Garden Terminal : 13 ಸಾವಿರ ಕೋಟಿಯಲ್ಲಿ ನಿರ್ಮಾಣಗೊಂಡ ಗಾರ್ಡನ್ ಟರ್ಮಿನಲ್: ವಿಶೇಷತೆಗಳೇನು? ಇಲ್ಲಿದೆ ಡಿಟೇಲ್ಸ್

Garden Terminal : ಈಗಾಗಲೇ ಬೆಂಗಳೂರಿನ ಗರಿಮೆ‌ ಹೆಚ್ಚಿಸಿದ ಬೆಂಗಳೂರು ಇಂಟರನ್ಯಾಶನಲ್ ಏರ್ಪೋರ್ಟ್ ಗೆ ಈಗ ಅತ್ಯಾಕರ್ಷಕವಾಗಿ ಹಾಗೂ ಸುಸಜ್ಜಿತವಾಗಿ‌ ವಿನ್ಯಾಸಗೊಂಡ ಟರ್ಮಿನಲ್ 2 , ಅಲಿಯಾಸ್ ಗಾರ್ಡನ್ ಟರ್ಮಿನಲ್ ಕೂಡ ಸೇರ್ಪಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಈ ಟರ್ಮಿನಲ್ 2 ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಎಂಬ ಡಿಟೇಲ್ಸ್ ಇಲ್ಲಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಟರ್ಮಿನಲ್ 2 ವನ್ನು ನ್ಯೂಯಾರ್ಕ್‌ನ SOM ಕಂಪನಿ ಅತ್ಯಾಕರ್ಷಕ ವಿನ್ಯಾಸದಲ್ಲಿ ಸಿದ್ಧಪಡಿಸಿದೆ.

2,55,661 ಚ.ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಗಾರ್ಡನ್ ಟರ್ಮಿನಲ್(Garden Terminal ) ಒಟ್ಟು 90 ಚೆಕ್ ಇನ್ ಕೌಂಟರ್‌ಗಳು ಹಾಗೂ ಸೆಕ್ಯೂರಿಟಿ ಚೆಕ್ ಪಾಯಿಂಟ್,ಡೊಮೆಸ್ಟಿಕ್ ಹಾಗೂ ಇಂಟರ್ನ್ಯಾಷನಲ್ ಪ್ರತ್ಯೇಕ ಲಾಂಜ್, L ಆಕಾರದ ಪಿಯರ್‌ಗಳು, 19 ಬೋರ್ಡಿಂಗ್ ಗೇಟ್‌ಗಳು, ಆಕರ್ಷಕ ಕಲಾಕೃತಿಗಳನ್ನಟ್ಟು ಅಲಂಕಾರ ಮಾಡಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ವಿಶೇಷತೆಗಳೇನು? ಅನ್ನೋದನ್ನು ಗಮನಿಸೋದಾದರೇ, ಉದ್ಯಾನದಲ್ಲೇ‌ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. 10,235 ಚ.ಅಡಿಯಲ್ಲಿ ಹಸಿರು ಗೋಡೆಗಳ ನಿರ್ಮಾಣ ಮಾಡಲಾಗಿದ್ದು, ಕಂಚಿನ‌ ಪರದೆಯ ಮೂಲಕ ಟರ್ಮಿನಲ್ ಅಂದ ಹೆಚ್ಚಿಸಲಾಗಿದೆ. ಇನ್ನು ತಾರಸಿಯಿಂದ ಇಳಿಬಿದ್ದ ಗಂಟೆಗಳಿದ್ದು, ಸಂಪೂರ್ಣ ಬಿದಿರಿನಿಂದ ಒಳಾಂಗಣ ಕಾರ್ಯ ವಿನ್ಯಾಸ ಮಾಡಲಾಗಿದೆ. 413 ಮಿಲಿಯನ್‌ ಲೀಟರ್ ನೀರು ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ತ್ಯಾಜ್ಯವನ್ನು ಗೊಬ್ಬರ ವಾಗಿಸುವ ಶೂನ್ಯ ತ್ಯಾಜ್ಯ ವ್ಯವಸ್ಥೆಯನ್ನು ಇದು ಹೊಂದಿದೆ.

ಇದನ್ನೂ ಓದಿ : Yellow alert for 8 districts : ಕರ್ನಾಟಕದಲ್ಲಿ ನಿಲ್ಲದ ಮಳೆ : ಕರಾವಳಿ ಸೇರಿ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಇದನ್ನೂ ಓದಿ : Statue of Kempegowda : ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : Inauguration of Terminal-2 : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

13 ಸಾವಿರ ಕೋಟಿ ಬಂಡವಾಳ ಹೂಡಲಾಗಿದ್ದು, ವರ್ಷದಲ್ಲಿ ದೇಶೀಯ 1 ಲಕ್ಷ ವಿಮಾನ ಹಾಗೂ ವಿದೇಶ ಪ್ರಯಾಣಕ್ಕೆ 15000 ವಿಮಾನವನ್ನು ಟರ್ಮಿನಲ್ ನಿರ್ವಹಿಸಲಿದೆ‌. 2.55 ಲಕ್ಷ ಚದರ ಮೀಟರ್ ವ್ಯಾಪ್ತಿಯ ಟರ್ಮಿನಲ್, 22 ಪ್ರಯಾಣಿಕರ ಗೇಟ್‌ಗಳನ್ನು ಹೊಂದಿದೆ‌.15 ಬಸ್ ಗೇಟ್‌ಗಳಿದ್ದು, ವರ್ಷಕ್ಕೆ 2.5 ಕೋಟಿ ಪ್ರಯಾಣಿಕರ ನಿರೀಕ್ಷೆ ಇದೆ. ಇನ್ನುಳಿದಂತೆ Art ಲಾಂಜ್ ಇದ್ದು ಇದರಲ್ಲಿ ರಾಜ್ಯದ ಸಾಂಸ್ಕೃತಿಕ ಹಾಗು ಕಲಾ ಪ್ರಕಾರಗಳ‌ ಪ್ರದರ್ಶನವಿರಲಿದೆ.

ವಿಶ್ರಾಂತಿ ಪಡೆಯುವಲ್ಲಿ ಉದ್ಯಾನ,ಮಳೆ ನೀರು ಕೊಯ್ಲು ವ್ಯವಸ್ಥೆ ಹೊಂದಿದೆ. ಇನ್ನು ಟರ್ಮಿನಲ್ ನಲ್ಲಿ ಸೋಲಾರ್ ವ್ಯವಸ್ಥೆ ಶೇ. 24ರಷ್ಟು ವಿದ್ಯುತ್ ಉಳಿತಾಯಕ್ಕೆ ನೆರವಾಗಲಿದೆ. ಟರ್ಮಿನಲ್ -2 ಸಾಮರ್ಥ್ಯ ವನ್ನು ಗಮನಿಸೋದಾದರೇ, ಒಟ್ಟು ವಿಸ್ತೀರ್ಣ-255,645 ಚ.ಮೀ,ಚೆಕ್ ಇನ್-95 ಭದ್ರತಾ ತಪಾಸಣೆ ಲೈನ್-17, ನಿರ್ಗಮನ ಇಮೀಗೇಶನ್‌-30, ಆಗಮನ ಇಮೀಗೇಶನ್-34, ಹ್ಯಾಂಡ್ ಬ್ಯಾಗೇಜ್ ಸ್ಟೀನಿಂಗ್ -9 , ಗೇಟ್‌ನಲ್ಲಿ ಕುಳಿತುಕೊಳ್ಳುವ ಆಸನ-5,932, ಸಾಮರ್ಥ್ಯ-25 ಮಿಲಿಯನ್ ಪ್ರಯಾಣಿಕರದ್ದಾಗಿದೆ. ಒಟ್ಟಿನಲ್ಲಿ ಇಂಗ್ಲೇಂಡ್ ಬಳಿಕ ಅತ್ಯಂತ ಆಕರ್ಷಕ ಟರ್ಮಿನಲ್ ಎಂಬ ಖ್ಯಾತಿಗೆ ಗಾರ್ಡನ್ ಟರ್ಮಿನಲ್ ಭಾಜನವಾಗುವ ನೀರಿಕ್ಷೆ ಇದೆ.

Garden Terminal: An exciting and well-designed Terminal 2, alias Garden Terminal, has now been added to Bangalore International Airport, which has already enhanced the dignity of Bangalore. Here are the details of what Terminal 2, which was inaugurated by Prime Minister Narendra Modi, includes.
Inaugurated by Prime Minister Narendra Modi on Friday, Terminal 2 has been designed by New York-based SOM Company in an exciting design.

Comments are closed.