Ashwin 700 wickets : 700 ವಿಕೆಟ್’ಗಳ ಸರದಾರನಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್

ದೆಹಲಿ: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ 700 ವಿಕೆಟ್’ಗಳ (Ashwin 700 wickets ) ಸರದಾರನಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India vs Australia Border-Gavaskar test series) 2ನೇ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್’ಮನ್ ಮಾರ್ನಸ್ ಲಬುಶೇನ್ ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್ (Ravichandran Ashwin) 700 ವಿಕೆಟ್’ಗಳ ಮೈಲುಗಲ್ಲು ನೆಟ್ಟರು.

36 ವರ್ಷ ವಯಸ್ಸಿನ ಅಶ್ವಿನ್ 700 ವಿಕೆಟ್ ಪಡೆದಿರುವುದು ಟೆಸ್ಟ್ ಕ್ರಿಕೆಟ್’ನಲ್ಲಲ್ಲ, ಬದಲಾಗಿ ಒಟ್ಟಾರೆ ಪ್ರಥಮದರ್ಜೆ ಕ್ರಿಕೆಟ್’ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ದೆಹಲಿ ಟೆಸ್ಟ್ ಪಂದ್ಯಕ್ಕೂ ಮುನ್ನ 145 ಪ್ರಥಮದರ್ಜೆ ಪಂದ್ಯಗಳಿಂದ 699 ವಿಕೆಟ್ ಕಬಳಿಸಿದ್ದ ಅಶ್ವಿನ್, ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 700 ವಿಕೆಟ್’ಗಳ ಕ್ಲಬ್ ಸೇರಿದರು. ಮಾರ್ನಸ್ ಲಬುಶೇನ್ ವಿಕೆಟ್ ಪಡೆದ ಎರಡೇ ಎಸೆತಗಳ ಅಂತರದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರನ್ನ ಅಶ್ವಿನ್ ಶೂನ್ಯಕ್ಕೆ ಪೆವಿಲಿಯನ್’ಗಟ್ಟಿದರು.

ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಅಶ್ವಿನ್ ಪಡೆದಿರುವ ಒಟ್ಟು 701 ವಿಕೆಟ್’ಗಳಲ್ಲಿ 459 ವಿಕೆಟ್’ಗಳನ್ನು
ಟೆಸ್ಟ್ ಕ್ರಿಕೆಟ್’ನಲ್ಲಿ ಕಬಳಿಸಿದ್ದಾರೆ. ಸ್ಪಿನ್ ಮಾಂತ್ರಿಕ ಅಶ್ವಿನ್ 90ನೇ ಟೆಸ್ಟ್ ಪಂದ್ಯವಾಡುತ್ತಿದ್ದು, 31 ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್’ಗಳ ಸಾಧನೆ ಮಾಡಿದ್ದಾರೆ. 7 ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್’ಗಳ ಸಾಧನೆ ಮಾಡಿದ್ದಾರೆ.

ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಆರ್.ಅಶ್ವಿನ್ ಬೌಲಿಂಗ್ ಸಾಧನೆ
ಪಂದ್ಯ: 146
ವಿಕೆಟ್: 701
ಬೆಸ್ಟ್ ಬೌಲಿಂಗ್: 7/59
5 ವಿಕೆಟ್: 50
10 ವಿಕೆಟ್: 11

ಇದನ್ನೂ ಓದಿ : Prithvi Shaw : ಪೃಥ್ವಿ ಶಾ ಮೇಲೆ ಕಾರಿನ ಮೇಲೆ ಪುಂಡರ ದಾಳಿ, ಬೇಸ್ ಬಾಲ್ ಬ್ಯಾಟ್‌ನಿಂದ ಹಲ್ಲೆಗೆ ಯತ್ನ; ಅಷ್ಟಕ್ಕೂ ಅಲ್ಲಿ ಆಗಿದ್ದೇನು ?

ಇದನ್ನೂ ಓದಿ : Cheteshwar Pujara : ನಾಳೆಯಿಂದ ಭಾರತ Vs ಆಸೀಸ್ 2ನೇ ಟೆಸ್ಟ್, 100ನೇ ಟೆಸ್ಟ್ ಸಂಭ್ರಮದಲ್ಲಿ ಚೇತೇಶ್ವರ್ ಪೂಜಾರ

ಇದನ್ನೂ ಓದಿ : Jasprit Bumrah : ಆಸೀಸ್ ವಿರುದ್ಧದ ಏಕದಿನ ಸರಣಿಗೂ ಟೀಮ್ ಇಂಡಿಯಾ ಸ್ಟಾರ್ ಔಟ್, ಐಪಿಎಲ್‌ನಲ್ಲಿ ಆಡಲು ಇಷ್ಟೆಲ್ಲಾ ನಾಟಕ

ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರು ಸಾಲಿನಲ್ಲಿ ಅಶ್ವಿನ್ 2ನೇ ಸ್ಧಾನದಲ್ಲಿದ್ದಾರೆ. ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 619 ವಿಕೆಟ್’ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರಲ್ಲಿ ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : Babar Azam Vs Smriti Mandhana : ಪಾಕಿಸ್ತಾನದ ಬಾಬರ್ ಅಜಮ್ PSL ಸಂಬಳಕ್ಕಿಂತ ಸ್ಮೃತಿ ಮಂಧನ WPL ಸಂಭಾವನೆಯೇ ಹೆಚ್ಚು

Ashwin 700 wickets: Spin wizard Ravichandran Ashwin is the leader of 700 wickets.

Comments are closed.