ಭಾನುವಾರ, ಏಪ್ರಿಲ್ 27, 2025
Homekarnatakaಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಸದ್ಯದಲ್ಲೇ ಸ್ಥಗಿತಗೊಳ್ಳಲಿದ್ಯಾ ಫ್ರೀ ಕರೆಂಟ್ ಆಫರ್

ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಸದ್ಯದಲ್ಲೇ ಸ್ಥಗಿತಗೊಳ್ಳಲಿದ್ಯಾ ಫ್ರೀ ಕರೆಂಟ್ ಆಫರ್

- Advertisement -

Gruha Jyothi scheme Customers Alert: ರಾಜ್ಯದಲ್ಲಿ ಎಲೆಕ್ಷನ್ ಬಿಸಿ ಜೋರಾಗಿದೆ.‌ ಜನಪ್ರತಿನಿಧಿಗಳು ಲೋಕಸಭಾ ಚುನಾವಣೆ (Lok Sabha Election) ಯ ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಇದರ ಮಧ್ಯೆಯೇ ಪಂಚ ಗ್ಯಾರಂಟಿಗಳ ಜೊತೆ ಖುಷಿಯಾಗಿದ್ದ ಜನರಿಗೆ ಭರ್ಜರಿ ಶಾಕ್ ನೀಡ್ತಿದೆ ಪುಕ್ಸಟ್ಟೆ ಕರೆಂಟ್. ಅಯ್ಯೋ ಉಚಿತವಾಗಿರೋ ಕರೆಂಟ್ (Gruha Jyothi) ನಿಂದ ಶಾಕ್ ಹೊಡಿತಿದ್ಯಾ ಅಂತ ಹುಬ್ಬೇರಿಸ್ತಿರೋರಿಗೆ ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ.

ರಾಜ್ಯದಲ್ಲಿ ಚುನಾವಣೆಯ ಜೊತೆಗೆ ಬಿರು ಬೇಸಿಗೆಯೂ ಕಾಲಿಟ್ಟಿದೆ.‌ಸುಡೋ ಸೂರ್ಯನಿಂದಾಗಿ ಜನರು ಮನೆ ಒಳಗೂ ಹೊರಗೂ ಕಾವಲಿ ಮೇಲೆ ಕೂತಂಥ ಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಕಾದು ಕಾವಲಿಯಂತಾದ ದೇಹವನ್ನು ತಂಪು ಮಾಡಿಕೊಳ್ಳೋಕೆ ಫ್ಯಾನ್,ಎಸಿ ಮೊರೆ ಹೋಗ್ತಿದ್ದಾರೆ. ಹೀಗೆ ಫ್ರೀ ಕರೆಂಟ್ ನಲ್ಲಿ ಶೋಕಿ ಮಾಡೋಕೆ ಹೋಗ್ತಿದ್ದೋರಿಗೆ ಈಗ ಸರ್ಕಾರ ಸಖತ್ ಬಿಸಿ ಮುಟ್ಟಿಸಿದೆ.

Gruha Jyothi scheme Customers Alert Free current offer to stop soon
Image Credit to Original Source

ಗೃಹಜ್ಯೋತಿ ಗುಂಗಲ್ಲಿರುವ ಜನರಿಗೆ ಬೇಸಿಗೆಗಾಲ ಶಾಕ್ ಕೊಟ್ಟಿದೆ. ಕಳೆದ ತಿಂಗಳು ಲೆಕ್ಕಕ್ಕೂ ಮೀರಿ ವಿದ್ಯುತ್ ಬಳಸಿರುವ ಹಿನ್ನೆಲೆ ಫಲಾನುಭವಿಗಳ ಪೈಕಿ 20% ರಷ್ಟು ಮಂದಿ ಸಂಪೂರ್ಣ ಬಿಲ್ ಪಾವತಿ ಮಾಡುವಂತಾಗಿದೆ. ಎಸಿ, ಕೂಲರ್, ಫ್ಯಾನ್ ಬಳಕೆಯೇ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಅನ್ನೋದು ಮನೆಗೆ ಬರ್ತಿರೋ ಬಿಲ್ ಗಳು ಸಾರಿ ಹೇಳ್ತಿವೆ.

ಕಾಂಗ್ರೆಸ್ ನ ಬಹುನಿರೀಕ್ಷಿತೆ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಫಲಾನುಭವಿಗಳಿಗೆ ಬೇಸಿಗೆಯಲ್ಲಿ ಕೈ ಸುಡಲಾರಂಭಿಸಿದೆ. ಬೇಸಿಗೆ ಗುಂಗಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಿಸಿರುವ ಪರಿಣಾಮ 20% ಗ್ರಾಹಕರು ಫುಲ್ ಬಿಲ್ ಪಾವತಿ ಮಾಡುವಂತಾಗಿದೆ. ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಅರ್ಹತೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ

ಈ ಪೈಕಿ ಶೇಕಡಾ 20ರಷ್ಟು ಮಂದಿಗೆ ಬೇಸಿಗೆ ಆರಂಭದಲ್ಲೇ ಫುಲ್ ಬಿಲ್ ಬರೋದಕ್ಕೆ ಶುರುವಾಗಿದೆ. ಎಸಿ, ಫ್ಯಾನ್, ಕೂಲರ್ ಹಾಗೂ ಇತರೆ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಡಿದಾಟಿ ಕರೆಂಟ್ ಬಳಕೆಯಾಗುತ್ತಿದೆ. ಹೀಗಾಗಿ ಸಂಪೂರ್ಣ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.

ನಿಯಮವನ್ನು ಸಂಪೂರ್ಣವಾಗಿ ಗಮನಿಸದೇ ಹಾಗೂ ಅರ್ಥ ಮಾಡಿಕೊಳ್ಳದೇ, ಬೇಕಾಬಿಟ್ಟಿ ಫ್ಯಾನ್,ಎಸಿ.ಕೂಲರ್ ಗಳನ್ನು ಬಳಸ್ತಿದ್ದೋರಿಗೆ ರಾಜ್ಯ ಸರಕಾರ ದಂಡದ ರುಚಿ ತೋರಿಸಿದೆ. ಸದ್ಯ1,700 ಮೆಗಾವ್ಯಾಟ್ ವಿದ್ಯುತ್ ಸರಾಸರಿಯಾಗಿ ಬಳಕೆಯಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಇದರ ಪ್ರಮಾಣ 40%ನಷ್ಟು ಏರಿಕೆಯಾಗಿತ್ತು. ರಾಜ್ಯದ ಪ್ರತಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 300 ಲಕ್ಷ ಯೂನಿಟ್ ಕರೆಂಟ್ ಬಳಕೆಯಾಗುತ್ತಿದೆ.

Gruha Jyothi scheme Customers Alert Free current offer to stop soon
Image Credit to Original Source

ಆದರೆ ಗೃಹಜ್ಯೋತಿ ಫಲಾನುಭವಿಗಳು 200 ಯೂನಿಟ್ ಗೂ ಮೀರಿ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಇದರ ಪ್ರಮಾಣ 300 ಲಕ್ಷ ಯೂನಿಟ್ ನಿಂದ 330 ಅಥವಾ 340 ಲಕ್ಷ ಯೂನಿಟ್ ಗೆ ಏರಿಕೆಯಾಗುವ ಸಾಧ್ಯತೆ ಇದೆಯಂತೆ. ಸದ್ಯ ಬೇಸಿಗೆಗಾಲ ಆರಂಭವಾಗಿದ್ದು, ಇನ್ನೂ ಎರಡ್ಮೂರು ತಿಂಗಳು ಇದೇ ರೀತಿಯ ವಾತಾವರಣ ಮುಂದುವರೆಯಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್‌

ಈ ಅವಧಿಯಲ್ಲಿ ಉಚಿತ ಗುಂಗಲ್ಲಿ ಸಾರ್ವಜನಿಕರು ಮೈಮರೆತು ಹೆಚ್ಚಿನ ವಿದ್ಯುತ್ ಬಳಸಿದರೆ ಸದ್ಯ ರಾಜ್ಯದಲ್ಲಿ ತಲೆದೋರಿರುವ ನೀರಿನ ಅಭಾವದಂತೆ ವಿದ್ಯುತ್ ಗೂ ಅಭಾವ ಎದುರಾಗುವ ಸಂಭವವಿದೆ. ಹೀಗಾದರೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾಗುವ ಭೀತಿಯೂ ಇದೆ. ಒಟ್ಟಾರೆ ಬೇಸಿಗೆ ಹೊಡೆತಕ್ಕೆ ಒಂದೆಡೆ ನೀರಿನ ಅಭಾವದ ಜೊತೆಗೆ ವಿದ್ಯತ್ ಗೆ ಬೇಡಿಕೆ ಏರುತ್ತಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆ ರದ್ದು ! ಏನಿದು ಲೋಕಸಭಾ ಚುನಾವಣಾ ಲೆಕ್ಕಾಚಾರ

ಜನರು ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ ಲೋಡ್ ಶೆಡ್ಡಿಂಗ್ ಜಾರಿಯಾದರೂ ಆಗಬಹುದು ಅಂತಿದ್ದಾರೆ ಅಧಿಕಾರಿಗಳು. ಇನ್ನು ಫ್ರೀ ಕರೆಂಟ್ ಗುಂಗಲ್ಲೇ ಇರುವ ಜನರು ತಾವು ಹೆಚ್ಚಿಗೆ ಕರೆಂಟ್ ಬಳಸಿದ್ದು ಗೊತ್ತಾದ ಮೇಲೂ ಬಿಲ್ ಕಟ್ಟಲು ಮುಂದಾಗ್ತಿಲ್ಲ. ಇದು ಬೆಸ್ಕಾಂ ಸೇರಿದಂತೆ ವಿದ್ಯುತ್ ನಿಗಮಗಳ ಬಿಲ್ ಕಲೆಕ್ಟರ್ ಗಳ ಪಾಲಿಗೆ ತಲೆನೋವಾಗಿದ್ದು, ಇದೇ ಸ್ಥಿತಿ ಮುಂದುವರೆದರೇ ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ನಿಲ್ಲಿಸಿದರೂ ಅಚ್ಷರಿಯೇನಿಲ್ಲ ಎನ್ನಲಾಗಿದೆ.

Gruha Jyothi scheme Customers Alert: Free current offer to stop soon

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular