ಸೋಮವಾರ, ಏಪ್ರಿಲ್ 28, 2025
Homekarnatakaಗಣೇಶೋತ್ಸವಕ್ಕೆ KSRTC ಭರ್ಜರಿ ಆಫರ್: ರಾಜ್ಯದಲ್ಲಿ 500 ಹೆಚ್ಚುವರಿ ಬಸ್ ಸಂಚಾರ

ಗಣೇಶೋತ್ಸವಕ್ಕೆ KSRTC ಭರ್ಜರಿ ಆಫರ್: ರಾಜ್ಯದಲ್ಲಿ 500 ಹೆಚ್ಚುವರಿ ಬಸ್ ಸಂಚಾರ

- Advertisement -

ಬೆಂಗಳೂರು : (KSRTC 500 additional bus) ಸಾರ್ವಕರ್ ಗಣಪತಿ ಸೇರಿದಂತೆ ನೊರೆಂಟು ವಿವಾದಗಳ ಮಧ್ಯೆ ರಾಜ್ಯದಲ್ಲಿ ಗಣೇಶ ಹಬ್ಬದ ಸಂಭ್ರಮ‌ ನಿಧಾನಕ್ಕೆ ಕಳೆಗಟ್ಟತೊಡಗಿದೆ. ಈ ಮಧ್ಯೆ ರಾಜ್ಯದಾದ್ಯಂತ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಗೌರಿ ಗಣೇಶ್ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದೆ. ಅಗಸ್ಟ್ 30 ಹಾಗೂ 31 ರಂದು ಗೌರಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ‌. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್ ಆರ್ಟಿಸಿ ಹೆಚ್ಚುವರಿ ವಿಶೇಷ ಬಸ್ ಬಿಡಲು ನಿರ್ಧರಿಸಿದೆ.

ಬೆಂಗಳೂರಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅದರಲ್ಲೂ ವಿಶೇಷವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ,ಚಿಕ್ಕಮಗಳೂರ, ಶಿವಮೊಗ್ಗ,ಹಾಸನ, ಕುಂದಾಪುರ, ತಿರುಪತಿ ,ಹೈದ್ರಾಬಾದ್ ಸೇರಿದಂತೆ ಹಲವೆಡೆಗೆ ವಿಶೇಷ ಬಸ್ ಸಂಚರಿಸಲಿದೆ. ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರದ ಕಡೆಗೆ ವಿಶೇಷ ಬಸ್ ಸಂಚರಿಸಲಿದೆ.

ಇನ್ನೂ ಶಾಂತಿ ನಗರ ಬಸ್ ನಿಲ್ದಾಣದಿಂದ ತಮಿಳುನಾಡು,ಕೇರಳ ಕಡೆಗೆ ಬಸ್ ಸಂಚರಿಸಲಿದೆ. ಇನ್ನೂ ಹಬ್ಬದ ಕಾರಣಕ್ಕೆ ಊರುಗಳಿಗೆ ತೆರಳುವ ಜನರ ಅನುಕೂಲಕ್ಕಾಗಿ ಆನ್ ಲೈನ್ ಬುಕ್ಕಿಂಗ್ ಗೂ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ 5 ಕ್ಕೂ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೇಟ್ ಬುಕ್ ಮಾಡಿದಲ್ಲಿ ಒಟ್ಟು ಮೊತ್ತದ ಮೇಲೆ ಶೇಕಡಾ 5 ರಷ್ಟು ರಿಯಾಯಿತಿ ವಿಧಿಸೋದಾಗಿ ಕೆ.ಎಸ್.ಆರ್.ಟಿ.ಸಿ ಘೋಷಿಸಿದೆ.

ಅಲ್ಲದೇ ಹೋಗುವ ಹಾಗೂ ಹಿಂತಿರುಗಿ ಬರುವ ಟಿಕೇಟ್ ಗಳನ್ನು ಒಟ್ಟಿಗೆ ಬುಕ್ ಮಾಡಿದಲ್ಲಿ ಶೇಕಡಾ 10 ರಷ್ಟು ರಿಯಾಯತಿ ವಿಧಿಸಲು ಕೆಎಸ್ ಆರ್ ಟಿಸಿ ಹೇಳಿದೆ. ರಾಜ್ಯ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಂದ ಅಗಸ್ಟ್ 31 ರಂದು ಅಗಮಿಸುವ ಪ್ರಯಾಣಿಕರಿಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲು ಕೆ.ಎಸ್.ಆರ್.ಟಿ.ಸಿ ಸಿದ್ಧತೆ ಮಾಡಿಕೊಂಡಿದೆ.

ಕೆಎಸ್ಆರ್ಟಿಸಿ ವಿಶೇಷ ಬಸ್ ಗಳನ್ನು ಓಡಿಸಲು ನಿರ್ಧಾರ ಮಾಡಿರೋದರ ಜೊತೆಗೆ ಹಬ್ಬದ ವೇಳೆಯಲ್ಲಿ ಹೆಚ್ಚುವರಿ ಬಸ್ ಸಂಚಾರದಿಂದ ಅನಗತ್ಯ ಟ್ರಾಫಿಕ್ ಒತ್ತಡ ತಪ್ಪಿಸಲು ಎಲ್ಲರೂ ಮೆಜೆಸ್ಟಿಕ್ ಗೆ ಬರೋ ಬದಲು ಮುಂಗಡ ಟಿಕೇಟ್ ಕಾಯ್ದಿರಿಸಿ ಶಾಂತಿನಗರ, ಸ್ಯಾಟ್ ಲೈಟ್ , ಯಶ್ವಂತಪುರದಂತಹ ಬಸ್ ನಿಲ್ದಾಣಗಳಿಗೆ ತೆರಳುವಂತೆ ಕೆಎಸ್ ಆರ್ ಟಿಸಿ ಮನವಿ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಪ್ಟೆಂಬರ್ 1,2 ರಂದು ಬೆಂಗಳೂರಿಗೂ ವಿಶೇಷ ಹಾಗೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ : Digital Hundi Chamundi Hills : ದೇವರಿಗೂ ಡಿಜಿಟಲ್ ಕಾಣಿಕೆ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈ ಹುಂಡಿ ಸ್ಥಾಪನೆ

ಇದನ್ನೂ ಓದಿ : harish rai battling cancer : ಕ್ಯಾನ್ಸರ್​​ನ ಕೊನೆಯ ಹಂತದಲ್ಲಿದ್ದಾರೆ ಕೆಜಿಎಫ್​ ಖ್ಯಾತಿಯ ನಟ ಹರೀಶ್​ ರೈ

Gauri Ganesha festival: 500 additional bus service by KSRTC

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular