ನಾನು ಆತಂಕದಿಂದ ಕುಸಿದು ಹೋಗಿದ್ದೆ….! ಮಗನ ಕೊರೋನಾ ಸಂಕಷ್ಟವನ್ನು ಬಿಚ್ಚಿಟ್ಟ ನಟಿ ಮೇಘನಾರಾಜ್…!!

ಬದುಕಿನಲ್ಲಿ ಮರೆಯಲಾಗದ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ನಟಿ ಮೇಘನಾ ರಾಜ್ ಗೆ 2020ರ ಡಿಸೆಂಬರ್ ನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿತ್ತು, 2 ತಿಂಗಳ ಮಗನಿಗೆ ಕೊರೋನಾ ಸೋಂಕು ತಗುಲಿದ ಕ್ಷಣವನ್ನು ನೆನಪಿಸಿಕೊಂಡಿರುವ ಮೇಘನಾ ನಾನು ಆತಂಕದಿಂದ ಕುಸಿದು ಹೋಗಿದ್ದೇ ಎಂದಿದ್ದಾರೆ.

https://kannada.newsnext.live/corona-lockdown-cm-yediyurappa-declare-1200-crore-packge/

ಪ್ರೀತಿಸಿ ಮದುವೆಯಾದ ಪತಿಯೊಂದಿಗೆ ನೆಮ್ಮದಿ ಹಾಗೂ ಖುಷಿ ದಿನಗಳನ್ನು ಎಂಜಾಯ್ ಮಾಡ್ತಿದ್ದ ಮೇಘನಾಗೆ 2020 ರ ಜೂನ್ 7 ರಂದು ಆಘಾತ ಎದುರಾಗಿತ್ತು. ಪ್ರೀತಿಸಿ ಮದುವೆಯಾದ ಪತಿ ,ನಟ ಚಿರು ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಈ ನೋವು ಎದುರಾದಾಗ ಮೇಘನಾ ರಾಜ್ 5 ತಿಂಗಳ ಗರ್ಭಿಣಿ.

https://kannada.newsnext.live/big-relief-for-loan-emi-payment-karnataka/

ಅಕ್ಟೋಬರ್ 22 ರಂದು ಮೇಘನಾರಾಜ್ ಗಂಡುಮಗುವಿಗೆ ಜನ್ಮನೀಡಿದ್ದು, ಜ್ಯೂನಿಯರ್ ಚಿರುವಿನ ಆರೈಕೆಯಲ್ಲಿ ಎಲ್ಲ ದುಃಖ ಮರೆಯಲಾರಂಭಿಸಿದ್ದರು. ಆಗಲೇ ಮಾರಕ ಕೊರೋನಾ ರೋಗ ಮೇಘನಾ ಕುಟುಂಬಕ್ಕೆ ಅಂಟಿಕೊಂಡಿತ್ತು.

2020 ರ ನವೆಂಬರ್ ನಲ್ಲಿ ಮೇಘನಾ ಕುಟುಂಬಸ್ಥರ ಸಮ್ಮುಖದಲ್ಲಿ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದರು. ಡಿಸೆಂಬರ್ ನಲ್ಲಿ ಮೇಘನಾ ಎರಡು ತಿಂಗಳ ಮಗುವಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಮೇಘನಾ ರಾಜ್ ಮತ್ತು ಮಗು ಇಬ್ಬರೇ ಮನೆಯಲ್ಲಿ ಐಸೋಲೇಟ್ ಆಗಿದ್ದು, ಮೇಘನಾ ಹೆತ್ತವರು ಆಸ್ಪತ್ರೆ ಸೇರಿದ್ದರು.

https://kannada.newsnext.live/kollywood-actor-singer-soundarya-bala-nandkumar-received-bad-message/

ಎರಡು ತಿಂಗಳ ಕೊರೋನಾ ಪಾಸಿಟಿವ್ ಮಗುವಿನೊಂದಿಗೆ ತಾವು ಕೊರೋನಾ ಸೋಂಕಿತರಾಗಿದ್ದು, ಕಳೆದ ದಿನಗಳನ್ನು ನೆನಪಿಸಿಕೊಂಡಿರುವ ಮೇಘನಾ ಆಗ ನಾನು ಅಕ್ಷರಷಃ ಕುಸಿದು ಹೋಗಿದ್ದೇ ಎಂದಿದ್ದಾರೆ. ಡಾಕ್ಟರ್ ತಂಡವೊಂದು ನನಗೆ ಧೈರ್ಯ ತುಂಬಿ ಸಂತೈಸಿ ಆರೈಕೆ ಮಾಡಿದ್ದರಿಂದ ಚೇತರಿಸಿಕೊಳ್ಳುವುದು ಸಾಧ್ಯವಾ ಯಿತು ಎಂದಿದ್ದಾರೆ.

ಮೊದಲೇ ಮಗುವಿನ ಆರೈಕೆ ವಿಚಾರದಲ್ಲಿ ಆತಂಕಕ್ಕೆ ಒಳಗಾಗುತ್ತಿದ್ದ ಮೇಘನಾ ಈ ಸಂದರ್ಭವನ್ನು ಕಷ್ಟದಿಂದ ಎದುರಿಸಿದ್ದೇನೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ನನ್ನ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೂ ಕೊರೋನಾದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು ಎಂದಿದ್ದಾರೆ.

Comments are closed.