Sonia Gandhi Rahul : ನ್ಯಾಷನಲ್​ ಹೆರಾಲ್ಡ್​​ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್​​ ಗಾಂಧಿಗೆ ಸಮನ್ಸ್​

Sonia Gandhi, Rahul : ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್​​ ಗಾಂಧಿಗೆ ಸಮನ್ಸ್​ ಜಾರಿ ಮಾಡಿದೆ. ನ್ಯಾಷನಲ್​​ ಹೆರಾಲ್ಡ್​ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೂನ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯವು ಸಮನ್ಸ್​ (ed Summons) ನೀಡಿದೆ.

2015ರಲ್ಲಿ ತನಿಖಾ ಸಂಸ್ಥೆಯು ನ್ಯಾಷನಲ್​​ ಹೆರಾಲ್ಡ್​ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು ಇದೇ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯವು ಸಮನ್ಸ್​ (ed Summons) ನೀಡಿದೆ. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೆವಾಲಾ, 1942ರಲ್ಲಿ ನ್ಯಾಷನಲ್​ ಹೆರಾಲ್ಡ್​​ ಪತ್ರಿಕೆ ಆರಂಭವಾಗಿತ್ತು. ಬ್ರಿಟೀಷರು ಪತ್ರಿಕೆಯನ್ನು ನಾಶಮಾಡಲು ಯತ್ನಿಸಿದ್ದಾರೆ. ಈಗ ಪ್ರಧಾನಿ ಮೋದಿ ಸರ್ಕಾರ ಕೂಡ ಬ್ರಿಟೀಷರಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅವರು ಜಾರಿ ನಿರ್ದೇಶನಾಲಯವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್​ ಸಂಸದ ಅಭಿಷೇಕ್​ ಮನು ಸಿಂಘ್ವಿ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯ ತಿಳಿಸಿದ ದಿನದಂದು ಅಗತ್ಯವಿದ್ದರೆ ಹಾಜರಿರುತ್ತಾರೆ. ಆದರೆ ರಾಹುಲ್​ ಗಾಂಧಿ ವಿಚಾರಣೆ ಹಾಜರಾಗುವ ವಿಚಾರದಲ್ಲಿ ತನಿಖಾ ಸಂಸ್ಥೆಯಿಂದ ವಿನಾಯಿತಿ ಕೋರಲಿದ್ದಾರೆ. ಕಾಂಗ್ರೆಸ್​ ನಾಯಕರು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯವಿಲ್ಲ. ಇವೆಲ್ಲ ವಿಪಕ್ಷಗಳ ಕುತಂತ್ರ ಎಂದು ಹೇಳಿದರು.

ಉಡುಪಿ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ : ಪಠ್ಯ ಪರಿಷ್ಕರಣೆ ಕುರಿತು ಸ್ಪಷ್ಟನೆ

ಉಡುಪಿ : cm basavaraj bommai in udupi : ರಾಜ್ಯದಲ್ಲಿ ಸಧ್ಯ ಪಠ್ಯ ಪರಿಷ್ಕರಣೆಯ ಚರ್ಚೆ ಜೋರಾಗಿದೆ. ಪಠ್ಯ ಪರಿಷ್ಕರಣೆ ಚರ್ಚೆ ವಿಚಾರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಪರ ವಿರೋಧಗಳ ಕಾದಾಟದ ನಡುವೆಯೇ ಸಿಎಂ ಬಸವರಾಜ ಬೊಮ್ಮಾಯಿ ಇಂದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಉಡುಪಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಶಿಕ್ಷಣರ ಸಚಿವರ ಬಳಿ ಸಮಗ್ರ ವರದಿಯನ್ನು ನಾನು ಕೇಳಿದ್ದೇನೆ. ಈ ಸಂಬಂಧ ಸಚಿವರು ನಾಳೆ ನನಗೆ ವರದಿಯನ್ನು ನೀಡಲಿದ್ದಾರೆ. ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಬಳಿಕ ನಾನು ಪರಿಷ್ಕರಣೆ ಸರಿಯೋ ತಪ್ಪೋ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು. ಈ ಸಂಬಂಧ ಸ್ವಾಮೀಜಿಗಳು ನನಗೆ ಪತ್ರ ಬರೆದಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ರಾಜ್ಯದಲ್ಲಿ ಎರಡು ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಪಾಠ ವಾಪಸ್​ ಪಡೆಯಬೇಕು ಎಂದು ಒಂದು ಪಂಗಡ ಹೇಳುತ್ತಿದೆ.ಇನ್ನೂ ಕೆಲವರು ಪಠ್ಯ ಪರಿಷ್ಕರಣೆ ಆಗಬೇಕು ಎನ್ನುತ್ತಿದ್ದಾರೆ. ಎಲ್ಲರ ಜೊತೆಯಲ್ಲೂ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನಗಳ ಕಾಲ ಉಡುಪಿ ಪ್ರವಾಸದಲ್ಲಿದ್ದಾರೆ. ನಿನ್ನೆ ರಾತ್ರಿ ಉಡುಪಿಗೆ ಬಂದು ವಾಸ್ತವ್ಯ ಹೂಡಿರುವ ಸಿಎಂ ಬೊಮ್ಮಾಯಿ ಉಡುಪಿ ಜಿಲ್ಲೆಯ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಾರ್ಕಳದ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಉದ್ಘಾಟನೆ ,ಹೆಬ್ರಿ ತಾಲೂಕು ಆಡಳಿತ ಸೌಧ ಉದ್ಘಾಟನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿ ಅನಾವರಣ ಹಾಗೂ ಹೆಬ್ರಿ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯವನ್ನು ಸಿಎಂ ಬೊಮ್ಮಾಯಿ ನೆರವೇರಿಸುತ್ತಿದ್ದಾರೆ . ಇದಾದ ಬಳಿಕ ಮಂಗಳೂರು ಜಿಲ್ಲೆಗೆ ಸಿಎಂ ಬೊಮ್ಮಾಯಿ ಪ್ರವಾಸ ಕೈಗೊಳ್ಳಲಿದ್ದಾರೆ.

ಇದನ್ನು ಓದಿ : Hardik Pandya : ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕ

ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

ED summons Congress chief Sonia Gandhi, Rahul in money laundering case

Comments are closed.