ವಿಶೇಷ ಚೇತನ ಕಲಾವಿದೆಗೆ ಫ್ಲೈಟ್ ಏರಲು ಅವಕಾಶ ನಿರಾಕರಣೆ : ಬೆಂಗಳೂರು ಏರ್ಪೋರ್ಟ್ ನಲ್ಲಿ ಅಮಾನವೀಯ ಘಟನೆ

ಬೆಂಗಳೂರು : ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಚೇತನ ಕಲಾವಿದೆಯೊಬ್ಬರಿಗೆ ವೀಲ್ಹ್ ಚೇರ್ ನೊಂದಿಗೆ ವಿಮಾನದಲ್ಲಿ ಪ್ರಯಾಣಿಸಲು ಏರ್ ಲೈನ್ಸ್ ಕಂಪನಿ ಯೊಂದು ನಿರಾಕರಿಸಿದ ಅಮಾನವೀಯ ಸಂಗತಿ ವರದಿಯಾಗಿದೆ. ಬೆಂಗಳೂರು ಇಂಟರ ನ್ಯಾಶನಲ್ ಏರ್ಪೋರ್ಟ್ ನಿಂದ ಕೊಚ್ಚಿಗೆ ಪ್ರಯಾಣಿಸಬೇಕಿದ್ದ ವಿಶೇಷ ಚೇತನ ಚಿತ್ರಕಲಾವಿದೆ ಸವಿತಾ ದ್ವಿವೇದಿ ಹೀಗೆ (airline refuses fly wheelchair) ಅವಮಾನಕ್ಕೊಳಗಾಗಿದ್ದು ವಿಮಾನಯಾನ ಸಂಸ್ಥೆ ಹಾಗೂ ವಿಮಾನಯಾನ ಇಲಾಖೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 31 ವರ್ಷದಿಂದ ವೀಲ್ಹ್ ಚೇರ್ ನಲ್ಲಿ ಬದುಕು ನಡೆಸುತ್ತ ಬಾಯಿಯಿಂದಲೇ ಚಿತ್ರ ಕಲಾವಿದೆಯಾಗಿ ಗುರುತಿಸಿಕೊಂಡಿರೋ ಸವಿತಾ ದ್ವಿವೇದಿ, ಶನಿವಾರ ಬೆಂಗಳೂರಿನಿಂದ ಕೊಚ್ಚಿಗೆ ತೆರಳಲು ಬೆಳಗ್ಗೆ 9 ಗಂಟೆಯ ಫ್ಲೈಟ್ ಟಿಕೇಟ್ ಬುಕ್ ಮಾಡಿದ್ದರು. ತಮ್ಮೊಂದಿಗೆ ತಮ್ಮ ಸ್ನೇಹಿತೆಗಾಗಿಯೂ ಸವಿತಾ, 8 ಸಾವಿರ ರೂಪಾಯಿ ವ್ಯಯಿಸಿದ್ದರು. ಅಲಿಯನ್ಸ್ ಏರ್ ಫ್ಲೈಟ್ ( Alliance Air Flight) ನಲ್ಲಿ ಸವಿತಾ ಟಿಕೇಟ್ ಬುಕ್ ಮಾಡಿದ್ದರು. ಆದರೆ ಶನಿವಾರ ಬೆಳಗ್ಗೆ ಸವಿತಾ ಫ್ಲೈಟ್ ಗೆ ಚೆಕ್ ಇನ್ ಮಾಡಲು ಬಂದಾಗ ಅಲಿಯೆನ್ಸ್ ಏರ್ ಫ್ಲೈಟ್ ನವರು ಸವಿತಾ ಅವರ ಸ್ವಯಂ ಚಾಲಿತ್ ವೀಲ್ಹ್ ಚೇರ್ ನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿಲ್ಲ ಎನ್ನಲಾಗಿದೆ.

ಇದನ್ನು ತಿಳಿದ ಸವಿತಾ ಏರ್ ಲೈನ್ಸ್ ಸಿಬ್ಬಂದಿಯನ್ನು ಮನವೊಲಿಸುವ ಪ್ರಯತ್ನ ಮಾಡಿದ್ದು, ಆದರೆ ಸಿಬ್ಬಂದಿ ಯಾವುದೇ ಕಾರಣಕ್ಕೂ ವೀಲ್ಹ್ ಚೇರ್ ಕ್ಯಾರಿ ಮಾಡಲು ಅವಕಾಶ ನೀಡಿಲ್ಲ ಎಂದಿದ್ದಾರೆ. ಇದರಿಂದ ಬೇಸತ್ತ‌ ಸವಿತಾ ಅಲಿಯನ್ಸ್ ಟಿಕೇಟ್ ರದ್ದುಗೊಳಿಸಿದ್ದು 8 ಸಾವಿರ ರೂಪಾಯಿಯ ಟಿಕೇಟ್ ಬದಲು 14 ಸಾವಿರ ರೂಪಾಯಿ ನೀಡಿ ತಮಗೆ ಮತ್ತು ತಮ್ಮ ಸ್ನೇಹಿತೆಗೆ ಎರಡು ಟಿಕೆಟ್ ಖರೀದಿಸದ್ದಾರಂತೆ. ಆದರೆ ಅಲಿಯನ್ಸ್ ಏರ್ ಫ್ಲೈಟ್ ನವರು ಟಿಕೇಟ್ ನ ಹಣವನ್ನು ಕೂಡ ಹಿಂತಿರುಗಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇನ್ನು ಸವಿತಾ ಏರ್ ಲೈನ್ಸ್ ಸಿಬ್ಬಂದಿಯ ಒರಟು ವರ್ತನೆ ಹಾಗೂ ವಿಶೇಷ ಚೇತನ ವ್ಯಕ್ತಿಯೊಂದಿಗೆ ನಡೆದು ಅಮಾನವೀಯ ನಡವಳಿಕೆಯ ಕುರಿತು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯಾ ಸಿಂಧ್ಯಾ ಅವರಿಗೂ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರಂತೆ. 31 ವರ್ಷದ ಸವಿತಾ ದ್ವಿವೇದಿ ತಮ್ಮ ನಾಲ್ಕನೇ ವಯಸ್ಸಿನಲ್ಲಿ ಕರೆಂಟ್ ಶಾಕ್ ನಿಂದ ಎರಡು ಕೈಗಳನ್ನು ಕಳೆದುಕೊಂಡಿದ್ದು ಬಳಿಕ ತುಟಿಗಳಿಂದಲೇ ಬ್ರಶ್ ಹಿಡಿದು ಚಿತ್ರ ಬಿಡಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : Indian Bank : ಗರ್ಭಿಣಿಯರು ಕೆಲಸಕ್ಕೆ ಅರ್ಜಿ ಸಲ್ಲಿಸುವಂತಿಲ್ಲ: ವಿವಾದಾತ್ಮಕ ಆದೇಶ ಹೊರಡಿಸಿದ ಇಂಡಿಯನ್ ಬ್ಯಾಂಕ್

Disabled artist misses flight as airline refuses fly wheelchair in Bengaluru Airport

Comments are closed.