ಬೆಂಗಳೂರು : (Agriculture Budget 2023) 2023 ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿಮಂಡನೆಯಾಗಿರುವ ಬಜೆಟ್ ಕೆಲ ವರ್ಗಕ್ಕೆ ಕಹಿಯಾದರೇ ಹಲವು ವರ್ಗಕ್ಕೆ ಸಿಹಿಹಂಚಿದೆ. ಈ ಪೈಕಿ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಗೆ ಬೊಮ್ಮಾಯಿ ಭರ್ಜರಿ ಯೋಜನೆ ಘೋಷಿಸಿದ್ದು ಅನ್ನದಾತರ ಮುಖದಲ್ಲಿ ನಗು ಮೂಡಿಸಿದ್ದಾರೆ. ಹಾಗಿದ್ದರೇ ಕೃಷಿಕ್ಷೇತ್ರಕ್ಕೆ ಬಜೆಟ್ ನಲ್ಲಿ (ಬೆಂಗಳೂರು : (Agriculture Budget 2023) 2023 ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿಮಂಡನೆಯಾಗಿರುವ ಬಜೆಟ್ ಕೆಲ ವರ್ಗಕ್ಕೆ ಕಹಿಯಾದರೇ ಹಲವು ವರ್ಗಕ್ಕೆ ) ಏನೆಲ್ಲ ಸಿಕ್ಕಿದೆ ಅನ್ನೋದನ್ನು ನೋಡೋದಾದರೇ,
- ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023 24ನೇ ಸಾಲಿನಲ್ಲಿ ಒಟ್ಟಾರೆ 39,031 ಕೋಟಿ ರೂ ಅನುದಾನ ಘೋಷಣೆಯಾಗಿದೆ.
- ಪಿಎಂ ಕಿಸಾನ್ ಯೋಜನೆಗೆ ಕಳೆದ ಮೂರು ವರ್ಷದಲ್ಲಿ ರಾಜ್ಯ ಸರ್ಕಾರದ ತಲಾ 4822 ಕೋಟಿ ರೂ ನಂತೆ ಒಟ್ಟಾರೆ 15,752 ಕೋಟಿ ರೂಗಳನ್ನು ರೈತರ ಖಾತೆಗೆ ನೇರ ಜಮೆಯಾಗಿದೆ.
- ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಅನುದಾನ. ಕೃಷಿಯಂತ್ರೀಕರಣ ಉತ್ತೇಜನಕ್ಕೆ 2037 ಕೋಟಿ ರೂ ನೀಡಿಕೆ.ಕೃಷಿ ಮತ್ತು ತೋಟಗಾರಿಕೆ ಹನಿ ನೀರಾವರಿಗೆ 2900 ಕೋಟಿ ರೂ ಮಾರುಕಟ್ಟೆ ನೆರವು.ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ ರೂ.962 ಕೋಟಿ ವೆಚ್ಚ.
- ನೀರಾವರಿ ಪಂಪ್ಸೆಟ್ ಗೆ 52,590 ಕೋಟಿ ರೂ ವಿದ್ಯುತ್ ಸಹಾಯಧನ.ಫಸಲ್ ಭೀಮಾ ಯೋಜನೆ ಅಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ ರೂ.4,900 ಕೋಟಿ ಪಾವತಿ
- ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ರಾಗಿ ಜೋಳ ಹೆಸರುಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗೆ 6650 ಕೋಟಿ.
- ಬೆಳೆಗಳ ಸಂರಕ್ಷಣೆ ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ 175 ಕೋಟಿ ರೂ ನೆರವು.ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕೆ 545 ಕೋಟಿ ರೂ ವೆಚ್ಚ
- ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 725 ಕೋಟಿ ರೂ ನೀಡಿಕೆ.ರಾಜ್ಯದ 3.6 ಲಕ್ಷ ರೈತರ ಅನುಕೂಲಕ್ಕೆ 2022 23ನೇ ಸಾಲಿನಲ್ಲಿ ಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಪ್ರತಿ ಕ್ವಿಂಟಲ್ ಗೆ 3578 ರೂ. ನಂತೆ 1879 ಕೋಟಿ ರೂ. ವೆಚ್ಚ. 75,000 ರೈತರಿಂದ ಭತ್ತ ಹಾಗೂ 40,000 ರೈತರಿಂದ ಬಿಳಿ ಜೋಳ ಖರೀದಿಗೆ 1072 ಕೋಟಿ ರೂಪಾಯಿ. ಈ ಸಾರಿ ಕುಚಲಕ್ಕಿ ಖರೀದಿಗೂ ಸಹ ಪ್ರೋತ್ಸಾಹ
- 2022 23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2031 ಕೋಟಿ ರೂಗಳನ್ನು ಎರಡು ತಿಂಗಳ ಅವಧಿಯೊಳಗೆ ಜಮೆ.
- ಬೀದರ್ ಕಲಬುರ್ಗಿ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಹೆಕ್ಟರಿಗೆ 10,000 ರೂ ನಂತೆ 223 ಕೋಟಿ ರೂ ಪರಿಹಾರ.
- ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರೈತ ಅರ್ಪಾವತಿ ಸಾಲದ ಮಿತಿಯನ್ನು ಮೂರು ಲಕ್ಷ ರೂ ನಿಂದ 5 ಲಕ್ಷ ರೂಗೆ ಏರಿಕೆ.ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25000 ಕೋಟಿ ರೂಗಳಷ್ಟು ಸಾಲ ವಿತರಿಸುವ ಗುರಿ
- ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ನೂತನ ಯೋಜನೆ ಅಡಿ 2023 24ನೇ ಸಾಲಿನಲ್ಲಿ 10,000 ರೂ. ಹೆಚ್ಚುವರಿ ಸಹಾಯಧನ ನೀಡಲು ನಿರ್ಧಾರ ಸುಮಾರು 50 ಲಕ್ಷ ರೈತರಿಗೆ ಇದರಿಂದ ಅನುಕೂಲ
- ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ನೆರವಿನೊಂದಿಗೆ ಬದುಕಿನ ಭದ್ರತೆ
- ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶ. 2023 24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಗಳಿಗೆ 50 ಲಕ್ಷ ರೂ ನಂತೆ 50 ಕೋಟಿ ರೂ ನೀಡಿಕೆ.
- ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹಕ್ಕೆ ತಲಾ ಹತ್ತು ಲಕ್ಷ ರೂ ವರೆಗಿನ ಬಂಡವಾಳಕ್ಕೆ ಐದು ವರ್ಷಗಳ ಅವಧಿಗೆ ಬ್ಯಾಂಕುಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆ ಅಡಿ ಬಡ್ಡಿ ಸಹಾಯಧನ ನೀಡಿಕೆ.
- ರೈತಸಿರಿ ಯೋಜನೆ ಅಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರಿಗೆ 10 ಸಾವಿರ ರೂಗಳ ಪ್ರೋತ್ಸಾಹ ಧನ ನೀಡಲು ನಿರ್ಧಾರ.
- ಪ್ರತಿ ತಾಲೂಕಿಗೆ ಒಂದರಂತೆ ತಲ 50 ಹೆಕ್ಟೆ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಒಂದು ಲಕ್ಷ ಹೆಕ್ಟರ್ ಪ್ರದೇಶವನ್ನ ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸುವುದು
- ಸಹಸ್ರ ಸರೋವರ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿ. ಸಹ್ಯಾದ್ರಿ ಸಿರಿ ಯೋಜನೆ ಅಡಿ ಕರಾವಳಿ ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶದಲ್ಲಿ ಬೇಸಿಗೆ ನೀರು ಸಂಸ್ಕರಣೆಗೆ ಬಾವಿ ಕಿಂಡಿ ಅಣೆ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡು ಯೋಜನೆಗಳಿಗೆ 75 ಕೋಟಿ ರೂ ಅನುದಾನ.
- ಕೊಯ್ಲೋತ್ತರ ತಂತ್ರಜ್ಞಾನಕ್ಕೆ ಒತ್ತುಕೊಟ್ಟು ತೋಟಗಾರಿಕಾ ಬೆಳೆ ಮೌಲ್ಯವರ್ಧನೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆಯ ಉತ್ತೇಜನಕ್ಕೆ ರೈತ ಸಂಪದ ಯೋಜನೆ ಅಡಿ ಕೆಫೆಕ್ ಸಂಸ್ಥೆಯ ಮೂಲಕ 100 ಕೋಟಿ ರೂಗಳಲ್ಲಿ ಯೋಜನೆ ರೂಪಿಸಲು ನಿರ್ಧಾರ.
- ತೋಟಗಾರಿಕೆ ಇಲಾಖೆ ಅಡಿ 12 ತೋಟಗಳಲ್ಲಿ ಒಂದು ತೋಟ ಒಂದು ಬೆಳೆ ಯೋಜನೆ ಅಡಿ ಉತ್ಪಾದಕತೆ ಹೆಚ್ಚಿಸಲು 10 ಕೋಟಿ ರೂಗಳ ಒಂದು ಬಾರಿಯ ವಿಶೇಷ ಅನುದಾನ.
- ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಹತ್ತು ಕೋಟಿ ರೂ ನೆರವು
- ತುಮಕೂರು ಜಿಲ್ಲೆ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ
- ದ್ರಾಕ್ಷಿ ಬೆಳಗಾರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾ ರಸ ಮಂಡಳಿ ಮುಖಾಂತರ 100 ಕೋಟಿ ರೂಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ
- ರೇಷ್ಮೆ ಬೆಳೆಯನ್ನು 10,000 ಎಕರೆಷ್ಟು ಪ್ರದೇಶಕ್ಕೆ ವಿಸ್ತರಿಸಲು ತೀರ್ಮಾನ
- ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆ ಅಡಿ 75 ಕೋಟಿ ರೂಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
- 32 ಸ್ವಯಂ ಚಾಲಿತ ರೈಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂಪಾಯಿ ಹಾಗೂ ಸಾವಿರ ರೇಷ್ಮೆ ಬೆಳೆಗಾರರಿಗೆ ಶ್ರೆಡ್ಡರ್ಸ್ ಗಳನ್ನು ಒದಗಿಸಲು 12 ಕೋಟಿ ರೂಗಳ ನೆರವು.
- ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಬಲಪಡಿಸಲು ಎಂಟು ಕೋಟಿ ರೂ ಅನುದಾನ
- ರಾಜ್ಯದ 10 ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಡ್ರೈಯರ್ ಅಳವಡಿಸಲು 5 ಕೋಟಿ ರೂ ಅನುದಾನ.
- ಚರ್ಮ ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ 55 ಕೋಟಿ ಪರಿಹಾರ ಮಂಜೂರು
- ರಾಜ್ಯದ ಒಂಬತ್ತು ಹಾಲು ಉತ್ಪಾದಕರಿಗೆ 1067 ಕೋಟಿ ಪ್ರೋತ್ಸಾಹ ಧನ
- ಹಾವೇರಿ 1, ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ ಅನುದಾನ
- ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಬಳ್ಳಾರಿಯಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕಾರಣ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ 100 ಕೋಟಿ ರೂಪಾಯಿ ವೆಚ್ಚ
- ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂಗಳ ವೆಚ್ಚದಲ್ಲಿ ಕುರಿ ಮೇಕೆ ಘಟಕ ಸ್ಥಾಪಿಸುವ ಯೋಜನೆ ಜಾರಿ
- ರೈತ ಮಹಿಳೆಯಲ್ಲಿ ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು 2022 23ನೇ ಸಾಲಿನಲ್ಲಿ 16 642 ಫಲಾನುಭವಿಗಳಿಗೆ 3.33 ಲಕ್ಷ ಕೋಳಿ ಮರಿ ವಿತರಣೆ
- ಮುಧೋಳ ಜಾತಿಯ ಶ್ವಾನ ತಳಿ ಅಭಿವೃದ್ಧಿಗಾಗಿ 5 ಕೋಟಿ ಅನುದಾನ. ಬೀದಿ ನಾಯಿ ದತ್ತು ಕಾರ್ಯಕ್ರಮಕ್ಕೆ ವಿಶೇಷ ಆನ್ಲೈನ್ ತಂತ್ರಾಂಶ ಅಭಿವೃದ್ಧಿ
- ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ ಅನುದಾನ ನೀಡಿಕೆ ಸಂಚಾರಿ ಚಿಕಿತ್ಸಾಲಯ ನಿರ್ಮಿಸಲು ಕ್ರಮ
- ಮೀನುಗಾರಿಕೆ ನೆರವಾಗಲು 62 ಎಫ್ ಎಫ್ ಪಿಓ ಗಳ ಸ್ಥಾಪನೆಗೆ 12,175 ಮೀನುಗಾರಿಕೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
- ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿ ದಾಸ್ತಾನಿಗೆ ಪ್ರೋತ್ಸಾಹಿಸಲು 20 ಕೋಟಿ ಅನುದಾನ.
- ಮೀನುಗಾರರ ಹಾಗೂ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂಗಳ ಅನುದಾನದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಜಿಪಿಎಸ್ ಸಂಮೋಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರಿಕೃತ ಮೀನುಗಾರಿಕೆ ದೋಣಿಗೆ ಅಳವಡಿಕೆ
- ಮೀನುಗಾರಿಕೆ ವಸತಿ ಸೌಕರ್ಯ ಕಲ್ಪಿಸಲು ವಸತಿ ರಹಿತರಿಗೆ ಈ ಸಾರಿ 10,000 ವಸತಿ ನಿರ್ಮಾಣ
- ಆವರ್ತ ನಿಧಿ ಬಲಪಡಿಸುವ ಉದ್ದೇಶದಿಂದ ಪ್ರಸಕ್ತ ಆಯುರ್ವೇದನೆ 1500 ಕೋಟಿಗಳನ್ನು ಒದಗಿಸಿ 3500 ಕೋಟಿಗೆ ಏರಿಸಲಾಗುವುದು.
- ಸಮುದ್ರ ಸೇರುವ ನೀರು ತಡೆಹಿಡಿದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಉಪಯೋಗಿಸಲು ರೂಪಿಸಲಾಗಿರುವ ಪಶ್ಚಿಮ ವಾಹಿನಿ ಯೋಜನೆಯ ಎರಡನೇ ಹಂತದಡಿ ಅನುಮೋದನೆಯಾಗಿರುವ 378 ಕೋಟಿ ರೂಗಳ ಕಾಮಗಾರಿ ಅನುಷ್ಠಾನ.
- ಪ್ರಸಕ್ತ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಸುಮಾರು 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯದ ಸೃಜೀಕರಣ
- ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿ ಉತ್ಪಾದನೆ ಹೆಚ್ಚಿಸಲು ಪ್ರಸಾತ್ತ ವರ್ಷದಲ್ಲಿ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25,000 ಕೊಟಿ ರೂ.ಗಳನ್ನ ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ಬಜೆಟ್ ಗೆ ಸಿದ್ದರಾಮಯ್ಯ ವಿಭಿನ್ನ ಪ್ರತಿಭಟನೆ: ಕಿವಿ ಮೇಲೆ ಕೇಸರಿ ಹೂವಿಟ್ಟುಕೊಂಡು ಬಂದ ವಿಪಕ್ಷ ನಾಯಕ
ಇದನ್ನೂ ಓದಿ : Karnataka Budget 2023 : CRZ ಮಾನದಂಡ ಸರಳೀಕರಣ : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆ
Farmers friendly Budget for Karnataka Budget 2023 Agriculture Budget 2023