ರಂಜಾನ್‌ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು (ಎಪ್ರಿಲ್ 10) ಸಾರ್ವತ್ರಿಕ ರಜೆ‌

Eid al fitr Ramdan : ಮಂಗಳೂರು : ಮುಸ್ಲೀಮರ ಪವಿತ್ರ ಹಬ್ಬ ಈದುಲ್‌ ಫಿತರ್‌ ಅನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು (ಎಪ್ರಿಲ್‌ 10) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಪ್ರಿಲ್‌ 10 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Eid al fitr Ramdan : ಮಂಗಳೂರು : ಮುಸ್ಲೀಮರ ಪವಿತ್ರ ಹಬ್ಬ ಈದುಲ್‌ ಫಿತರ್‌ ಅನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು (ಎಪ್ರಿಲ್‌ 10) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಪ್ರಿಲ್‌ 10 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Eid al fitr Ramdan ramzan Public holiday in South Kannada district April 10
Image Credit to Original Source

ಕೇರಳದ ಪೊನ್ನಾನಿ ಎಂಬಲ್ಲಿ ಚಂದ್ರದರ್ಶನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎಪ್ರಿಲ್‌ 10 ರಂದು ಈದುಲ್‌ ಫಿತರ್‌ ಆಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‌ಹಾಜ್‌ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಅವರು ಸೂಚಿಸಿದ್ದರು. ಕೇರಳದಲ್ಲಿ ಚಂದ್ರದರ್ಶನದ ಹಿನ್ನೆಲೆಯಲ್ಲಿ ಎಪ್ರಿಲ್‌ ೧೦ರಂದು ರಂಜಾನ್‌ ಹಬ್ಬ ಆಚರಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್‌ ಖಾಜಿ ಅಬ್ದುಲ್‌ ಹಮೀದ್‌ ಮುಸ್ಲಿಯಾರ್‌ ಮಾಣಿ ಉಸ್ತಾದ್‌ ಅವರು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ರಂಜಾನ್‌ ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ : ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ ಹಲವು ರೋಗ

ರಾಜ್ಯದಾದ್ಯಂತ ಎಪ್ರಿಲ್‌ 11 ರಂದು ರಂಜಾನ್‌ ಹಬ್ಬದ ಪ್ರಯುಕ್ತ ರಜೆಯನ್ನು ಘೋಷಿಸಲಾಗಿತ್ತು. ಆದರೆ ದಕ್ಷಿಣ ಜಿಲ್ಲೆಯಲ್ಲಿ ಖುತುಬ್‌ – ಎ- ರಂಜಾನ್‌ ಹಬ್ಬದ ರಜೆಯನ್ನು ಎಪ್ರಿಲ್‌ 10 ಕ್ಕೆ ಪರಿವರ್ತನೆ ಮಾಡುವಂತೆ ಕರ್ನಾಟಕ ರಾಜ್ಯ ಸರಕಾರ ಅಧೀನ ಕಾರ್ಯದರ್ಶಿ ವಿಜಯ ಕುಮಾರ್‌ ಎಚ್.ಬಿ ಅವರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಬುಧವಾರ ರಂಜಾನ್‌ ರಜೆಯನ್ನು ಘೋಷಣೆ ಮಾಡಲಾಗಿದೆ.ರಂಜಾನ್‌ ಹಬ್ಬವನ್ನು ಚಂದ್ರದರ್ಶನವಾದ ನಂತರವೇ ಆಚರಿಸಲಾಗುತ್ತಿದೆ. ನಿನ್ನೆ ಪ್ರಥಮ ಚಂದ್ರದರ್ಶನವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಇಂದೇ ರಂಜಾನ್‌ ಹಬ್ಬವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ : ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ

Eid al fitr Ramdan : ramzan Public holiday in South Kannada district (April 10).

Comments are closed.