ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ರಾಜ್ಯ ಸರಕಾರ ಭರ್ಜರಿ ಗಿಫ್ಟ್ ನೀಡಿದೆ. ಎಲ್ಲಾ ಚಾಲಕರಿಗೆ ಸಿಎಂ ಯಡಿಯೂರಪ್ಪ ತಲಾ 3000 ರೂಪಾಯಿ ಸಹಾಯಧನ ಘೋಷಣೆ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ನಲ್ಲಿ ಚಾಲಕರಿಗೆ ಕೊಂಚ ಸಮಾಧಾನ ನೀಡಿದೆ. ಕಳೆದ ಬಾರಿ 5 ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿದ್ದ ರಾಜ್ಯ ಸರಕಾರ ಈ ಬಾರಿ ಚಾಲಕರಿಗೆ 3 ಸಾವಿರ ರೂಪಾಯಿ ಘೋಷಣೆಯನ್ನು ಮಾಡಿದೆ.
ಚಾಲಕರ ಖಾತೆಗಳಿಗೆ ಶೀಘ್ರದಲ್ಲಿಯೇ ಜಮೆ ಆಗಲಿದೆ. ಈ ಮೂಲಕ ರಾಜ್ಯದಲ್ಲಿನ ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಅನುಕೂಲ ವಾಗಲಿದೆ. ಕಳೆದ ಬಾರಿ ಹಲವು ಚಾಲಕರಿಗೆ ಸಹಾಯಧನ ಲಭ್ಯವಾಗಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಚಾಲಕರಿಗೆ ಸಹಾಯಧನ ಸಿಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
