ರಾಜ್ಯದಲ್ಲಿ ಕೊರೊನಾರ್ಭಟ : ಸಕ್ರೀಯ ಪ್ರಕರಣಗಳ ಸಂಖ್ಯೆ 39,092ಕ್ಕೆ ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಆರ್ಭಟಿಸುತ್ತಿದೆ. ಇಂದೂ ಕೂಡ ರಾಜ್ಯದಲ್ಲಿ 4,553 ಹೊಸ ಪ್ರಕರಣಗಳು ಪತ್ತೆಯಾಗಿದ್ದು,‌ ಸಕ್ರೀಯ ಪ್ರಕರಣಗಳ ಸಂಖ್ಯೆ 39,092ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದಲೂ ಕೊರೊನಾ ಸೋಂಕಿತ ಸಂಖ್ಯೆ ಐದು‌ ಸಾವಿರದ ಸನಿಹಕ್ಕೆ ಬಂದು ನಿಂತಿದೆ. ಅದ್ರಲ್ಲೂ ಹಲವು ಜಿಲ್ಲೆಗಳಲ್ಲಿಯೂ ಕೊರೊ‌ನಾ ಸೋಂಕಿನ ಆತಂಕ ಹೆಚ್ಚಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿಯೂ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬೆಂಗಳೂರಲ್ಲಿ ಅತೀ ಹೆಚ್ಚು ಸಂಖ್ಯೆ ಕೊರೊನಾ‌ ಸೋಂಕು ದೃಢಪಟ್ಟಿದ್ದು,‌ ಇಂದು 2,787 ಮಂದಿಗೆ ಸೋಂಕು ದೃಢಪಟ್ಟಿದೆ. ಮೈಸೂರು 260, ಕಲಬುರಗಿ 170, ಬೆಂಗಳೂರು ಗ್ರಾಮಾಂತರ 155, ಬೀದರ್ 147, ತುಮಕೂರು 107, ಹಾಸನ 104, ಧಾರವಾಡ 100, ಬಳ್ಳಾರಿ 93, ದಕ್ಷಿಣ ಕನ್ನಡ 83, ಮಂಡ್ಯ 79, ಉಡುಪಿ 73, ಬೆಳಗಾವಿ 52, ಉತ್ತರ‌ ಕನ್ನಡ 49, ಶಿವಮೊಗ್ಗ 36,   ಚಿತ್ರದುರ್ಗ 29, ರಾಯಚೂರು 23, ದಾವಣಗೆರೆ 23, ಬಾಗಲಕೋಟೆ 20, ಕೋಲಾರ‌ 20, ಯಾದಗಿರಿ 18, ರಾಮನಗರ 18, ಗದಗ 18, ಚಿಕ್ಕಮಗಳೂರು 17 ಸೇರಿದಂತೆ ರಾಜ್ಯದಲ್ಲಿ ಒಟ್ಟು 4,553 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು ಕೊರೊನಾ ಸೋಂಕಿರ ಸಂಖ್ಯೆ 10,15,155 ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ 9,63,419 ಜನ ಡಿಸ್ಚಾರ್ಜ್ ಆಗಿದ್ದಾರೆ. 39,092 ಸಕ್ರಿಯ ಪ್ರಕರಣಗಳಿವೆ.

Comments are closed.