Helping Hands Kundapura : ನೆಲ್ಲಿಕಟ್ಟೆಯ ಗುಡಿಬೆಟ್ಟು ಅಜ್ಜಿಯ ಕನಸನ್ನು ನನಸು ಮಾಡಿದ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ

ಕುಂದಾಪುರ : (Helping Hands Kundapura ) ಮನೆಯಿಲ್ಲದೇ ಗುಡಿಸಲಿನಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದ ಅಜ್ಜಿಗೆ ಕುಂದಾಪುರದ ಹೆಲ್ಪಿಂಗ್‌ ಹ್ಯಾಂಡ್ಸ್‌ ಸಂಸ್ಥೆ ನೆರವಾಗಿದೆ. ಅಜ್ಜಿಗೊಂದು ಸೂರು ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿದ್ದು, ಆಸರೆಯ ಮೂಲಕ ಅಜ್ಜಿಯ ಬಹುದಿನದ ಕನಸನ್ನು ಹೆಲ್ಪಿಂಗ್‌ ಹ್ಯಾಂಡ್‌ ನನಸು ಮಾಡಿದೆ.

Helping Hands Kundapura

ನೊಂದ ಹೃದಯಗಳಿಗೆ ನೆರವಿನ ಹಸ್ತ ಅನ್ನೋ ಧ್ಯೆಯ ವಾಕ್ಯದೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹೆಲ್ಪಿಂಗ್‌ ಹ್ಯಾಂಡ್‌ ಕುಂದಾಪುರ ಸಂಸ್ಥೆ ಇದೀಗ ಮತ್ತೊಂದು ಸಾಮಾಜಿಕ ಕಾರ್ಯವನ್ನು ಮಾಡಿದ್ದು, ನೊಂದ ಅಜ್ಜಿಯ ಕಣ್ಣೀರು ಒರಿಸಿದೆ. ಸೂರು ಇಲ್ಲದೇ ಕುಸಿದು ಬೀಳುವ ಮನೆಯಲ್ಲಿ ವಾಸವಾಗಿದ್ದ ಕುಂದಾಪುರ ತಾಲೂಕಿನ ನೆಲ್ಲಿಕಟ್ಟೆ ಸಮೀಪದ ಗುಡ್ಡಿಬೆಟ್ಟಿನ ಶೃಂಗೇರಿ ಎನ್ನುವ ಅಜ್ಜಿಗೆ ಮನೆಯೊಂದು ನಿರ್ಮಿಸುವ ಕುರಿತು ಹೆಲ್ಪಿಂಗ್‌ ಹ್ಯಾಂಡ್‌ ಸಂಸ್ಥೆ ಸಂಕಲ್ಪ ಮಾಡಿತ್ತು. ದಾನಿಗಳ ಸಹಕಾರದೊಂದಿಗೆ ಹೆಲ್ಪಿಂಗ್‌ ಹ್ಯಾಂಡ್‌ ಸಂಸ್ಥೆ ಅಜ್ಜಿಗೊಂಡು ಮನೆಯನ್ನು ನಿರ್ಮಿಸಿ ಗೃಹ ಪ್ರವೇಶ ಮಾಡಿದ್ದಾರೆ. ಅಜ್ಜಿಯ ಮೊಮ್ಮಕ್ಕಳ ಸ್ಥಾನದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥಾಪಕ ಅಧ್ಯಕ್ಷರಾದ‌ ಪ್ರದೀಪ್ ಮೊಗವೀರ ಕೋಟೆಶ್ವರ ದಂಪತಿಗಳು ಪೂಜಾ ಕಾರ್ಯವನ್ನು ನೆರವೇರಿಸಿದರು. ಅಲ್ಲದೇ ಆಸರೆ ಎನ್ನುವ ಮನೆಯನ್ನು ಶೃಂಗೇರಿ ಅಜ್ಜಿಗೆ ಹಸ್ತಾಂತರವನ್ನು ಮಾಡಿದೆ.

Helping Hands Kundapura

ಖ್ಯಾತ ಉದ್ಯಮಿ ಸಹನಾ ಗ್ರೂಪ್ಸ್ ಕೋಟೆಶ್ವರ ಇದರ ಮಾಲೀಕರಾದ ಸುರೇಂದ್ರ ಶೆಟ್ಟಿ ಅವರು ಮನೆಯನ್ನು ಉದ್ಘಾಟಿಸಿದರು. ಕುಂದಾಪುರದ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಸಮಾಜಪರ ಕಾರ್ಯದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು. ಸಂಸ್ಥೆಯ ವತಿಯಿಂದ ಕೈಗೊಳ್ಳುವ ಮುಂದಿನ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಇನ್ನು ಮುಖ್ಯ ಅತಿಥಿ ಬ್ಲಾಕ್ ಕಾಂಗ್ರೆಸ್ ವಂಡ್ಸೆ ಇದರ ಅಧ್ಯಕ್ಷರಾದ ಪ್ರದೀಪ್‌ ಕುಮಾರ್ ಶೆಟ್ಟಿ ಅವರು ಮಾತನಾಡಿ, ಅಜ್ಜಿಗೆ ಸೂರು ನಿರ್ಮಿಸಿ ಕೊಟ್ಟ ಹೆಲ್ಪಿಂಗ್ ಹ್ಯಾಂಡ್ಸ್ ತಂಡಕ್ಕೆ ಗುಡಿಬೆಟ್ಟು ಊರಿನ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಜೊತೆ ಸದಾ ಸಹಕರಿಸುವುದಾಗಿ ಹೇಳಿದರು. ಕುಂದಾಪುರದ ವಕೀಲರಾದ ಉಮೇಶ್‌ ಶೆಟ್ಟಿ ಅಂಪಾರು ಉಪಸ್ಥಿತರಿದ್ದರು.

Helping Hands Kundapura

ಗ್ರಹ ಪ್ರವೇಶದ ಧಾರ್ಮಿಕ ವಿಧಿ ವಿಧಾನಗಳನ್ನು ಕುಂದಾಪುರದ ಯು. ಪದ್ಮನಾಭ ಐತಾಳ್, ಹಂಗಳೂರು ಭಟ್ಟರು ನೆರವೇರಿಸಿಕೊಟ್ಟರು. ಗೃಹ ಪ್ರವೇಶಕ್ಕೆ ಆಗಮಿಸಿದ್ದ 200 ಕ್ಕೂ ಅಧಿಕ ಮಂದಿಗೆ ಹೆಲ್ಪಿಂಗ್ ಹ್ಯಾಂಡ್ಸ್ ಗೌರವ ಸಲಹೆಗಾರರದ ರಾಘವೇಂದ್ರ ಪೂಜಾರಿ ಅಬುದಾಬಿ ಅವರು ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ಕುಂದಾಪುರದ ಮಾನವೀಯತೆ ಮೆರೆಯೋಣ ಅನ್ನುವ ತಂಡ ಆಗಮಿಸಿ ಹೆಲ್ಪಿಂಗ್‌ ಹ್ಯಾಂಡ್‌ ತಂಡಕ್ಕೆ ಶುಭಕೋರಿದೆ. ಅಲ್ಲದೇ ಅಜ್ಜಿಗೆ ಮಲಗಲು ಮಂಚ ಹಾಗೂ ಬೆಡ್ ಉಡುಗೊರೆಯಾಗಿ ನೀಡಿದೆ.

ಜೈ ಕುಂದಾಪ್ರ್ ಸೇವಾ ಟ್ರಸ್ಟ್ (ರಿ.) ತಂಡ ಅಜ್ಜಿಗೆ ಅಗತ್ಯ ದಿನಸಿ ವಸ್ತು, ಕೋಟೆಶ್ವರ ಪಂಚಾಯತ್ ಸದಸ್ಯರಾದ ಪ್ರಸನ್ನ ದೇವಾಡಿಗ ಸೀಲಿಂಗ್ ಫ಼್ಯಾನ್ ವ್ಯವಸ್ಥೆ ಮಾಡಿಸಿದ್ದರು. ಆರ್ಟ್ ಹೌಸ್ ಕುಂದಾಪುರ ಸ್ಟಿಕ್ಕರ್ ಕಟ್ಟಿಂಗ್ ಶಾಪ್ ನ ಮಾಲೀಕರಾದ ಪ್ರಶಾಂತ್ ರವರು ಉಚುತವಾಗಿ ‌ವಿಭಿನ್ನ ಶೈಲಿಯಲ್ಲಿ ಮನೆಯ‌ ನಾಮ ಫಲಕವನ್ನು ನೀಡಿದ್ದಾರೆ. ಇನ್ನು ವಿಜಯ ಹಾಗೂ ರವೀಂದ್ರ ದೇವಾಡಿಗ ಮಾಲಿಕತ್ವದ ಶ್ರೀ ಬೆನಕ ಶಾಮಿಯಾನ ನೇರಳಕಟ್ಟೆ ಅವರು ಉಚಿತವಾಗಿ ಶಾಮಿಯಾನದ ವ್ಯವಸ್ಥೆಯನ್ನು ಮಾಡಿದ್ದರು. ಶೃಂಗೇರಿ ಅಜ್ಜಿಗೆ ಮನೆ ನಿರ್ಮಾಣ ಮಾಡಲು ಸಹಕರಿಸಿದ ಎಲ್ಲರಿಗೂ ಹೆಲ್ಪಿಂಗ್‌ ಹ್ಯಾಂಡ್‌ ತಂಡ ಧನ್ಯವಾದವನ್ನು ತಿಳಿಸಿದೆ.

ಹೆಲ್ಪಿಂಗ್‌ ಹ್ಯಾಂಡ್ಸ್‌ ಸಂಸ್ಥೆಯ ಗೌರವಾಧ್ಯಕ್ಷ ಜ್ಞಾನಾನಂದ ಐರೋಡಿ, ರವೀಂದ್ರ ರಟ್ಟಾಡಿ,ಗೌರವ ಸಲಹೆಗಾರ ರಾಘವೇಂದ್ರ ಕುಂದರ್ ಉಪಾಧ್ಯಕ್ಷ ಗುರುಪ್ರಸಾದ್ ಖಾರ್ವಿ , ಕಾರ್ಯದರ್ಶಿ ಚೇತನ್ ಖಾರ್ವಿ, ಕೋಶಾಧಿಕಾರಿ ಸುನೀಲ್ ತಲ್ಲೂರು, ಸಂಘಟನಾ ಕಾರ್ಯದರ್ಶಿ ಸಂದೀಪ್ ಮೊಗವೀರ , ದೀಪಕ್ ಖಾರ್ವಿ, ಹರೀಶ್ ಕೋಟಾನ್, ಹೆಲ್ಪಿಂಗ್ ಹ್ಯಾಂಡ್ಸ್ ಅನ್ನದಬಟ್ಟಲು ಯೋಜನೆಯ ಕಾರ್ಯದರ್ಶಿಗಳಾದ ಸುಕೇಶ್ ನಾಯ್ಕ್ ಜೊತೆ ಕಾರ್ಯದರ್ಶಿಗಳಾದ ರಜತ್, ಪ್ರಚಾರ ಸಮಿತಿ ಕಾರ್ಯದರ್ಶಿಗಳಾದ ಸತ್ಯನಾರಾಯಣ ಪೂಜಾರಿ ಹಾಗೂ ಗುಡಿಬೆಟ್ಟು ಪಂಚಾಯತ್ ಅಧ್ಯಕ್ಷರು, ಗುಡಿಬೆಟ್ಟು ಧರ್ಮಸ್ಥಳ ಸಂಘದ ಎಲ್ಲಾ ಪಧಾಧಿಕಾರು ಮತ್ತು ಸದಸ್ಯರು, ಇವ್ನಿಂಗ್ ಕ್ರಿಕೆಟರ್ಸ್ ಗುಡಿಬೆಟ್ತು ಸದಸ್ಯರು, ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥೆಯು ತಲ್ಲೂರಿನಲ್ಲಿ‌ ನಿರ್ಮಿಸುತ್ತಿರುವ 2ನೇ ಮನೆಯನಿರ್ಮಾಣ ಕಾರ್ಯ ಕೂಡ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಆ ಮನೆಯ ಗ್ರಹಪ್ರವೇಶ ಕೂಡ ಜರುಗಲಿದೆ. ಒಟ್ಟಿನಲ್ಲಿ ಹೆಲ್ಪಿಂಗ್‌ ಹ್ಯಾಂಡ್ಸ್‌ ಜನರ ಕಾರ್ಯದ ಮೂಲಕ ಜನ ಮೆಚ್ಚುಗೆಯ ಕಾರ್ಯವನ್ನು ಮಾಡುತ್ತಿದ್ದು, ಇತರರಿಗೆ ಮಾದರಿಯಾಗಿದೆ.

ಇದನ್ನೂ ಓದಿ : Sheldon Jackson: “ನನ್ನ ವಯಸ್ಸು 35, 75 ಅಲ್ಲ” ಅವಕಾಶ ಸಿಗದಿದ್ದಕ್ಕೆ ಬಿಸಿಸಿಐ ವಿರುದ್ಧ ಆಕ್ರೋಶ ಹೊರ ಹಾಕಿದ ಕ್ರಿಕೆಟರ್

ಇದನ್ನೂ ಓದಿ : Rakesh Jhunjhunwala 5 billion wealth: ರಾಕೇಶ್ ಜುಂಜುನ್ವಾಲಾ 5 ಬಿಲಿಯನ್ ಸಂಪತ್ತಿಗೆ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಉತ್ತರಾಧಿಕಾರಿ

Helping Hands Kundapura made Nellikatte Gudibettu Grandmother Sringeri dream come true

Comments are closed.