flood effect actor Jaggesh house : ರಾಜ್ಯಸಭಾ ಸದಸ್ಯ ಜಗ್ಗೇಶ್ ಮನೆಗೂ ನೆರೆನೀರು : ಟ್ವೀಟರ್ ನಲ್ಲಿ ದುಃಖತೋಡಿಕೊಂಡ ನವರಸ ನಾಯಕ

ಬೆಂಗಳೂರು : (flood effect actor Jaggesh house) ಜನಸಾಮಾನ್ಯರ ಮನೆ ನೀರು ಪಾಲಾಗೋದು, ಬಡವರ ಮನೆಗೆ ಮಳೆ‌ನೀರು ನುಗ್ಗೋದು ಅವರು ಅತ್ತು ಕರೆದು ಗೋಳಾಡೋದು ಕಾಮನ್. ಆದರೆ ಇಲ್ಲಿ ರಾಜ್ಯ ಸಭಾ ಸದಸ್ಯರೊಬ್ಬರು ತಮ್ಮ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ದುಃಖ ತೋಡಿಕೊಂಡು ಸುದ್ದಿ ಆಗಿದ್ದಾರೆ. ಹೌದು ಇತ್ತೀಚಿಗೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಚಿತ್ರನಟ ಜಗ್ಗೇಶ್ ಮನೆ ಇತ್ತೀಚಿಗೆ ಸುರಿದ ಭಾರಿ‌ ಮಳೆಗೆ ನೀರಿಗಾಹುತಿ ಯಾಗಿದೆಯಂತೆ. ಮನೆಯ ತುಂಬ ನೀರು ತುಂಬಿದ ಪೋಟೋಗಳನ್ನು ಸ್ವತಃ ಜಗ್ಗೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕೊಂಚ ಕಟುವಾಗಿ ಟೀಕಿಸಿದ್ದಾರೆ.

ಚಿತ್ರನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಪ್ರಸ್ತುತ ಶ್ರೀರಾಮಪುರದಲ್ಲಿ ವಾಸವಾಗಿದ್ದರೂ ಕೂಡ ಅವರ ಸ್ವಂತ ಊರು ತುಮಕೂರಿನ ಮಾಯಸಂದ್ರ. ಅಲ್ಲಿ ಅವರ ಕುಟುಂಬದ ಮನೆ ಹಾಗೂ ದೇವಸ್ಥಾನಗಳು ಇವೆ. ಹೀಗಾಗಿ ಸದಾಕಾಲ ನಟ ಜಗ್ಗೇಶ್ ಮಾಯಸಂದ್ರಕ್ಕೆ ಭೇಟಿ ಕೊಡುತ್ತಲೇ ಇರುತ್ತಾರೆ. ಮತ್ತು ಎಲ್ಲ ಸಂದರ್ಭದಲ್ಲೂ ತಾವು ಮಾಯಸಂದ್ರದಿಂದ ಈ ಎತ್ತರಕ್ಕೆ ಬೆಳೆದಿದ್ದನ್ನು ಜಗ್ಗೇಶ್ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಮೊನ್ನೆಯಿಂದ ರಾಜ್ಯದಾದ್ಯಂತ ಭಾರಿ‌ಮಳೆ ಸುರಿಯುತ್ತಿದ್ದು, ತುಮಕೂರಿನಲ್ಲಿ ಭಾರಿ‌ಮಳೆ ಸುರಿದಿದೆ. ಹೀಗಾಗಿ ಮಾಯಸಂದ್ರದ ಜಗ್ಗೇಶ್ ನಿವಾಸ ಕ್ಕೆ ನೀರು ತುಂಬಿದೆ. ಜಗ್ಗೇಶ್ ನಿವಾಸದ ದೇವರಕೋಣೆ, ಹಾಲ್ ಸೇರಿದಂತೆ ಎಲ್ಲೆಡೆ ನೀರು ತುಂಬಿದೆ.

ಈ ಬಗ್ಗೆ ಬೇಸರದಿಂದ ಟ್ವೀಟ್ ಮಾಡಿರೋ ಜಗ್ಗೇಶ್, ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತಗೊಂಡಿದೆ.ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆ ಕಟ್ಟಿ ನೀರು ಹರಿವ ಹೊಂಡಗಳನ್ನು ಮುಚ್ಚಿದ್ದಾರೆ. ಮಾಯಸಂದ್ರದ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನೀರು ಹರಿವ ಹೊಂಡ ಗಳನ್ನು ಮುಚ್ಚಿದ್ದಾರೆ.ದಯಮಾಡಿ ನೀರಾವರಿ ನಿಗಮದವರು ಗಮನ ಹರಿಸಿ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ‌.

ಮಾತ್ರವಲ್ಲ ಇದೇ ಟ್ವೀಟ್ ನ್ನು ಸಿಎಂಗೂ ಟ್ಯಾಗ್ ಮಾಡಿದ್ದಾರೆ. ಜಗ್ಗೇಶ್ ಈ ಟ್ವೀಟ್ ಸಖತ್ ವೈರಲ್ ಆಗಿದ್ದು, ರಾಜ್ಯಸಭಾ ಸದಸ್ಯರ ಮನೆಯ ಕತೆಯೇ ಹೀಗಾಗಿದ್ದರೇ ನಮ್ಮಂಥವರ ಪಾಡೇನು ಎಂದು ಜನಸಾಮಾನ್ಯರು ಕಮೆಂಟ್ ಮಾಡ್ತಿದ್ದಾರೆ. ಇನ್ನು ಕೆಲವರು ನಿಮಗೆ ಕಷ್ಟವಾದರೇ ಎಷ್ಟು ಬೇಗ ಸಂಬಂಧಿಸಿದವರ ಗಮನಕ್ಕೆ ತರುತ್ತೀರಿ ಅಲ್ವಾ? ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಲು ಇಷ್ಟು ಕಾಳಜಿ ಇರೋದಿಲ್ಲವೇ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ನಕಲಿ ಪೊಲೀಸ್, ಪತ್ರಕರ್ತರ ಖತರ್ನಾಕ್ ಗ್ಯಾಂಗ್ ಅಂದರ್

ಇದನ್ನೂ ಓದಿ : ಬಲವಂತ ಚಂದಾ ವಸೂಲಿ ಮಾಡಂಗಿಲ್ಲ,ಕಂಡಕಂಡಲ್ಲಿ ಬ್ಯಾನರ್ ಕಟ್ಟೋ ಹಾಗಿಲ್ಲ : ಹೀಗಿದೆ ನೋಡಿ ಗಣೇಶೋತ್ಸವ ನಿಯಮ

flood effect Rajya Sabha member actor Jaggesh house

Comments are closed.