ಸೋಮವಾರ, ಏಪ್ರಿಲ್ 28, 2025
HomeautomobileETC Alert : ವಾಹನ ಮಾಲೀಕರಿಗೆ ಗುಡ್‌ನ್ಯೂಸ್‌ : ಅವಧಿಗೂ ಮುನ್ನವೇ ನಿಮ್ಮ ಮೊಬೈಲ್‌ಗೆ ಬರಲಿದೆ...

ETC Alert : ವಾಹನ ಮಾಲೀಕರಿಗೆ ಗುಡ್‌ನ್ಯೂಸ್‌ : ಅವಧಿಗೂ ಮುನ್ನವೇ ನಿಮ್ಮ ಮೊಬೈಲ್‌ಗೆ ಬರಲಿದೆ Emission Test Renewal ನೆನಪಿಸುವ ಸಂದೇಶ

- Advertisement -

ತುಮಕೂರು : ಕಾರು, ಬೈಕ್‌ ಸೇರಿದಂತೆ ಇತರ ವಾಹನಗಳು ಹೊಗೆ ತಪಾಸಣಾ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ. ಆದರೆ ಎಷ್ಟೋ ಜನರಿಗೆ Emission Test Certificate ಅವಧಿ ಮುಗಿದಿರೋದು ಗೊತ್ತೇ ಆಗುವುದಿಲ್ಲ. ಸಂಚಾರಿ ಪೊಲೀಸರು ಅಥವಾ ಆರ್‌ಟಿಓ ಅಧಿಕಾರಿಗಳು ದಂಡ ವಿಧಿಸಿದಾಗಲೇ ನಮಗೆ ಎಚ್ಚರವಾಗುತ್ತೆ. ವಾಹನ ಮಾಲೀಕರು ಇನ್ಮುಂದೆ ದಂಡವನ್ನು ತಪ್ಪಿಸಿಕೊಳ್ಳುವುದಕ್ಕೆ ತಂತ್ರಜ್ಞಾನವೊಂದು ಆವಿಷ್ಕಾರಗೊಂಡಿದೆ.

ವಾಹನ ಮಾಲೀಕರು ತಮ್ಮ ಎಮಿಷನ್‌ ಟೆಸ್ಟ್‌ ವರದಿ ಯಾವಾಗ ಮುಗಿಯುತ್ತೋ ಅಂತಾ ಪದೇ ಪದೇ ಸರ್ಟಿಫಿಕೆಟ್‌ ನೋಡುವ ಅಗತ್ಯ ಇನ್ನು ಮುಂದೆ ಬರೋದಿಲ್ಲ. ವಾಹನ ಸವಾರರ ಅಗತ್ಯಕ್ಕೆ ತಕ್ಕಂತೆ ತುಮಕೂರಿನ ಹೆಸರಾಂತ Digicube Solutions ವೆಬ್‌ ಪೋರ್ಟಲ್‌ವೊಂದನ್ನು ಆವಿಷ್ಕಾರ ಮಾಡಿದೆ. Emission Test Centre ಮೂಲಕ ವಾಹನದ ಮಾಲೀಕರು ತಮ್ಮ ವಾಹನದ ಎಮಿಷನ್‌ ಟೆಸ್ಟಿಂಗ್‌ ಅವಧಿ ಮುಗಿಯುವ ಒಂದು ವಾರದ ಮೊದಲೇ ಮಾಲೀಕರನ್ನು ಮೊಬೈಲ್‌ ಸಂದೇಶದ ಮೂಲಕ ಎಚ್ಚರಿಸುವ ಕಾರ್ಯವನ್ನು ಮಾಡುತ್ತದೆ.

ಈಗಾಗಲೇ ಸಾಕಷ್ಟು ಸಾಫ್ಟ್‌ವೇರ್‌ಗಳನ್ನು ಅಭಿವೃದ್ದಿ ಪಡಿಸಿರುವ ತುಮಕೂರಿನ ಹೆಸರಾಂತ Digicube Solutions ವಾಹನ ಸವಾರರ ಸಮಸ್ಯೆಯನ್ನು ಅರಿತುಕೊಂಡು ಈ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲಾಗಿದೆ. ವೆಬ್‌ ಸಾಫ್ಟವೇರ್‌ ಕುರಿತು Digicube Solutions ಮುಖ್ಯಸ್ಥರಾದ ರಾಘವೇಂದ್ರ ಅವರು ಮಾಹಿತಿಯನ್ನು ನೀಡಿದ್ದು,”ಇದೊಂದು ಗ್ರಾಹಕ ಸ್ನೇಹಿ ವೆಬ್‌ ಪೋರ್ಟಲ್ ಆಗಿದ್ದು, Emission Testing Centre ಗಳ ಮಾಲೀಕರಿಗೆ ಮಾತ್ರ ಅನ್ವಯಿಸುತ್ತದೆ. ETC ಮಾಲೀಕರುಗಳು ಈ ಪೋರ್ಟಲ್ ನಲ್ಲಿ ಮೊದಲು ವಾರ್ಷಿಕ ಚಂದಾದಾರರಾಗಬೇಕು. ನಂತರ ಪ್ರತೀ ತಿಂಗಳ ಕೊನೆಯ ದಿನ ಆ ತಿಂಗಳ ಪೂರ್ತಿ ವಾಹನಗಳ ಹೊಗೆ ತಪಾಸಣೆ ಮಾಡಿಸಿಕೊಂಡ ಗ್ರಾಹಕರ ಡೇಟಾ ತಮ್ಮ ತಮ್ಮ ಅಕೌಂಟ್ ಗಳ ಮೂಲಕ upload ಮಾಡಿಕೊಂಡರೆ ಆಯಾ ಗ್ರಾಹಕರಿಗೆ 6 ತಿಂಗಳಿಗೆ / 1 ವರ್ಷಕ್ಕೆ ಸರಿಯಾಗಿ Emission Test ಪ್ರಮಾಣಪತ್ರದ ಅವಧಿ ಮುಗಿಯುವ ಮುನ್ನವೇ SMS ಮೂಲಕ ಸ್ವಯಂಚಾಲಿತ ಸಂದೇಶ ತಲುಪಲಿದೆ.

ಹೀಗೆ ಮಾಡುವುದರಿಂದ ವಾಹನ ಮಾಲೀಕರು ಸುಖಾ ಸುಮ್ಮನೆ ದಂಡವನ್ನು ನೀಡುವುದು ತಪ್ಪುತ್ತದೆ. ETC ಸೆಂಟರ್ ಗಳಿಗೆ Repeat Customers ಬರುತ್ತಾರೆ. ಇದಲ್ಲದೇ ಗ್ರಾಹಕರ ಡೇಟಾ ಗೌಪತ್ಯೆಯನ್ನು ಕೂಡ ಮಾನದಂಡಗಳಿಗೆ ಅನುಗುಣವಾಗಿ ಕಾಯ್ದುಕೊಳ್ಳಲಾಗಿದೆ. ಆಸಕ್ತ ಎಮಿಷನ್ ಟೆಸ್ಟಿಂಗ್ ಕೇಂದ್ರದವರು 7338286960 ಅಥವಾ 9740260066 (ಬೆಂಗಳೂರು ಶಾಖೆ) ಇವರನ್ನು ಸಂಪರ್ಕಿಸಿ ಚಂದಾದಾರರಾಗಬಹುದಾಗಿದೆ.

ಇದನ್ನೂ ಓದಿ :

ಇದನ್ನೂ ಓದಿ :

( Good News for Vehicle Owners: Coming to Your Mobile Before Time Emission Test Renewal Warning Message )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular