former cm hd kumaraswamy : ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು : former cm hd kumaraswamy : ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ದೃಢಪಟ್ಟಿದೆ. ಈ ಸಂಬಂಧ ಹೆಚ್​.ಡಿ ಕುಮಾರಸ್ವಾಮಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ . ಕಳೆದ ಕೆಲವು ತಿಂಗಳ ಹಿಂದೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಕೂಡ ಕೊರೊನಾ ಸೋಂಕಿಗೆ ಒಳಗಾಗಿ ಬಳಿಕ ಗುಣಮುಖರಾಗಿದ್ದರು.

ನನಗೆ ಸಣ್ಣ ಪ್ರಮಾಣದಲ್ಲಿ ಮೈ -ಕೈ ನೋವು ಹಾಗೂ ಜ್ವರ ಕಾಣಿಸಿಕೊಂಡಿದ್ದು ಕೋವಿಡ್​ ಪರೀಕ್ಷೆ ನಡೆಸಿದಾಗ ನನಗೆ ಕೋವಿಡ್​ ಪಾಸಿಟಿವ್​ ಎಂದು ಬಂದಿದೆ. ಕೋವಿಡ್​ ಲಕ್ಷಣಗಳು ಇರುವುದರಿಂದ ವೈದ್ಯರು ಹೋಮ್​ ಐಸೋಲೇಷನ್​ನಲ್ಲಿದ್ದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟ್ವೀಟಾಯಿಸಿದ್ದಾರೆ .


ಅಲ್ಲದೇ ತಮ್ಮ ಸಂಪರ್ಕಕ್ಕೆ ಬಂದಿರುವ ಯಾರೇ ಇದ್ದರೂ ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ವೈದ್ಯರು ನೀಡಿರುವ ಸಲಹೆಯ ಪ್ರಕಾರ ನಾನು 10 ದಿನಗಳ ಕಾಲ ಮನೆಯಲ್ಲಿ ಐಸೋಲೇಷನ್​ ಆಗಿ ಚಿಕಿತ್ಸೆ ಪಡೆದುಕೊಳ್ಳಲಿದ್ದೇನೆ. ಈ ಸಮಯದಲ್ಲಿ ದಯಮಾಡಿ ಯಾರೂ ನನ್ನ ಭೇಟಿ ಮಾಡಲೆಂದು ಬಾರದಂತೆ ನಾನು ವಿನಂತಿಸುತ್ತಿದ್ದೇನೆ. ಯಾರೂ ಅನ್ಯತಾ ಭಾವಿಸಬೇಡಿ. ಕಳೆದ ಮೂರ್ನಾಲ್ಕು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ದಯಮಾಡಿ ಕೋವಿಡ್​ ಪರೀಕ್ಷೆಗೆ ಒಳಗಾಗಿ ಎಂದು ಕುಮಾರ ಸ್ವಾಮಿ ಮನವಿ ಮಾಡಿದ್ದಾರೆ.

ಇತ್ತ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 673 ಕೋವಿಡ್​​ ಸೋಂಕು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 852 ಮಂದಿ ಕೋವಿಡ್​ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದೊಂದು ದಿನದಲ್ಲಿ ಓರ್ವ ಸೋಂಕಿತರು ಕೋವಿಡ್​ನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಇದನ್ನು ಓದಿ : Cute Peacock : ಪ್ಲೀಸ್‌ ನನ್ನ ಫೋಟೋ ತೆಗಿಬೇಡಿ ! ಮುದ್ದಾಗಿ ನುಲಿದ ನವಿಲು !!!

ಇದನ್ನೂ ಓದಿ : ಸಿಎಂ ಕುರ್ಚಿಗೆ ಕಂಟಕವಾಗುತ್ತಾ ಮೀಸಲಾತಿ ಹೋರಾಟ : ಸಿಎಂ ಬಸವರಾಜ್ ಬೊಮ್ಮಾಯಿಗೆ ಎದುರಾಗ್ತಿದೆ ಡೆಡ್ ಲೈನ್ ಕಾಟ

ಇದನ್ನೂ ಓದಿ : Mallikarjun Kharge Next CM : ಕರ್ನಾಟಕದಲ್ಲಿ ಬಾರಿ ಅತಂತ್ರ ವಿಧಾನಸಭೆ : ಜೆಡಿಎಸ್‌ ಜೊತೆ ಸಂಘರ್ಷ ಬೇಡ ಎಂದ ಹೈಕಮಾಂಡ್, ಖರ್ಗೆ ಸಿಎಂ ?

former cm hd Kumaraswamy tested corona virus positive

Comments are closed.