ಮಂಗಳವಾರ, ಏಪ್ರಿಲ್ 29, 2025
HomekarnatakaFreedom fighter G.Govindaraj: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಗೋವಿಂದರಾಜ್‌ ವಿಧಿವಶ

Freedom fighter G.Govindaraj: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಗೋವಿಂದರಾಜ್‌ ವಿಧಿವಶ

- Advertisement -

ದಾವಣಗೆರೆ: (Freedom fighter G.Govindaraj) ದಾವಣಗೆರೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ. ಗೋವಿಂದರಾಜ್‌ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅದರೆ ಇಂದು ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಗೋವಿಂದರಾಜು (Freedom fighter G.Govindaraj) ಅವರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಸೇರಿದಂತೆ ಅಪಾರ ಮಂದಿ ಬಂಧುಗಳನ್ನು ಅಗಲಿದ್ದು, ಹರಿಹರ ನಗರದ ಧಾಲ್ಮಿಯಾ ವಿಶ್ರಮ್‌ ಘಾಟ್‌ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಹರಿಹರ ಹಾಗೂ ದಾವಣಗೆರೆ ಸೇರಿದಂತೆ ಹಲವು ಕಡೆ ನಡೆದ ಹೋರಾಟದಲ್ಲಿ ಗೋವಿಂದರಾಜು ಅವರು ಭಾಗಿಯಾಗಿದ್ದರು. ಜೊತೆಗೆ ಆರ್ಯ ಈಡಿಗರ ಸಮಾಜದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಗಿದ್ದ ಸಮಯದಲ್ಲಿ ಹರಿಹರದ ಮೂರು ತ್ರಿಮೂರ್ತಿಗಳು ಹೋರಾಟಕ್ಕೆ ಇಳಿದಿದ್ದರು. ಅವರಲ್ಲಿ ಗೋವಿಂದರಾಜು ಅವರು ಕೂಡ ಒಬ್ಬರು. ಬ್ರಿಟೀಷ್‌ ಅಧಿಕಾರಿಗಳಿಗೆ ಕಿರಿಕಿರಿಯಾಗುವಷ್ಟು ಹೋರಾಟ ನಡೆಸಿದ್ದರು. ಕೈಗಾರಿಕೆಗೆ ಹೆಸರುವಾಸಿಯಾದ ಹರಿಹರದಲ್ಲಿ ಅನೇಕ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹತ್ತಾರು ಕಡೆಯಿಂದ ಕೈಗಾರಿಕೆ ಕಂಪನಿಗೆ ಬಂದ ಸಾವಿರಾರು ಕಾರ್ಮಿಕ ವರ್ಗಗಳನ್ನು ಒಟ್ಟುಗೂಡಿಸಿ ಹೋರಾಟಕ್ಕೆ ಸಜ್ಜುಗೊಳಿಸಿ ಪ್ರತಿಯೊಬ್ಬರನ್ನು ತಮ್ಮೊಂದಿಗೆ ಹೋರಾಟಕ್ಕೆ ಇಳಿಯುವಂತೆ ಮಾಡಿದ್ದರು.

ಅಂದು ದೇಶದಲ್ಲಿ ಹಾಗೂ ಹರಿಹರದಲ್ಲಿ ಬ್ರಿಟಿಷರ ವಿರುದ್ದ ಹೋರಾಟದ ಕಿಚ್ಚು ಹತ್ತಿಸಿದ ಮೂರು ತ್ರಿಮೂರ್ತಿಗಳಲ್ಲಿ ಕೊನೆಯದಾಗಿ ಬದುಕುಳಿದಿದ್ದ ಜಿ. ಗೋವಿಂದರಾಜ್‌ ಅವರು ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ. ಅಲ್ಲದೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೆಂದೇ ನಗರದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದರು.

ಇದನ್ನೂ ಓದಿ : Arecanut Price Decrease : ಅಡಿಕೆ ಬೆಲೆ ಕುಸಿತ, ಅತಂಕದಲ್ಲಿ ಬೆಳೆಗಾರರು

ಇದನ್ನೂ ಓದಿ : ಕರ್ಣಾಟಕ ಬ್ಯಾಂಕ್‌ “ಸಂಕ್ರಾಂತಿ ಸಂಭ್ರಮ” : ಉಡುಪಿಯಲ್ಲಿ ಚಾಲ್ತಿ, ಉಳಿತಾಯ ಖಾತೆ ಅಭಿಯಾನ

ಇದನ್ನೂ ಓದಿ : ಸಂತೆಕಟ್ಟೆಯಲ್ಲಿ ಓವರ್‌ ಪಾಸ್‌ ನಿರ್ಮಾಣಕ್ಕೆ ಶಿಲನ್ಯಾಸ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Freedom fighter G. Govindaraj: Senior freedom fighter G. Govindaraj passed away

RELATED ARTICLES

Most Popular