Suvarna Vidhana Soudha : ಸುವರ್ಣ ಸೌಧದ ಮೆಟ್ಟಿಲ‌ಲ್ಲಿ ಒಣಗುತ್ತಿದೆ ಸಂಡಿಗೆ

ಬೆಳಗಾವಿ : ಸರ್ಕಾರಗಳ ಅನುದಾನ ಸದ್ಬಳಕೆಯಾಗೋದಕ್ಕಿಂತ ದುರ್ಬಳಕೆ ಹಾಗೂ ವ್ಯರ್ಥವಾಗೋದೇ ಜಾಸ್ತಿ. ಇದಕ್ಕೆ ಜೀವಂತ ಸಾಕ್ಷಿ ಬೆಳಗಾವಿಯ (belagavi ) ಸುವರ್ಣಸೌಧ (Suvarna Vidhana Soudha). ಸಾವಿರಾರು ಕೋಟಿ ಅನುದಾನ ನೀರಲ್ಲಿ ಹೋಂ ಮಾಡಿದಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವಾಗಲೇ ಸುವರ್ಣಸೌಧದ ಅಂಗಳ ಸಂಡಿಗೆ ಒಣಗಿಸುವ ಅಂಗಳವಾಗಿದ್ದು, ಸುವರ್ಣ ಸೌಧದ ಅಂಗಳದಲ್ಲಿ ಸಂಡಿಗೆ ಒಣಗಿಸಿದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರಾಜಕೀಯ ವಿಕೇಂದ್ರಿಕರಣದ ಆಶಯದೊಂದಿಗೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ 2012ರಲ್ಲಿ ಸುವರ್ಣದ ಸೌಧ ಲೋಕಾರ್ಪಣೆ ಗೊಂಡಿತು. ಆದರೆ 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಬೃಹತ್ ಬಂಗಲೆ ಇನ್ನೂ ಸರ್ಕಾರಿ ಕಚೇರಿಗಳನ್ನಾಗಲಿ ಅಥವಾ ಯಾವುದೇ ಸದ್ಭಳಕೆಯ ಯೋಜನೆಯನ್ನಾಗಲಿ ಕಾಣದೇ ಕೇವಲ ಬಂಗ್ಲೆಯಾಗಿಯೇ ಉಳಿದುಕೊಂಡಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿವರ್ಷ 10 ದಿನಗಳ ಚಳಿಗಾಲದ ಅಧಿವೇಶನ ನಡೆಯುತ್ತದೆ. ಇದನ್ನು ಹೊರತು ಪಡಿಸಿದರೇ ಮತ್ಯಾವುದೇ ಚಟುವಟಿಕೆಗಳು ನಡೆಯೋದಿಲ್ಲ. ಹಲವು ಭಾರಿ ಅಧಿವೇಶನದಲ್ಲಿ ಚರ್ಚೆಯಾದರೂ ರಾಜ್ಯ ಮಟ್ಟದ ಯಾವುದೇ ಕಚೇರಿ ಸುವರ್ಣ ಸೌಧಕ್ಕೆ ಬಂದಿಲ್ಲ. ಉತ್ತರ ಕರ್ನಾಟಕದ ಜನ ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿದ ಧರಣಿ ಮಾಡಿದ್ರು ಸರ್ಕಾರಗಳು ಕೇವಲ ಭರವಸೆ ನೀಡಿದ್ರು ಆದೇ ಈಡೇರಿಲ್ಲ.

ಈ ಮಧ್ಯೆ ಖಾಲಿ ಖಾಲಿಯಾಗಿ ನಿಂತಿರೋ ಸುವರ್ಣ ಸೌಧದಲ್ಲಿ ಈಗ ಯಾರೋ ಹೆಂಗಸರು ಸಂಡಿಗೆ ಹಾಗೂ ಶ್ಯಾವಿಗೆಯನ್ನು ಒಣಗಿಸಿದ್ದು, ಆ ಪೋಟೋ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದೆ. ವರ್ಷಕ್ಕೆ ಕೋಟಿ ರೂಪಾಯಿ ವೆಚ್ಚ ನಿರ್ವಹಣೆಗೆ ವೆಚ್ಚ ವಾಗುತ್ತದೆ. ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸಿ ಸಂಡಿಗೆ ಒಣಗಿಸಲು ಸ್ಥಳ ಒದಗಿಸುತ್ತಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಮಾಡಲಾಗುತ್ತಿದೆ. ಸೌಧದ ನಿಷ್ಕ್ರಿಯತೆಯನ್ನು ಬಿಂಬಿಸುತ್ತಿರೋ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಿಂದ ಚರ್ಚೆ ಆರಂಭವಾಗಿದೆ. 127 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ವಾದ ಬೃಹತ್ ಬಂಗಲೆ 300 ಜನ ಕುಳಿತುಕೊಳ್ಳಬಹುದಾದ ವಿಧಾನಸಭೆ ಹಾಲ್ ಹೊಂದಿದೆ. 100 ಜನ ಕುಳಿತುಕೊಳ್ಳಬಹುದಾದ ಪರಿಷತ್ ಹಾಲ್. 450 ಜ‌ನ ಸಾಮರ್ಥ್ಯದ ಸೆಂಟ್ರಲ್‌ ಹಾಲ್, 38 ಸಚಿವರ ಪ್ರತ್ಯೇಕ ಕೊಠಡಿಗಳು, ಸಭೆ ನಡೆಸಲು 14 ಸಭಾಂಗಣ. ಬ್ಲ್ಯಾಂಕ್ವೆಟ್ ಹಾಲ್, ಸಚಿವಾಲಯ ಸಿಬ್ಬಂದಿಗೆ ಕೊಠಡಿ.ಶಾಸಕಾಂಗ ಸಭೆ ನಡೆಸಲು ಪ್ರತ್ಯೇಕ ‌ಕೊಠಡಿಯನ್ನು ಒಳಗೊಂಡಿದೆ.

ಪ್ರತಿ ತಿಂಗಳು ಕಟ್ಟಡದ ನಿರ್ವಹಣೆ, ಕರೆಂಟ ಬಿಲ್, ನೀರಿನ ಬಿಲ್ ಸೇರಿದಂತೆ ನಿರ್ವಹಣೆಗಾಗಿಯೇ ಕೋಟ್ಯಾಂತರ ರೂಪಾಯಿ ಸರ್ಕಾರದಿಂದ ಪಾವತಿಯಾಗುತ್ತದೆ. ಇಲ್ಲಿ ಸರ್ಕಾರಿ ಕಚೇರಿಗಳನ್ನು ಮಾಡಲು ಜಾಗವಿದ್ದರೂ ಮತ್ತೆ ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಸರ್ಕಾರ ಹಣ ಪಾವತಿಸುತ್ತಿದೆ. ಹೀಗಾಗಿ ಇನ್ನಾದರೂ ಸುವರ್ಣ ಸೌಧವನ್ನು ಸಂಡಿಗೆ ಸೌಧವಾಗಿಸುವುದನ್ನು ಬಿಟ್ಟು ಸದ್ಭಳಕೆ ಮಾಡಿಕೊಳ್ಳಲಿ ಎಂಬ ಸಲಹೆ ವ್ಯಕ್ತವಾಗಿದೆ.

ಇದನ್ನೂ ಓದಿ : LPG Price : ಎಲ್‌ಪಿಜಿ ಬೆಲೆಯಲ್ಲಿ 135 ರೂ. ಇಳಿಕೆ : ಎಷ್ಟಿದೆ ಗೊತ್ತಾ ಸಿಲಿಂಡರ್‌ ಬೆಲೆ

ಇದನ್ನೂ ಓದಿ : Hanuman Birth Place : ನಿಜವಾಗಿಯೂ ಹನುಮ ಹುಟ್ಟಿದ್ದು ಎಲ್ಲಿ ? ಇಲ್ಲಿದೆ ವಿವರಣೆ

frying items in staircase of belagavi Suvarna Vidhana Soudha

Comments are closed.