Lok Sabha election 2024 : ನೊರೆಂಟು ಅಸಮಧಾನಗಳ ಬಳಿಕವೂ ರಾಜ್ಯದಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿಯಾಗಿದೆ. ಲೋಕಸಭೆ ಚುನಾವಣೆ ಯನ್ನು ಜಂಟಿಯಾಗಿ ಎದುರಿಸಲು ಸಿದ್ಧತೆ ನಡೆದಿದೆ. ಆದರೆ ಸದ್ಯ ಕ್ಷೇತ್ರ ಹಂಚಿಕೆ ತಿಕ್ಕಾಟ ಮಾತ್ರ ಕೊನೆಯಾಗುವ ಲಕ್ಷಣವೇ ಇಲ್ಲ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಲೋಕಸಭೆ ಚುನಾವಣೆವರೆಗಾದರೂ ಉಳಿಯುತ್ತಾ ಇಲ್ಲ ಮುರಿಯುತ್ತಾ ಅನ್ನೋ ಅನುಮಾನ ಸೃಷ್ಟಿಯಾಗಿದೆ. ಇದಕ್ಕೆ ಪೂರಕ ಎಂಬಂತೆ ಮತ್ತೊಮ್ಮೆ ಸೀಟು ಹಂಚಿಕೆ ಮಾತುಕತೆಗಾಗಿ ಮಾಜಿ ಪ್ರಧಾನಿ ದೇವೇಗೌಡರು ದೆಹಲಿಗೆ ದೌಡಾಯಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಬಳಿಕ ಮತ್ತೊಮ್ಮೆ ಬಿಜೆಪಿ ಜೊತೆ ಜೆಡಿಎಸ್ ಲೋಕಸಭೆ ಎಲೆಕ್ಷನ್ ಹೆಸರಲ್ಲಿ ಮೈತ್ರಿ ಮಾಡಿಕೊಂಡಿದೆ. ಮೂರು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡುವ ಒಪ್ಪಂದವಾಗಿದೆ ಎನ್ನಲಾಗ್ತಿದೆ. ಆದರೆ ಈಗ ಆ ಮೂರು ಕ್ಷೇತ್ರಗಳ ಹಂಚಿಕೆಯೇ ಮೈತ್ರಿ ನಾಯಕರಿಗೆ ತಲೆನೋವಾಗಿದ್ದು ಜೆಡಿಎಸ್ ವರಿಷ್ಠರು ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಮೂಡದ ಒಮ್ಮತ ಮೈತ್ರಿಯ ಬೇರುಗಳನ್ನು ಸಡಿಲಗೊಳಿಸಲಾರಂಭಿಸಿದೆ.
ಮೊದಲ ತಲೆನೋವಾಗಿರುವ ಕ್ಷೇತ್ರವೇ ಮಂಡ್ಯ. ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಸ್ವಾಭಿಮಾನದ ಸಂಕೇತ ಎಂಬಂತೆ ಸ್ವೀಕರಿಸಿದ್ದಾರೆ. ಇದೇ ಕಾರಣಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಹಾಲಿ ಸಂಸದೆ ಸುಮಲತಾ ಸುಲಭವಾಗಿ ಮಂಡ್ಯ ಬಿಟ್ಟುಕೊಡಲು ಸಿದ್ಧವಾಗ್ತಿಲ್ಲ.
ರಾಜ್ಯಸಭೆ ಸ್ಥಾನ ಹಾಗು ಕೇಂದ್ರ ಸಚಿವ ಸ್ಥಾನಕ್ಕೂ ಬಗ್ಗದ ಸುಮಲತಾ ಮಂಡ್ಯಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರು ಉತ್ತರಕ್ಕೆ ಸ್ಪರ್ಧಿಸುವ ಆಫರ್ ನ್ನು ಸುಮಲತಾ ನಿರಾಕರಿಸಿದ್ದಾರಂತೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಸುಮಲತಾರನ್ನು ನಿರ್ಲಕ್ಷ್ಯಿಸಲಾಗದೇ ಹಾಗೂ ಇತ್ತ ಕುಮಾರಸ್ವಾಮಿ ಅವರನ್ನು ಪುರಸ್ಕರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ : ಉತ್ತರದಲ್ಲಿ ಬಿಜೆಪಿ ದಿಗ್ವಿಜಯ : ಟ್ರೆಂಡ್ ಆಗ್ತಿದೆ ಮೋದಿ ಗ್ಯಾರಂಟಿ #ModiKiGuarantee
ಇನ್ನೊಂದೆಡೆ ಹಾಸನವೊಂದನ್ನು ಬಿಟ್ಟರೇ ಇನ್ಯಾವ ಕ್ಷೇತ್ರದಲ್ಲೂ ಜೆಡಿಎಸ್ ಬೇಡಿಕೆಗೆ ಬಿಜೆಪಿಯಿಂದ ಸಹಮತ ಸಿಕ್ಕಿಲ್ಲ. ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಚರ್ಚೆಯೇ ಬಿಜೆಪಿ ವಲಯದಲ್ಲಿ ಅಸಮಧಾನ ಮೂಡಿಸಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ 2024 : ಬಿಡುಗಡೆ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
Divorce on honeymoon: JDS-BJP alliance breaks up before Lok Sabha election 2024