ಸೋಮವಾರ, ಏಪ್ರಿಲ್ 28, 2025
HomekarnatakaEarthquake in Kodagu: ಕೊಡಗಿನಲ್ಲಿ ಮತ್ತೆ ಭೂಕಂಪನ ; ಆತಂಕದಲ್ಲಿ ಜನತೆ

Earthquake in Kodagu: ಕೊಡಗಿನಲ್ಲಿ ಮತ್ತೆ ಭೂಕಂಪನ ; ಆತಂಕದಲ್ಲಿ ಜನತೆ

- Advertisement -

ಕೊಡಗು(Kodagu) ಜಿಲ್ಲೆ ಇಂದು ಮತ್ತೆ ಭೂಕಂಪನಕ್ಕೆ ತುತ್ತಾಗಿದೆ. ಮಧ್ಯಾಹ್ನ ಸುಮಾರು 1.24ರ ಸುಮಾರಿಗೆ ಕೊಡಗಿನ ಚೆಮ್ಬು ಗ್ರಾಮದಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ. ಇದೀಗ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಆರು ಬಾರಿ ಭೂಕಂಪನ ಉಂಟಾಗಿದ್ದು, ಜನರು ಭೀತಿಗೆ ಒಳಪಟ್ಟಿದ್ದರೆ. ಮಡಿಕೇರಿ ಮಾತ್ರವಲ್ಲದೆ ದಕ್ಷಿಣ ಕನ್ನಡದ ಸುಳ್ಯ, ಸಂಪಾಜೆ, ಗೂನಡ್ಕ,ಕಲ್ಲುಗುಂಡಿಯಲ್ಲೂ ಭೂಕಂಪನದ ಅನುಭವ ಆಗಿದೆ. ಪದೇ ಪದೇ ಜಿಲ್ಲೆಯಲ್ಲಿ ಭೂಕಂಪನ ಉಂಟಾಗುತ್ತಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ(Earthquake in Kodagu).

ಈ ಹಿಂದೆ 2018 ರಲ್ಲಿ ಭೂಕಂಪ ಉಂಟಾಗಿ ಪ್ರಾಕೃತಿಕ ವಿಕೋಪ ಹಾಗು ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಇದೀಗ ಮತ್ತೆ ಭೂಕಂಪ ಉಂಟಾದ್ದರಿಂದ ಜನರು ಗೊಂದಲಕ್ಕೆ ಒಳಪಟ್ಟಿದ್ದಾರೆ . ವಾರದ ಹಿಂದೆ ನಡೆದ ಭೂಕಂಪನ ರಿಕ್ಟರ್ ಮಾಪಕದಲ್ಲಿ ಸುಮಾರು 2.7ರಷ್ಟು ದಾಖಲಾಗಿತ್ತು. ಈ ಕುರಿತು ರಾಜ್ಯ ವಿಪತ್ತು ನಿರ್ವಹಣಾ ಕೋಶ ಕೂಡ ದೃಢಪಡಿಸಿತ್ತು. ಭೂಕಂಪನದಿಂದಾಗಿ ಹಲವಾರು ಮನೆಗಳ ಗೋಡೆಗಳು ಕುಸಿದಿವೆ.

ಭೂಕಂಪನದ ಜೊತೆಗೆ, ಕಳೆದ ಎರಡು ಮೂರೂ ದಿನಗಳಿಂದ ಬಿಡದೆ ಮಳೆ ಸುರಿಯುತ್ತಿದ್ದು, ನೆರೆ ಉಂಟಾಗಿದೆ. ಮಾನಗಳೂರಿನಲ್ಲಿ ಬಹುತೇಕ ರಸ್ತೆಗಳು ಮೊನ್ನೆ ಸುರಿದ ಮಳೆಗೆ ಜಲಾವೃತವಾಗಿವೆ. ಇನ್ನು ಮಡಿಕೇರಿ ಹಾಗು ಉಡುಪಿಯಲ್ಲೂ ಭಾರಿ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಇದನ್ನು ಓದಿ : ಗುಡ್‌ ನ್ಯೂಸ್‌! ಮಹಿಳೆಯರಿಗಾಗಿ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ! Dry Skin Problem : ಒಣ ತ್ವಚೆಯ ಸಮಸ್ಯೆಯೇ ! ಮನೆಯಲ್ಲೇ ಮಾಡಬಹುದು ಸರಳ ಪರಿಹಾರ

ಇದನ್ನು ಓದಿ :Interesting Facts About Mulberry: ಮೋಡಿ ಮಾಡುವ ಮಲ್ಬೇರಿ ಹಣ್ಣಿನ ಕುರಿತು ನಿಮಗೆಷ್ಟು ಗೊತ್ತು!

ಇದನ್ನು ಓದಿ :Natural Plastic Café: ಪ್ಲಾಸ್ಟಿಕ್ ಕೊಟ್ಟು ಆಹಾರ ಖರೀದಿಸಬಹುದು! ಗುಜರಾತಲ್ಲಿದೆ ಹೀಗೊಂದು ಅಚ್ಚರಿಯ ಕೆಫೆ

(earthquake in Kodagu)

RELATED ARTICLES

Most Popular