ANEC Case : ಕೊರೊನಾ ಭೀತಿಯ ನಡುವಲ್ಲೇ ಪತ್ತೆಯಾಯ್ತು ಎನೆಕ್ ಕಾಯಿಲೆ

ದಾವಣಗೆರೆ : ಕೊರೊನಾ ಭೀತಿಯ ನಡುವಲ್ಲೇ ರಾಜ್ಯ ವಿರಳವಾಗಿರುವ ಕಾಯಿಲೆಯೊಂದು ಪತ್ತೆಯಾಗಿದೆ. ದಾವಣಗೆರೆಯ 13 ವರ್ಷದ ಬಾಲಕನಲ್ಲಿ ಪತ್ತೆಯಾಗಿ ರುವ ಎನೆಕ್ ಕಾಯಿಲೆ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಈ ಅಪರೂಪದ ಅಕ್ಯುಟ್ ನೆಕ್ರೋಟೈಜಿಂಗ್ ಎನ್ಸೆಫಲೋಪತಿ (ANEC) ಕಾಯಿಲೆ ಕಂಡುಬರುತ್ತದೆ. ಈ ಹಿಂದೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಯಸ್ಕರೋರ್ವರಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. ಇದೀಗ ಬಾಲಕನಲ್ಲಿ ಅಪರೂಪದ ಕಾಯಿಲೆ ಇರುವುದನ್ನು ದಾವಣಗೆರೆಯ ಎಸ್ಎಸ್ ಆಸ್ಪತ್ರೆಯ  ವೈದ್ಯರು ಪತ್ತೆ ಹಚ್ಚಿದ್ದಾರೆ.

ದಾವಣಗೆರೆಯ ಎಸ್ಎಸ್ ಆಸ್ಪತ್ರೆಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ 13 ವರ್ಷದ  ಬಾಲಕನೋರ್ವ ದಾಖಲಾಗಿದ್ದ. ಬಾಲಕನನ್ನು ತಪಾಸಣೆಗೆ ಒಳಪಡಿಸಿದ, ವೈದ್ಯಕೀಯ ನಿರ್ದೇಶಕರಾಗಿರುವ ಡಾ.ನಿಜಲಿಂಗಪ್ಪ ಕಾಳಪ್ಪ ನವರ್ ನೇತೃತ್ವದ ವೈದ್ಯರ ತಂಡ ಅಪರೂಪದ ಕಾಯಿಲೆ ಯನ್ನು ಪತ್ತೆ ಹಚ್ಚಿದೆ.

ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿ ಕೊಳ್ಳುತ್ತದೆ. ಈ ಕಾಯಿಲೆ ಮಕ್ಕಳ ಮೆದುಳಿನ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೆ ದೇಶದಲ್ಲಿ ಈ ಕಾಯಿಲೆ ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು.

Comments are closed.