ಬುಧವಾರ, ಏಪ್ರಿಲ್ 30, 2025
HomeCinemaPuneeth Rajkumar dream : ಪುನೀತ್ ಕನಸು ನನಸಾಗಿಸಲು ಮುಂದಾದ ಗೀತಾ ಶಿವಣ್ಣ: ಪವರ್ ಹೆಸರಲ್ಲಿ...

Puneeth Rajkumar dream : ಪುನೀತ್ ಕನಸು ನನಸಾಗಿಸಲು ಮುಂದಾದ ಗೀತಾ ಶಿವಣ್ಣ: ಪವರ್ ಹೆಸರಲ್ಲಿ ಸಿದ್ದವಾಗಲಿದೆ ಫುಡ್ ಪ್ರೊಡಕ್ಟ್

- Advertisement -

ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ರನ್ನು ನಟನಾಗಿ ಕಂಡವರೇ ಎಲ್ಲ. ಆದರೆ ಅವರೊಳಗಿನ ಸಮಾಜ ಸೇವಕ ಜಗತ್ತಿಗೆ ಪರಿಚಯವಾಗುವಾಗ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ದರು. ಆದರೆ ಈಗ ಪುನೀತ್ (Puneeth Rajkumar dream) ಕುಟುಂಬ ವರ್ಗ ಅವರ ಎಲ್ಲ ಕನಸುಗಳನ್ನು ಈಡೇರಿಸಲು ಕಟಿಬದ್ಧವಾಗಿದ್ದು, ಪವರ್ ಸ್ಟಾರ್ ಪ್ರೀತಿಯ ತಾಣ ಶಕ್ತಿಕೇಂದ್ರವನ್ನು ಇನ್ನಷ್ಟು ಬಲಪಡಿಸಲು ಪುನೀತ್ ಕುಟುಂಬ ಶ್ರಮಿಸುತ್ತಿದೆ.

ಮೈಸೂರಿನಲ್ಲಿರೋ ಶಕ್ತಿ ಕೇಂದ್ರ ದೊಡ್ಮನೆಯ ಕನಸಿನ ಕೂಸು. ಆರ್ಥಿಕವಾಗಿ ಸಶಕ್ತರಲ್ಲದ ಹೆಣ್ಣುಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲ ರೀತಿಯಲ್ಲೂ ಶ್ರಮಿಸುತ್ತಿರುವ ಈ ಶಕ್ತಿಕೇಂದ್ರದ ಏಳ್ಗೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲದಂತೆ ಪ್ರಯತ್ನಿಸಿದ್ದರು. ತಮ್ಮ ಗಳಿಕೆಯ ಬಹುಭಾಗವನ್ನು ಪುನೀತ್ ರಾಜ್ ಕುಮಾರ್ ಈ ಶಕ್ತಿಕೇಂದ್ರದ ಅಭ್ಯುದಯಕ್ಕಾಗಿ ಬಳಸುತ್ತಿದ್ದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದ ಪುನೀತ್ ರಾಜ್ ಕುಮಾರ್ ತಮ್ಮ ಶೂಟಿಂಗ ನಡುವಿನ ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲದಕ್ಕೂ ಅವಕಾಶ ಕಲ್ಪಿಸಿದ್ದರು.

ಪುನೀತ್ ನಿಧನದ ಬಳಿಕ ಶಕ್ತಿ ಕೇಂದ್ರ ಅಕ್ಷರಷಃ ಅನಾಥಭಾವದಲ್ಲಿತ್ತು. ಅಲ್ಲಿನ ಮಕ್ಕಳು ಕಣ್ಣೀರು ಸುರಿಸಿ ಪುನೀತ್ ಸ್ಮರಿಸಿ ನೋವಿನಲ್ಲಿ ಮುಳುಗಿದ್ದರು. ಆದರೆ ಪುನೀತ್ ನಿಧನದ ಬಳಿಕ ದೊಡ್ಮನೆ ಕುಟುಂಬ ಶಕ್ತಿಧಾಮಕ್ಕೆ ಶಕ್ತಿ, ಚೈತನ್ಯ ತುಂಬುವ ಕೆಲಸವನ್ನು ಮುಂದುವರೆಸಿಕೊಂಡು ಹೋಗ್ತಿದೆ.ಅದರಲ್ಲೂ ವಿಶೇಷವಾಗಿ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಶಕ್ತಿಕೇಂದ್ರದ ಬೆಂಬಲಕ್ಕೆ ನಿಂತಿದ್ದಾರೆ. ಪುನೀತ್ ನಿಧನದ ಬಳಿಕ ತಮ್ಮ ಬಿಡುವಿನ ವೇಳೆಯನ್ನು ಶಿವಣ್ಣ ಶಕ್ತಿಧಾಮದಲ್ಲಿ ಕಳೆಯುತ್ತ ಮಕ್ಕಳಿಗೆ ಪುನೀತ್ ಕೊರತೆ ಬಾಧಿಸದಂತೆ ನೋಡಿಕೊಳ್ಳಲಾರಂಭಿಸಿದ್ದರು.

ಈಗ ಪುನೀತ್ ಕನಸಿನಂತೆ ಶಕ್ತಿ ಧಾಮ ದ ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿಸಲು ಗೀತಾ ಶಿವರಾಜ್ ಕುಮಾರ್ ಹೊಸ ಯೋಜನೆ ರೂಪಿಸಿದ್ದಾರೆ. ಶಕ್ತಿಧಾಮದ ಹೆಣ್ಣುಮಕ್ಕಳಿಗೆ ಗೀತಾ ಬೇಕಿಂಗ್ ತರಬೇತಿ ಕೊಡಿಸುತ್ತಿದ್ದಾರಂತೆ. ಬೇಕಿಂಗ್ ತರಬೇತಿ ಕೊಡಿಸಿದ ಬಳಿಕ ಶಕ್ತಿಧಾಮದಲ್ಲೇ ಆಹಾರ ಪ್ರೊಡೆಕ್ಟ್ ದ ತಯಾರಿಸಿ ಮಾರ್ಕೆಟಿಂಗ್ ಮಾಡಿಸುವ ಪ್ರಯತ್ನವನ್ನು ಗೀತಾ ಶಿವರಾಜ್ ಕುಮಾರ್ ಆರಂಭಿಸಿದ್ದಾರಂತೆ.

ಇದು ಪುನೀತ್ ರಾಜ್ ಕುಮಾರ್ ಅವರ ಕನಸಾಗಿತ್ತು. ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಕೆಲಸ ಮಾಡಿಕೊಂಡು ಬದುಕುವಂತಿರಬೇಕು ಎಂದು ಪುನೀತ್ ಯಾವಾಗಲೂ ಬಯಸುತ್ತಿದ್ದರಂತೆ. ಹೀಗಾಗಿ ಶಕ್ತಿಕೇಂದ್ರದ ಮಕ್ಕಳಿಗೆ ಸ್ವಾವಲಂಬನೆಯ ಪಾಠ ಕಲಿಸಲು ದೊಡ್ಮನೆ ಕುಟುಂಬ ಯೋಜನೆ ರೂಪಿಸಿದೆ. ಆ ಮೂಲಕ ಅಪ್ಪು ಕನಸುಗಳಿಗೆ ಜೀವ ತುಂಬುತ್ತಿದೆ.

ಇದನ್ನೂ ಓದಿ : Dowry Case: 20 ವರ್ಷದ ಹಳೆಯ ವರದಕ್ಷಿಣೆ ಕೇಸ್ ಗೆ ಮರುಜೀವ: ಕಿರುತೆರೆ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ : Meghana Raj Sarja body shaming : ಮೇಘನಾ ರಾಜ್ ಸರ್ಜಾಗೂ ಎದುರಾಗಿತ್ತು ಬಾಡಿ ಶೇಮಿಂಗ್ : ನೋವು ತೋಡಿಕೊಂಡ ಬಹುಭಾಷಾ ನಟಿ

Geetha Shiva Rajkumar is ready to make Puneeth Rajkumar dream come true Power Food product will be ready in Shakthidhama

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular