Dharamsthala Lakshdeepotsava: ಧರ್ಮಸ್ಥಳ ಲಕ್ಷದೀಪೋತ್ಸವ: ಇಲ್ಲಿದೆ ಕಾರ್ಯಕ್ರಮಗಳ ವಿವರ

ಧರ್ಮಸ್ಥಳ: (Dharamsthala Lakshdeepotsava) ದೇಶದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳದಲ್ಲೀಗ ಲಕ್ಷ ದೀಪೋತ್ಸವದ ಸಂಭ್ರಮ.ಕಾರ್ತಿಕ ಮಾಸದ ಕೊನೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಆಚರಿಸಲಾಗುತ್ತಿದೆ. ಈಗಾಗಲೇ ನವೆಂಬರ್ 19ರಂದು ಆರಂಭಗೊಂಡಿರುವ ಲಕ್ಷ ದೀಪೋತ್ಸವ ನವೆಂಬರ್ 23 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ದೇಶದ ಮೂಲೆ ಮೂಲೆಗಳಿಂದಲೂ ಭಕ್ತರ ದಂಡು ಕುಡುಮಾಪುರಕ್ಕೆ ಹರಿದು ಬರುತ್ತಿದೆ. ಇನ್ನು ಲಕ್ಷ ದೀಪೋತ್ಸವ ಸಂಪೂರ್ಣ ಕಾರ್ಯಕ್ರಮದ ವಿವರ ಇಲ್ಲಿದೆ.

ನಾಳೆ(Dharamsthala Lakshdeepotsava) ನವೆಂಬರ್‌ 22, 23 ರಂದು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ತೊಂಬತ್ತನೇ ಅಧಿವೇಶನ ನಡೆಯಲಿದ್ದು, ಇದರಲ್ಲಿ ನಾಡಿನ ಗಣ್ಯರು, ವಿದ್ವಾಂಸರು ಮತ್ತು ಕಲಾವಿದರ ಸಹಭಾಗಿತ್ವದಲ್ಲಿ ನಡೆಯಲಿದೆ. ಇಂದು ಸಂಜೆ 5 ಗಂಟೆಯಿಂದ ಅಮೃತ ವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಿವಮೊಗ್ಗದ ಬಹುಶ್ರುತ ವಿದ್ವಾಂಸ ಮತ್ತು ನ್ಯಾಯವಾದಿ ಎಂ. ಆರ್.‌ಸತ್ಯನಾರಾಯಣ ಇದರ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ಇನ್ನೂ ನವೆಂಬರ್‌ 23 ರಂದು ನಡೆಯುವ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಪಿ.ಶೇಷಾದ್ರಿ ಉದ್ಘಾಟಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ, ಸಂದರ್ಶಕ ಪ್ರಾದ್ಯಾಪಕ ವಿದ್ವಾನ್‌ ಡಾ. ಎಚ್.‌ವಿ. ನಾಗರಾಜ ಅವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಸಾಹಿತ್ಯ ಪರಿಚಾರಕ ಸತ್ಯೇಶ್‌ ಎನ್‌ ಬೆಳ್ಳೂರು, ಪ್ರಜಾವಾಣಿಯ ಕಾರ್ಯನಿರ್ವಾಹಕ ರವೀಂದ್ರ ಭಟ್‌ ಹಾಗೂ ಇನ್ನೀತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್‌ 19 ರಂದು ಶ್ರೀ ಮಂಜುನಾಥ ಪ್ರೌಢ ಶಾಲಾ ವಠಾರದಲಿ ಏರ್ಪಡಿಸಲಾದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಶಾಸಕ ಹರೀಶ್‌ ಪೂಂಜ ಅವರು ಉದ್ಘಾಟಿಸಿದ್ದು, ಅದೇ ದಿನ ಸಂಜೆ 3 ಗಂಟೆಯಿಂದ ಪಂಚಾಕ್ಷರಿ ಜಪದೊಂದಿಗೆ ಸುಮಾರು ಇಪ್ಪತ್ತೈದು ಸಾವಿರ ಭಕ್ತರಿಂದ ಉಜಿರೆ ಜನಾರ್ಧನ ಸ್ವಾಮಿ ದೇವಾಲಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವರೆಗೆ ಪಾದಯಾತ್ರೆ ನಡೆಯಿತು. ಸಂಜೆ 6:30 ರಿಂದ ಸಂಗೀತ ಕಾರ್ಯಕ್ರಮ, ನೃತ್ಯ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಇದನ್ನೂ ಓದಿ : ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವನ ಸನ್ನಿಧಿಯಲ್ಲಿ ದೀಪದ ಬೆಳಕಲ್ಲಿ ದೇವರ ವಿಶ್ವರೂಪ ದರ್ಶನ

ಇದನ್ನೂ ಓದಿ : Children’s Day Special : ಪುಟಾಣಿ ಮಕ್ಕಳಿಂದ ಚಿತ್ರಕಲೆ, ಪೋಷಕರಿಂದ ರಂಗೋಲಿ : ಗಿರಿ ಫ್ರೆಂಡ್ಸ್ ಚಿತ್ರಪಾಡಿಯಿಂದ ವಿಶಿಷ್ಟ ಮಕ್ಕಳ ದಿನಾಚರಣೆ

ಇಂದೂ ಕೂಡ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 5:30 ರಿಂದ ಸಂಗೀತ ಕಾರ್ಯಕ್ರಮ, ನೃತ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ. ಇನ್ನೂ 8:30 ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಕೂಡ ಜುಗಲ್‌ ಬಂದಿ ಕಾರ್ಯಕ್ರಮಗಳು ನೆರವೇರಲಿದೆ.

ಈಗಾಗಲೇ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಾರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದೇವಸ್ಥಾನ, ಬೀಡು, ವಸತಿ ಭವನಗಳು, ಉದ್ಯಾನ, ಪ್ರವೇಶ ದ್ವಾರ, ಬಾಹುಬಲಿ ಬೆಟ್ಟವನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದ್ದು, ಧರ್ಮಸ್ಥಳ ಕ್ಷೇತ್ರ ಎಲ್ಲೆಡೆಯಲ್ಲಿ ದೀಪಗಳಿಂದ ಕಂಗೊಳಿಸುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಭಕ್ತರನ್ನು ಪ್ರತಿದಿನ ಸೆಳೆಯುವ ಧರ್ಮಕ್ಷೇತ್ರ ಇದೀಗ ಮತ್ತಷ್ಟು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

(Dharamsthala Lakshdeepotsava) Dharamsthala, one of the holiest shrines in the country, is currently celebrating Laksh Deepotsava. At the end of the month of Kartika, the Laksh Deepotsava of Dharamsthala Sri Manjunath Swami is being celebrated. Lakshadweep Dipotsava, which has already started on November 19, will be held till November 23. Devotees are already flocking to Kudumapur from all corners of the country. Here is the complete program details of Laksh Dipotsava.

Comments are closed.