ಮಂಗಳವಾರ, ಏಪ್ರಿಲ್ 29, 2025
HomeCrimeCruiser Accident 7 dies : ಕ್ರೂಸರ್ ಪಲ್ಟಿ 7 ಜನರು ಸ್ಥಳದಲ್ಲೇ ದುರ್ಮರಣ‌, ಮೂವರ...

Cruiser Accident 7 dies : ಕ್ರೂಸರ್ ಪಲ್ಟಿ 7 ಜನರು ಸ್ಥಳದಲ್ಲೇ ದುರ್ಮರಣ‌, ಮೂವರ ಸ್ಥಿತಿ ಚಿಂತಾಜನಕ

- Advertisement -

ಬೆಳಗಾವಿ : ಚಾಲಕನಿಗೆ ನಿಯಂತ್ರಣ ತಪ್ಪಿ ಕ್ರೂಸರ್‌ (Cruiser Accident 7 dies) ನಾಲಾಗೆ ಉರುಳಿ ಏಳು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಣಬರಗಿ ಸಮೀಪದಲ್ಲಿ ನಡೆದಿದೆ. ಮೃತ ಪಟ್ಟವರನ್ನು ಗೋಕಾಕ್‌ ಮೂಲದವರು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಗೋಕಾಕ್‌ ತಾಲೂಕಿನ ಅಕ್ಕತಂಗಿಯರ ಹಾಳದಿಂದ ಬೆಳಗ್ಗೆ 7.30 ರ ಸುಮಾರಿಗೆ ಸುಮಾರು 18 ಮಂದಿ ಬೆಳಗಾವಿಗೆ ಹೊರಟಿದ್ದರು. ಬೆಳಗಾವಿ ಗೋಕಾಕ್‌ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕ್ರೂಸರ್‌ ಬೆಳಗಾವಿ ತಾಲೂಕಿನ ಕಣಬರಗಿಯಲ್ಲಿ ಬರುತ್ತಿದ್ದಂತೆಯೇ ಕ್ರೂಸರ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಬಳ್ಳಾರಿ ನಾಲಾಕ್ಕೆ ಉರುಳಿ ಬಿದ್ದಿದೆ. ಅಪಘಾತದಿಂದಾಗಿ ಸ್ಥಳದಲ್ಲಿಯೇ ಏಳು ಮಂದಿ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಮೃತಪಟ್ಟವರೆಲ್ಲರೂ ಕೂಡ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯವೂ ಕ್ರೂಸರ್‌ ಮೂಲಕ ಒಟ್ಟು 18 ಮಂದಿ ಬೆಳಗಾವಿಗೆ ಪ್ರಯಾಣಿಸುತ್ತಿದ್ದರು. ಕ್ರೂಸರ್‌ ಚಾಲಕ ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸುಮಾರು ಮೂರರಿಂದ ನಾಲ್ಕು ಬಾರಿ ಪಲ್ಟಿಯಾಗಿದ್ದು, ಕ್ರೂಸರ್‌ ಸಂಪೂರ್ಣವಾಗಿ ಜಖಂ ಆಗಿದೆ. ಅಪಘಾತದಲ್ಲಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಮಾರಿಹಾಳ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕ್ರೂಸರ್‌ನಲ್ಲಿ ಇರುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ : FACT CHECK : FASTagನಿಂದ ಹಣವನ್ನು ತೆಗೆಯುತ್ತಾರೆ ಹುಷಾರ್‌ ! ವೈರಲ್‌ ವಿಡಿಯೋದ ಅಸಲಿಯುತ್ತೇನು ?

ಇದನ್ನೂ ಓದಿ : Rohit Sharma Tests Covid Positive : ಟೀಂ ಇಂಡಿಯಾಕ್ಕೆ ಆಘಾತ, ರೋಹಿತ್‌ ಶರ್ಮಾ ಗೆ ಕೋವಿಡ್‌ ಪಾಸಿಟಿವ್‌

ಇದನ್ನೂ ಓದಿ : Anna Bhagya Rice : ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಾಟ : ಲಾರಿ ವಶ, ಇಬ್ಬರ ಬಂಧನ

ಇದನ್ನೂ ಓದಿ : ಡೇಟಿಂಗ್ ಆ್ಯಪ್‌ ಮೋಹ : ಚೆಲುವೆ ಅಂದಕ್ಕೆ ಮರುಳಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌

Cruiser Accident 7 dies on the spot Belagavi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular