Karkala ಕಾಂಗ್ರೆಸ್‌ ಅಭ್ಯರ್ಥಿ ಉದಯಕುಮಾರ್‌ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಒತ್ತಾಯ

ಕಾರ್ಕಳ (Karkala) : ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉದಯ ಕುಮಾರ್‌ ಶೆಟ್ಟಿ (Uday Kumar Shetty Muniyal) ಅವರ ಅನುಯಾಯಿಗಳು ಪರಸ್ಪರ ದ್ವೇಷಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ಕುರಿತು ಉದಯ ಕುಮಾರ್‌ ಶೆಟ್ಟಿ ಅವರ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಅವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಉದಯ ಕುಮಾರ್‌ ಶೆಟ್ಟಿ ಅವರ ಕುಮ್ಮಕ್ಕಿನಿಂದ ಬಿಜೆಪಿ ಕಾರ್ಯಕರ್ತನ ತೇಜೋವಧೆ ಮಾಡಿರುವುದು ಮಾತ್ರವಲ್ಲದೇ ಕ್ಷೇತ್ರದ ಮಹಿಳೆಯರಿಗೂ ಅಪಮಾನ ಮಾಡಲಾಗಿದೆ. ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಕಾರ್ಕಳದಲ್ಲಿ ( Karkala) ಚುನಾವಣಾ ವಾತಾವರಣವನ್ನು ಕಲುಷಿತ ಮಾಡಲಾಗಿದೆ. ಅಲ್ಲದೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಖಾಸಗಿ ವಾಹಿನಿಯ ಎಂಡಿ ರಾಕೇಶ್‌ ಶೆಟ್ಟಿ ಅವರು ಮುದ್ರಿತ ವಿಡಿಯೋ ರೆಕಾರ್ಡ್‌ ಹರಿಬಿಟ್ಟಿದ್ದು, ವಿಡಿಯೋದಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ ಅವರನ್ನು ನಿಂಧಿಸಲಾಗಿದ್ದು, ವೈಯಕ್ತಿಕ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನು ಖಾಸಗಿ ವಾಹಿನಿ ಹರಿಬಿಟ್ಟಿರುವ ವಿಡಿಯೋದಲ್ಲಿ ಬಿಜೆಪಿ ನಾಯಕರಿಗೆ ಮುಜುಗರ ತಂದ ವಿಡಿಯೋ ಪ್ರಕರಣ, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಬೆಂಬಲಿಗನ ವಿಡಿಯೋ ಎಂದೆಲ್ಲಾ ಸುದ್ದಿ ಹಬ್ಬಿಸಿ ಎಲ್ಲೆಡೆ ಚರ್ಚೆ, ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇನ್ನು ರಾಸಲೀಲೆ ವಿಡಿಯೋ ವಿಷಯದಲ್ಲಿ ಯೋಗಿಗೆ ಬಾರಿ ಮುಜುಗರ ಎಂಬ ಶೀರ್ಷಿಕೆ ಯಡಿಯಲ್ಲಿ ಸುದ್ದಿ ಹರಿದಾಡುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಸುನಿಲ್‌ ಕುಮಾರ್‌, ಕಾಂಗ್ರೆಸ್‌ ನಿಂದ ಉದಯ ಕುಮಾರ್‌ ಶೆಟ್ಟಿ ಹಾಗೂ ಪಕ್ಷೇತರರಾಗಿ ಪ್ರಮೋದ್‌ ಮುತಾಲಿಕ್‌ ಅವರು ಸ್ಪರ್ಧಿಸುತ್ತಿದ್ದಾರೆ. ತ್ರಿಕೋನ ಸ್ಪರ್ಧೆಯಿಂದಾಗಿ ಸ್ಪರ್ಧಾಕಣ ರಂಗೇರಿದೆ.

ಇದನ್ನೂ ಓದಿ : ಮೋದಿ ಮೆಗಾ ರೋಡ್ ಶೋ: ಮೂರು ದಿನ ರಾಜ್ಯದಲ್ಲಿ ಪ್ರಧಾನಿ ಮತಬೇಟೆ

ಇದನ್ನೂ ಓದಿ : ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರಿಗೆ ಅಭಯ ನೀಡಿದ ಪಂಜುರ್ಲಿ ದೈವ

ಇದನ್ನೂ ಓದಿ : ಬೈಂದೂರಲ್ಲಿ ಪೂಜಾರಿ Vs ಬಂಟರ ಕದನ; ಗೋಪಾಲ ಪೂಜಾರಿ ಎದುರು ಗೆಲ್ತಾರಾ ಗುರುರಾಜ್‌ ಗಂಟಿಹೊಳೆ ?

Comments are closed.