರದ ಅವಧಿಯನ್ನು ಮೊಟಕುಗೊಳಿಸುವ ಸ್ಥಿತಿ ಎದುರಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಬಾರ್ ಹಾಗೂ ಪಬ್ ಗಳು ಮಧ್ಯರಾತ್ರಿ 2 ಗಂಟೆಯವರೆಗೆ ವ್ಯಾಪಾರ ನಡೆಸುತ್ತಿದ್ದವು.

ಅಲ್ಲದೇ ರಾಜ್ಯದಾದ್ಯಂತ ರೆಸಾರ್ಟ್, ಕಾಟೇಜ್ ಹಾಗೂ ಬೀಚ್ ತೀರಗಳಲ್ಲಿ ಸಾರ್ವಜನಿಕವಾಗಿ ಪಾರ್ಟಿ ಆಯೋಜಿಸಲಾಗುತ್ತಿತ್ತು. ಇದರಿಂದ ಮದ್ಯ ಕೇಸ್ ಗಟ್ಟಲೇ ಮಾರಾಟ ವಾಗುತ್ತಿತ್ತು. ಈ ವರ್ಷ ಸಾರ್ವಜನಿಕ ವರ್ಷಾಚರಣೆ ಹಾಗೂ ಸೆಲೆಬ್ರೇಶನ್ ಗೆ ಕಡಿವಾಣ ಹಾಕಿದ್ದರಿಂದ ಅಂದಾಜು ಶೇಕಡಾ 20 ರಷ್ಟು ಮದ್ಯ ಮಾರಾಟದಲ್ಲಿ ಕುಸಿತ ಉಂಟಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಇನ್ನು ಸತತ ಎರಡು ವರ್ಷಗಳ ಕೊರೋನಾ ಬಾಧೆಯಿಂದ ಜನರ ಆರ್ಥಿಕ ಮಟ್ಟ ಕುಸಿದಿರೋದು ಕೂಡ ಎಂಜಾಯಮೆಂಟ್ ಮೇಲೆ ಎಫೆಕ್ಟ್ ಮಾಡಿದ್ದು ಇಷ್ಟೆಲ್ಲ ಕೊರತೆಗಳ ನಡುವೆಯೂ ಅಬಕಾರಿ ಇಲಾಖೆ ದಾಖಲೆ ಬರೆದಿದೆ.
ಇದನ್ನೂ ಓದಿ : ದೇಶದಲ್ಲಿ ಮತ್ತೆ 22,500 ಕೋವಿಡ್ ಹೊಸ ಪ್ರಕರಣ ವರದಿ
ಇದನ್ನೂ ಓದಿ : ಕೊರೊನಾ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ: ಸುಲಿಗೆ ತಡೆಯಲು ಆರೋಗ್ಯ ಇಲಾಖೆ ಆದೇಶ
(corona and omicron fear record alcohol sale in Karnataka)