ಬೆಂಗಳೂರು: (Former Speaker’s wife death) ರಾಜ್ಯದ ಮಾಜಿ ಸ್ಫೀಕರ್ ರಮೇಶ್ ಕುಮಾರ್ ಅವರ ಪತ್ನಿ ಅನಾರೋಗ್ಯದ ಕಾರಣ ವಿಧಿವಶರಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ವಿಜಯಮ್ಮ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎರಡು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನಗಳ ನಂತರ ವಿಜಯಮ್ಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ವಿಜಯಮ್ಮ ಅವರ ನಿದನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪವನ್ನು ಸೂಚಿಸಿದ್ದಾರೆ. “ಪಕ್ಷದ ಹಿರಿಯ ನಾಯಕರು, ಆತ್ಮಿಯರು ಆದ ಕೆ.ಆರ್. ರಮೇಶ್ ಕುಮಾರ್ ಅವರ ಧರ್ಮಪತ್ನಿ ವಿಜಯಮ್ಮ ಅವರು ನಿಧನರಾದ ಸುದ್ದಿ ತಿಳಿದು ಅತೀವ ನೋವಾಯಿತು. ರಮೇಶ್ ಕುಮಾರ್ ಅವರ ಕುಟುಂಬದ ಶೋಖದಲ್ಲಿ ನಾನೂ ಭಾಗಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಆದರೆ ವಿಜಯಮ್ಮ ಅವರ ಅಂತ್ಯಕ್ರಿಯೆ ವಿಚಾರವಾಗಿ ಇನ್ನೂ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ.
ಇದನ್ನೂ ಓದಿ : Bengaluru Fire accident: ಕಾರ್ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ: ಕೋಟ್ಯಾಂತರ ರೂ ಮೌಲ್ಯದ ಕಾರ್‌ಗಳು ಭಸ್ಮ
ಇದನ್ನೂ ಓದಿ : Ambedkar Contemptuous Visual display: ಅಂಬೇಡ್ಕರ್ ಅವಹೇಳನಾಕಾರಿ ದೃಶ್ಯ ಪ್ರದರ್ಶನ: 9 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳ ಬಂಧನ
ಇದನ್ನೂ ಓದಿ : Karnataka Minister Sunil Kumar: ವಿದ್ಯುತ್ ದರ ಏರಿಕೆ ಮಾಡಲ್ಲ, ಬೇಸಿಗೆಯಲ್ಲಿ ವಿದ್ಯುತ್ ಕಡಿತವೂ ಇಲ್ಲ : ಸಚಿವ ಸುನೀಲ್ ಕುಮಾರ್
Former Speaker’s wife death: Former Speaker Ramesh Kumar’s wife passed away