police constables :ಪೊಲೀಸ್​ ಕಾನ್​ಸ್ಟೇಬಲ್​​ ವಯೋಮಿತಿ ಏರಿಕೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆ

ಬೆಂಗಳೂರು : police constables : ಪೊಲೀಸ್​ ಕಾನ್ಸ್​ಟೇಬಲ್​ ನೇಮಕಾತಿ ವಯೋಮಿತಿ ಏರಿಕೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಿದೆ. ಪೊಲೀಸ್​ ಕಾನ್​​ಸ್ಟೇಬಲ್​ ನೇಮಕಾತಿ ವಯೋಮಿತಿ ಏರಿಕೆ ವಿಚಾರವಾಗಿ ನಾವು ಸಧ್ಯ ಯಾವುದೇ ಯೋಚನೆ ಮಾಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ . ವಿಧಾನಸೌಧದಲ್ಲಿ ಶಾಸಕ ಪ್ರೀತಂ ಗೌಡ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮಾಡಿದ್ದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಸ್ಪಷ್ಟನೆ ನೀಡಿದ್ದಾರೆ.


ವಿಧಾನಸೌಧದಲ್ಲಿ ಮಾತನಾಡಿದ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಕೋವಿಡ್​ ಸಾಂಕ್ರಾಮಿಕದ ಕಾರಣದಿಂದಾಗಿ ರಾಜ್ಯದಲ್ಲಿ ಪೊಲೀಸ್​ ಕಾನಸ್ಟೇಬಲ್​ ನೇಮಕಾತಿ ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವವು ಪೊಲೀಸ್​ ಕಾನ್​ಸ್ಟೇಬಲ್​ ನೇಮಕಾತಿ ವಯೋಮಿತಿಯನ್ನು ಏರಿಕೆ ಮಾಡಬೇಕು ಎಂದು ಮನವಿ ಮಾಡಿದ್ದರು.


ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮನವಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋವಿಡ್​ ಅವಧಿಯಲ್ಲಿ ನಾವು ಪೊಲೀಸ್​ ನೇಮಕಾತಿ ಮಾಡಿಲ್ಲ ಎಂಬುದು ತಪ್ಪು ಮಾಹಿತಿಯಾಗಿದೆ. ಪೊಲೀಸ್​ ಕಾನ್​ಸ್ಟೇಬಲ್​ ನೇಮಕಾತಿ ವಯೋಮಿತಿ ಏರಿಕೆ ಮಾಡಿ ಅಂತಾ ನನಗೂ ಅನೇಕರು ಫೋನ್​ ಮಾಡುತ್ತಿರುತ್ತಾರೆ. ಆದರೆ ನಾವು ಕೋವಿಡ್​ ಅವಧಿಯಲ್ಲಿಯೂ ನೇಮಕಾತಿ ಮಾಡಿದ್ದೇವೆ. ಪೊಲೀಸ್​ ಹು್ದ್ದೆಗೆ ನೇಮಕಗೊಳ್ಳುವವರ ಶರೀರ ಫಿಟ್​ ಇರಬೇಕು. ಹೀಗಾಗಿ ನಾವು ವಯೋಮಿತಿ ಏರಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.


ರಾಜ್ಯದಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆಯಲ್ಲಿ ಕೊರತೆ ಉಂಟಾಗಿದೆ ಎಂಬ ಶಾಸಕ ಪ್ರೀತಂ ಗೌಡ ಆರೋಪಕ್ಕೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ರಾಜ್ಯದಲ್ಲಿ 22 ಸಾವಿರ ಪೊಲೀಸ್​ ಪೇದೆಗಳ ನೇಮಕಾತಿ ಬಾಕಿ ಉಳಿದಿತ್ತು. ಆದರೆ ಈಗ ಇದು 9430ಕ್ಕೆ ಬಂದು ಕುಸಿದಿದೆ. ನಮ್ಮ ಅವಧಿಯಲ್ಲಿ ನಾವು ಹೆಚ್ಚಿನ ಕಾನ್​ಸ್ಟೇಬಲ್​ ನೇಮಕಾತಿ ಮಾಡಿದ್ದೇವೆ. ಸಧ್ಯದಲ್ಲಿಯೇ 3500 ಕಾನ್​ಸ್ಟೇಬಲ್​ಗಳು ಹುದ್ದೆಗೆ ನೇಮಕಗೊಳ್ಳಲಿದ್ದಾರೆ. ಮತ್ತಷ್ಟು ಪೊಲೀಸ್​ ಕಾನ್​ಸ್ಟೇಬಲ್​ ನೇಮಕಾತಿಗೆ ಅಧಿಸೂಚನೆ ಶೀಘ್ರದಲ್ಲಿಯೇ ಹೊರಡಿಸುತ್ತೇವೆ ಎಂದು ಹೇಳಿದರು .

ಇದನ್ನು ಓದಿ : India Vs Australia T20 : ಮೊಹಾಲಿಯಲ್ಲಿ ನಾಳೆ ಮೊದಲ ಪಂದ್ಯ; ಹೀಗಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ : Yuvraj Singh SIX 6S : ಯುವಿ 6 ಸಿಕ್ಸರ್‌ಗಳ ವಿಶ್ವ ವಿಕ್ರಮಕ್ಕೆ ತುಂಬಿತು 15 ವರ್ಷ; ಮಗನ ಜೊತೆ ಕೂತು ಹೈಲೈಟ್ಸ್ ವೀಕ್ಷಿಸಿದ ಸಿಕ್ಸರ್ ಕಿಂಗ್

Disappointment for those who were expecting an increase in the age limit of police constables

Comments are closed.