ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ಬೆನ್ನಲ್ಲೇ ರಾಜ್ಯ ಸರಕಾರ ಆಟೋ ಟ್ಯಾಕ್ಸಿ, ಚಾಲಕರ ನೆರವಿಗೆ ನಿಂತಿತ್ತು. ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಣೆಯನ್ನು ಮಾಡಿತ್ತು. ಸಾಲದಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ಆದ್ರೆ ರಾಜ್ಯ ಸರಕಾರ ಸೇವಾಸಿಂಧೂ ಪೋರ್ಟಲ್ ನಿಂದ ಚಾಲಕರ ಅರ್ಜಿಯನ್ನು ಕಿತ್ತುಹಾಕಿದೆ.

ರಾಜ್ಯ ಸರಕಾರದ ಘೋಷಣೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ 2.34 ಲಕ್ಷ ಆಟೋ ಚಾಲಕರು, 4.33 ಲಕ್ಷ ಟ್ಯಾಕ್ಸಿ ಚಾಲಕರು ಖುಷಿಯಾಗಿದ್ದರು. ಅಲ್ಲದೇ 2,37, 313 ಮಂದಿ ಚಾಲಕರು ಸೇವಾ ಸಿಂಧು ಪೋರ್ಟಲ್ ಮೂಲಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವೇ ಕೆಲವು ಚಾಲಕರಿಗೆ ಮಾತ್ರವೇ ರಾಜ್ಯ ಸರಕಾರ ಸಹಾಯಧನವನ್ನು ಚಾಲಕರ ಖಾತೆಗೆ ವರ್ಗಾಯಿಸಿದೆ.

ಇದೀಗ ಒಮ್ಮಿಂದೊಮ್ಮೆಲೆ ರಾಜ್ಯ ಸರಕಾರ ಸೇವಾ ಸಿಂಧು ಪೋರ್ಟಲ್ ನಿಂದ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಲಿಂಕ್ ಅನ್ನು ತೆಗೆದು ಹಾಕಿದೆ. ತಾಂತ್ರಿಕ ಕಾರಣಗಳಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಚಾಲಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.. ಹೀಗಾಗಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಚಾಲಕರು ಒತ್ತಾಯಿಸಿದ್ದಾರೆ.