Gruha Jyothi Scheme : ಬಾಡಿಗೆದಾರರಿಗೂ ಸಿಗುತ್ತಾ 200ಯೂನಿಟ್‌ ವಿದ್ಯುತ್‌ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

ಬೆಂಗಳೂರು: Gruha Jyothi Scheme : ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಅದ್ರಲ್ಲೂ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್‌ ವಿದ್ಯುತ್‌ ಅನ್ನು ಯಾವುದೇ ಜಾತಿ, ಧರ್ಮ, ಭಾಷೆಯ ತಾರತಮ್ಯವಿಲ್ಲದೇ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಬಾಡಿಗೆದಾರರು ಹಾಗೂ ಮನೆ ಮಾಲೀಕರು ಈ ಯೋಜನೆ ಅನ್ವಯವಾಗಲಿದ್ಯಾ ಅನ್ನೋ ವಿಚಾರಕ್ಕೂ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಹುತೇಕರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಎಲ್ಲಾ ಮನೆಗಳಿಗೂ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ದೊರೆಯಲಿದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗಿಲ್ಲ. ಆದರೆ 12 ತಿಂಗಳ ಅವಧಿಯ ವಿದ್ಯುತ್‌ ಬಳಕೆಯ ಸರಾಸರಿ ಲೆಕ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಶೇಕಡಾ 10 ರಷ್ಟು ಹೆಚ್ಚು ಮಾಡಿ ಅದು 200 ಯೂನಿಟ್‌ ವರೆಗಿನ ವಿದ್ಯುತ್‌ ಬಳಸಿದರೆ ಮಾತ್ರವೇ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉದಾಹರಣೆಗೆ ತಿಂಗಳಲ್ಲಿ 70,80,199 ಯೂನಿಟ್‌ ವಿದ್ಯುತ್‌ ಬಳಕೆ ಮಾಡಿದ್ದರೆ, ಅದಕ್ಕೆ ಶೇ.10 ರಷ್ಟನ್ನು ಹೆಚ್ಚಿಸಿ ನೋಡುತ್ತೇವೆ ಆಗ ೨೦೦ ಯೂನಿಟ್‌ ಬಾರದಿದ್ರೆ ವಿದ್ಯುತ್‌ ಶುಲ್ಕ ಇರುವುದಿಲ್ಲ. ಆದರೆ ಈಗಾಗಲೇ ವಿದ್ಯುತ್‌ ಬಿಲ್‌ ಸಿದ್ದ ಪಡಿಸಿ ಗ್ರಾಹಕರಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮುಂದಿನ ತಿಂಗಳು 1 ರಿಂದ ಜಾರಿಗೆ ತರಲಾಗುತ್ತದೆ. ಇದುವರೆಗೆ ಬಾಕಿ ಇರುವ ವಿದ್ಯುತ್‌ ಶುಲ್ಕವನ್ನು ಗ್ರಾಹಕರೇ ಪಾವತಿ ಮಾಡಬೇಕಾಗಿದೆ.

Gruha Jyothi Scheme : ಕಾಂಗ್ರೆಸ್‌ ಗ್ಯಾರಂಟಿ ಜಾರಿ :

ಬಿಪಿಎಲ್‌, ಎಪಿಎಲ್‌ ಮನೆ ಯಜಮಾನಿಗೆ 2 ಸಾವಿರ ರೂಪಾಯಿ

ಇನ್ನು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಯ ಖಾತೆಗೆ 2 ಸಾವಿರ ರೂಪಾಯಿ ಹಣವನ್ನು ಪ್ರತೀ ತಿಂಗಳು ಜಮೆ ಮಾಡಲಾಗುತ್ತದೆ. ಜೂನ್‌ 15ರಿಂದ ಜುಲೈ 15 ರ ಒಳಗಾಗಿ ಮನೆಯ ಯಜಮಾನಿಯು ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಕೆ ಮಾಡಬೇಕಾಗಿದೆ. ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡುದಾರರಿಗೂ ಈ ಯೋಜನೆ ಲಾಭ ದೊರೆಯಲಿದೆ. ಮನೆಯ ಯಜಮಾನಿಯು ಕಡ್ಡಾಯವಾಗಿ ಆಧಾರ್‌ ಕಾರ್ಡ್‌, ಬ್ಯಾಂಕ್‌ ಅಕೌಂಟ್‌ ಪಾಸ್‌ಬುಲ್‌ ಜೆರಾಕ್ಸ್‌ ಪ್ರತಿಯನ್ನು ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮನೆಯ ಯಜಮಾನಿಯ ಖಾತೆಗೆ ಹಣ ನೇರವಾಗಿ ಜಮೆ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಜುಲೈ 1 ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ

ಅನ್ನಭಾಗ್ಯ ಯೋಜನೆಯಡಿಯಲ್ಲಿ ತಲಾ 10 ಕೆಜಿ ಆಹಾರ ಧಾನ್ಯ ಪೂರೈಕೆ ಮಾಡುತ್ತೇವೆ. ಈ ಯೋಜನೆ ಜುಲೈ 1 ರಿಂದಲೇ ಜಾರಿಗೆ ಬರಲಿದೆ. ಬಿಪಿಎಲ್‌ ಕಾರ್ಡುದಾರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಅಂತ್ಯೋದಯ ಕಾರ್ಡುದಾರರಿಗೂ ಕೂಡ ತಲಾ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಲಾಗಿದೆ.

ಜೂಲ್‌ 11 ರಿಂದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಶಕ್ತಿಯೋಜನೆಯನ್ನು ಕೂಡ ಘೋಷಣೆ ಮಾಡಲಾಗಿದ್ದು, ಈ ಯೋಜನೆಯ ಮೂಲಕ ಮಹಿಳೆಯರು ರಾಜ್ಯದಾದ್ಯಂತ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಎಸಿ ಮತ್ತು ಲಕ್ಸುರಿ ಬಸ್ಸುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್ಸುಗಳಲ್ಲಿ ಸಂಚಾರ ಮಾಡಬಹುದಾಗಿದೆ. ಇದೇ ಯೋಜನೆಯನ್ನು ವಿದ್ಯಾರ್ಥಿಗಳಿಗೂ ಕೂಡ ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯನ್ನು ಜೂನ್‌ 10ರಂದು ಉದ್ಘಾಟನೆ ಮಾಡಲಾಗುತ್ತಿದ್ದು, ಜೂನ್‌ 11 ರಿಂದ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಉಚಿತವಾಗಿ ಸಂಚಾರ ಮಾಡಬಹುದಾಗಿದೆ.

ಯುವನಿಧಿ ಯೋಜನೆ, ಪದವೀಧರರಿಗೆ 3 ಸಾವಿರ, ಡಿಪ್ಲೋಮಾದವರಿಗೆ 2 ಸಾವಿರ

ಯುವನಿಧಿ ಯೋಜನೆಯನ್ನೂ ಕೂಡ ಜಾರಿ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ವ್ಯಾಸಾಂಗ ಮಾಡಿ ಪಾಸ್‌ ಆಗಿ ನೋಂದಣಿ ಮಾಡಿಕೊಂಡವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಪದವೀಧರರು 3 ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಆದವರು 1,500 ರೂಪಾಯಿ ಸಹಾಯಧನವನ್ನು 24 ತಿಂಗಳ ಕಾಲ ಪಡೆಯಬಹುದಾಗಿದೆ. ಯಾರಾದ್ರೂ ಸರಕಾರಿ ಮತ್ತು ಖಾಸಗಿ ಕಂಪೆನಿಗಳಿಗೆ ಕೆಲಸಕ್ಕೆ ಸೇರ್ಪಡೆಯಾದ್ರೆ ಅವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ. ಯೋಜನೆಯ ಲಾಭ ಪಡೆದುಕೊಳ್ಳುವವರು ತಾವು ನಿರುದ್ಯೋಗಿಗಳು ಎಂದು ಘೋಷಣೆ ಮಾಡಿಕೊಂಡಬೇಕು. ಅಲ್ಲದೇ ಈ ಯೋಜನೆಗೆ ಅರ್ಜಯನ್ನು ಸಲ್ಲಿಸುವುದು ಕಡ್ಡಾಯವಾಗಿದ ಎಂದು ಸಿಎಂ ಘೋಷಿಸಿದ್ದಾರೆ.

Gruha Jyothi Scheme 200 units free electricity for Rental tenants

Comments are closed.