Karnataka budget: ಶಂಕರ್ ನಾಗ್‌ ಹೆಸರಲ್ಲಿ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣ ಘೋಷಣೆ

ಬೆಂಗಳೂರು: (Karnataka budget) ಸದ್ಯದಲ್ಲೇ ಚುನಾವಣೆ ಇರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಎಲ್ಲರೂ ಮೆಚ್ಚುವಂತಹ ಬಜೆಟ್‌ನ್ನು ರಾಜ್ಯದ ಮುಂದೆ ಇಟ್ಟಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯ ಬಜೆಟ್‌ ಸುಮಾರು 2.6 ಕೋಟಿ ಗಾತ್ರದ ಬಜೆಟ್‌ ಮಂಡನೆ ಆಗಿದ್ದು, ಈ ಬಾರಿ ಬರೋಬ್ಬರಿ 3.9 ಲಕ್ಷ ಕೋಟಿ ಗಾತ್ರದ ಬಜೆಟ್​ ಮಂಡನೆ ಮಾಡಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಧ್ಯೆಯವನ್ನು ಇಟ್ಟುಕೊಂಡು ಮನ್ನಣೆ ನೀಡಲಾಗಿದೆ.

ಮುಂಬರುವ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು, ಬಜೆಟ್‌ ಬುನಾದಿ ಹಾಕಿರುವ ಬೊಮ್ಮಾಯಿ, ಜನ ಸಾಮಾನ್ಯರ ಮನಸ್ಸಿಗೆ ಮುದ ನೀಡುವುದಕ್ಕೆ ಮುಂದಾಗಿದ್ದಾರೆ.ಚಿತ್ರರಂಗದ ಏಳಿಗೆ ಸಂಬಂಧ ಕೆಲವು ಯೋಜನೆಗಳನ್ನು ಕೈಗೊಂಡಿದ್ದಾರೆ. ಸಿನಿಮಾ ರಂಗದ ಬೇಡಿಕೆಗಳನ್ನು ಈಗಾಗಲೇ ಚಿತ್ರಮಂಡಳಿ ವತಿಯಿಂದ ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿತ್ತು.

ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ಎರಡನೇ ಹಂತದ ನಗರಗಳಲ್ಲಿ 100 ರಿಂದ 200 ಆಸನಗಳ ಮಿನಿ ಚಿತ್ರಮಂದಿರಗಳ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ಅನೇಕ ಅಭಿಮಾನಿಗಳನ್ನು ಸಂಪಾದಿಸಿ ಇಹಲೋಕ ತ್ಯಜಿಸಿದ ದಿವಂಗತ ಶಂಕರ್‌ ನಾಗ್‌ ಹೆಸರಲ್ಲಿ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣ ಮಾಡುವ ಘೋಷಣೆ ಮಾಡಿದ್ದಾರೆ.

ಕಳೆದ ವರ್ಷ ಫಿಲ್ಮ್‌ ಸಿಟಿ ನಿರ್ಮಾಣದ ಬಗ್ಗೆ ರಾಜ್ಯ ಸರಕಾರ ಬಜೆಟ್‌ ನಲ್ಲಿ ಘೋಷಣೆ ಮಾಡಿತ್ತು. ಆದರೆ ಅದು ಈವರೆಗೂ ಕಾರ್ಯಗತ ಆಗಿಲ್ಲ. ಚಿತ್ರೋಧ್ಯಮಕ್ಕೆ ಒಂದು ಸಮುದಾಯ ಭವನ ಕಟ್ಟಿಸಿ ಕೊಡುವಂತೆ, ಸಿನಿಮಾಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರಕಾರ ಹಾಕುತ್ತಿರುವ ತೆರಿಗೆ ಕಡಿಮೆ ಮಾಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿತ್ತು.

ಇದನ್ನೂ ಓದಿ : State budget 2023: ಗೃಹಿಣಿಯರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ 500 ರೂ ಸಹಾಯಧನ ಘೋಷಣೆ

ಇದನ್ನೂ ಓದಿ : Irrigation Project Budget:‌ ವಿವಿಧ ನೀರಾವರಿ ಯೋಜನೆಗಳ ಜಾರಿಗೆ 25 ಸಾವಿರ ಕೋಟಿ ರೂ ಅನುದಾನ

ಇದನ್ನೂ ಓದಿ : Bommai budget 2023: ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣ ಸ್ಥಾಪನೆ

Karnataka budget: Announcement of auto and taxi stand in the name of Shankar Nag

Comments are closed.