Arjun Tendulkar Ranaji Century : ಅಪ್ಪನಂತೆ ಮಗ.. ರಣಜಿ ಪದಾರ್ಪಣೆಯಲ್ಲೇ ಅರ್ಜುನ್ ತೆಂಡೂಲ್ಕರ್ ಶತಕ

ಪೊರ್ವರಿಮ್ (ಗೋವಾ): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ರಣಜಿ ಟ್ರೋಫಿ (Ranji Trophy 2022023) ಪಂದ್ಯದಲ್ಲೇ ಶತಕ(Arjun Tendulkar Ranaji Century) ಬಾರಿಸಿದವರು. ಅಪ್ಪನಂತೆ ಮಗನೂ ರಣಜಿ ಪದಾರ್ಪಣೆಯ ಪಂದ್ಯಲ್ಲಿ ಶತಕ ಬಾರಿಸಿದ್ದಾರೆ (Sachin Tendulkar son Arjun Tendulkar).

ಪ್ರಸಕ್ತ ದೇಶೀಯ ಕ್ರಿಕೆಟ್’ನಲ್ಲಿ ಗೋವಾ ಪರ ಆಡುತ್ತಿರುವ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್, ರಾಜಸ್ಥಾನ ವಿರುದ್ಧದ ಪಂದ್ಯದ ಮೂಲಕ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ 7ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಎಡಗೈ ಬ್ಯಾಟ್ಸ್’ಮನ್ ಅರ್ಜುನ್ ತೆಂಡೂಲ್ಕರ್ ಅಮೋಘ ಶತಕದೊಂದಿಗೆ ಮಿಂಚಿದರು. 207 ಎಸೆತಗಳನ್ನೆದುರಿಸಿದ ಅರ್ಜುನ್ 16 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 120 ರನ್ ಗಳಿಸಿ ಔಟಾದರು. ಅಷ್ಟೇ ಅಲ್ಲ, ಔಟಾಗುವ ಮುನ್ನ ಸುಯಾನ್ಷ್ ಪ್ರಭುದೇಸಾಯಿ (212 ರನ್) ಜೊತೆ 6ನೇ ವಿಕೆಟ್’ಗೆ 221 ರನ್’ಗಳ ಜೊತೆಯಾಟವಾಡಿದರು.

ಅರ್ಜುನ್ ತೆಂಡೂಲ್ಕರ್ ಅವರ ತಂದೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಮಾಡಿದ್ದರು. 1988ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಸಚಿನ್, 1988ರ ಡಿಸೆಂಬರ್ 11ರಂದು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು. 34 ವರ್ಷಗಳ ನಂತರ ಡಿಸೆಂಬರ್ 14ರಂದು ಸಚಿನ್ ಪುತ್ರನೂ ಅಂಥದ್ದೇ ಸಾಧನೆ ಮಾಡಿದ್ದಾರೆ. ಅಂದ ಹಾಗೆ ಚೊಚ್ಚಲ ರಣಜಿ ಪಂದ್ಯವಾಡುತ್ತಿರುವ ಅರ್ಜುನ್’ಗೆ ಈಗ 23 ವರ್ಷ. ಅಪ್ಪ 15ನೇ ವಯಸ್ಸಿನಲ್ಲೇ ಶತಕ ಬಾರಿಸಿದ್ರೆ, ಮಗ 23ನೇ ವರ್ಷದಲ್ಲಿ ರಣಜಿ ಸೆಂಚುರಿ ಸಿಡಿಸಿದ್ದಾರೆ.

ಎಡಗೈ ಮಧ್ಯಮ ವೇಗದ ಬೌಲರ್ ಕೂಡ ಆಗಿರುವ ಅರ್ಜುನ್ ತೆಂಡೂಲ್ಕರ್, ಈ ವರ್ಷ ಮುಂಬೈನಿಂದ ಗೋವಾಗೆ ವಲಸೆ ಬಂದಿದ್ದಾರೆ. ಮುಂಬೈ ತಂಡದಲ್ಲಿ ಅವಕಾಶಗಳ ಕೊರತೆಯ ಹಿನ್ನೆಲೆಯಲ್ಲಿ ಗೋವಾ ತಂಡ ಸೇರಿಕೊಂಡಿರುವ ಅರ್ಜುನ್, ಸೈಯದ್ ಮುಷ್ತಾಕ್ ಅಲಿ ಟಿ20 ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿಗಳಲ್ಲಿ ಗೋವಾ ಪರ ಮಿಂಚಿದ್ದರು. ಇದೀಗ ರಣಜಿ ಟ್ರೋಫಿಯ ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : Andrew Flintoff : ಕಾರು ಅಪಘಾತದಲ್ಲಿ ಆ್ಯಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ, ಆಸ್ಪತ್ರೆಗೆ ಏರ್ ಲಿಫ್ಟ್

ಇದನ್ನೂ ಓದಿ : IPL 2023 Auction Player list : ಐಪಿಎಲ್ ಹರಾಜು: ಆಟಗಾರರ ಅಂತಿಮ ಪಟ್ಟಿ ಪ್ರಕಟ, ಫೈನಲ್ ಲಿಸ್ಟ್’ನಲ್ಲಿ ಒಟ್ಟು 405 ಆಟಗಾರರು

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Arjun Tendulkar Scores Century on Ranaji Trophy Debut Follow Father Sachin Tendulkar

Comments are closed.