ಉಡುಪಿ : ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಸೆ ತೋರಿಸಿ 67 ಲಕ್ಷ ರೂಪಾಯಿ ವಂಚನೆ

Udupi Cryptocurrency Fraud : ಉಡುಪಿ : ಆನ್‌ಲೈನ್‌ ವಂಚನೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಕ್ರಿಫ್ಟೋ ಕರೆನ್ಸಿ (Crypto currency) ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

Udupi Cryptocurrency Fraud : ಉಡುಪಿ : ಆನ್‌ಲೈನ್‌ ವಂಚನೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಕ್ರಿಫ್ಟೋ ಕರೆನ್ಸಿ (Crypto currency) ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಕ್ರಿಫ್ಟೋ ಕರೆನ್ಸಿ ನಂಬಿ 67  ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರುವ ಕುರಿತು ಉಡುಪಿಯ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

cryptocurrency fraud Rs 67 Lakh in Udupi Kannada News
Image Credit to Original Source

ಉಡುಪಿ ಜಿಲ್ಲೆಯ ಕಿನ್ನಿಮೂಲ್ಕಿಯ ಎನ್‌ಜಿಓ ಕಾಲೋನಿಯ ನಿವಾಸಿಯಾಗಿರುವ ಎಫ್‌ಇಎ ರೋಡ್ರಿಗಸ್ ಎಂಬವರೇ ವಂಚನೆಗೆ ಒಳಗಾದವರು. 69 ವರ್ಷ ಪ್ರಾಯದ ಎಫ್ಇಎ ರೋಡ್ರಿಗಸ್‌ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳು ತನ್ನ ಮೊಬೈಲ್‌ಸಂಖ್ಯೆಯನ್ನು Fortum Paradise Group ಎಂಬ ವಾಟ್ಸಾಪ್‌ (WhatsApp) ಗ್ರೂಪ್‌ ಗೆ ಸೇರ್ಪಡೆಗೊಳಿಸಿದ್ದರು.

ಇದನ್ನೂ ಓದಿ : Navunda : ಮೂರ್ತೆದಾರರ ಸೊಸೈಟಿಯಿಂದ 9 ಲಕ್ಷ ರೂ. ಠೇವಣಿ ಹಣ ವಂಚನೆ : 16 ಮಂದಿಯ ವಿರುದ್ದ ಪ್ರಕರಣ ದಾಖಲು

ವಾಟ್ಸಾಪ್‌ ಗ್ರೂಪ್‌ನಲ್ಲಿ ಶೇರು ಮಾರುಕಟ್ಟೆ, ಕ್ರಿಪ್ಟೋ ಕರೆನ್ಸಿಯ ಹೂಡಿಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ಅದ್ರಲ್ಲೂ ಕ್ರಿಪ್ಟೋ ಕರೆನ್ಸಿ ಹೂಡಿಕೆ ಯಿಂದ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಆಸೆ ತೋರಿಸಿ ರೋಡ್ರಿಗಸ್‌ ಅವರು ಈ ಮೊದಲು ಹೂಡಿಕೆ ಮಾಡಿದ್ದ ಶೇರುಗಳನ್ನು ಮಾರಾಟ ಮಾಡಿ OLKZ ಎಂಬ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿದ್ದರು. ತನ್ನ ಶೇರು ಮಾರಾಟ ಮಾಡಿ ಬಂದ ಹಣವನ್ನು ಆರೋಪಿಗಳು ತೋರಿಸಿದ ವಿವಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.

cryptocurrency fraud Rs 67 Lakh in Udupi Kannada News
Image Credit to Original Source

ಇದನ್ನೂ ಓದಿ :ಗೃಹಲಕ್ಷ್ಮೀ ಯೋಜನೆ 11ನೇ ಕಂತು : ರಾಜ್ಯ ಸರಕಾರದಿಂದ ಭರ್ಜರಿ ಗುಡ್‌ನ್ಯೂಸ್‌

ರೋಡ್ರಿಗಸ್‌ ಅವರ ಉಳಿತಾಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 67,16,000/- ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿಸಿ ಕೊಂಡಿದ್ದರು. ನಂತರದಲ್ಲಿ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ, ಕ್ರಿಫ್ಟೋ ಕರೆನ್ಸಿಯಿಂದ ಬಂದ ಲಾಭಾಂಶವನ್ನಾಗಲಿ ಇದುವರೆಗೆ ನೀಡದೆ ವಂಚನೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಉಡುಪಿಯ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2024 ಕಲಂ: 66(D) ಐ.ಟಿ. ಆಕ್ಟ್ ಯಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :  7ನೇ ವೇತನ ಆಯೋಗ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

cryptocurrency fraud Rs 67 Lakh in Udupi Kannada News

Comments are closed.