ಗೃಹಲಕ್ಷ್ಮೀ ಯೋಜನೆ ಈ ಮಹಿಳೆಯರಿಗಿಲ್ಲ ! ನಿಮ್ಮ ಖಾತೆಗೆ ಜಮೆ ಆಗುತ್ತಾ 2000 ರೂ. ?

ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ ದೊರೆಯಲಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಮಹಿಳೆಯರು ತಮ್ಮ ಹೆಸರನ್ನು ಯೋಜನೆಗಾಗಿ ನೋಂದಾಯಿಸಿ ಕೊಂಡಿದ್ದಾರೆ. Gruha Lakshmi Scheme Transfer Of Money To Beneficiaries Banks Accounts From Aug 30

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme)  ಇಂದು ಚಾಲನೆ ದೊರೆಯಲಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಮಹಿಳೆಯರು ತಮ್ಮ ಹೆಸರನ್ನು ಯೋಜನೆಗಾಗಿ ನೋಂದಾಯಿಸಿ ಕೊಂಡಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಕೂಡ ಈ ಯೋಜನೆಯ ಹಣ ಬರುತ್ತಾ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಅದ್ರಲ್ಲೂ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಮೂಲಕ ತಿಂಗಳಿಗೆ 2000 ರೂಪಾಯಿ ಸಿಗುವುದಿಲ್ಲ. ಹಾಗಾದ್ರೆ ಈ ಯೋಜನೆಯ ಲಾಭ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ ಅನ್ನೋದನ್ನು ನೋಡೋಣಾ.

ಕಾಂಗ್ರೆಸ್‌ ಹಿರಿಯ ಮುಖಂಡ ರಾಹುಲ್‌ ಗಾಂಧಿ (Rahul Gandhi) ಅವರು ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ. ಈ ಮೂಲಕ ಯೋಜನೆಗೆ ಆಯ್ಕೆಯಾಗಿರುವ ಮಹಿಳೆಯರ ಖಾತೆಗೆ ಹಣ ನೇರವಾಗಿ ಜಮೆ ಆಗಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramiah), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಡಿಸಿಎಂ ಡಿಕೆ ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.

Gruha Lakshmi Scheme Transfer Of Money To Beneficiaries Banks Accounts From Aug 30
Image Credit Original Source

ಕರ್ನಾಟಕ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಹಾಗೂ ಗ್ರಾಮ ಪಂಚಾಯ್‌ಗಳಲ್ಲಿ ಎಲ್‌ಇಡಿ ಪರದೆಯನ್ನು ಅಳವಡಿಸಿ ಯೋಜನೆಯ ನೇರಪ್ರಸಾರವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್‌ ಸರಕಾರ ಈಗಾಗಲೇ ಗೃಹಜ್ಯೋತಿ ಯೋಜನೆಯ ಮೂಲಕ ಜನರಿಗೆ ಉಚಿತ ವಿದ್ಯುತ್‌, ಶಕ್ತಿಯ ಯೋಜನೆಯ ಮೂಲಕ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಿದ್ದು, ಇದೀಗ ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಜಮೆ ಮಾಡುವ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯು ರಾಜ್ಯದ 10000 ಕಡೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಲಿದೆ. ಇದನ್ನೂ ಓದಿ : Post Office Monthly Income Scheme : ಪತಿ -ಪತ್ನಿಯರಿಗಾಗಿ ವಿಶೇಷ ಯೋಜನೆ ಪರಿಚಯಿಸಿದ ಅಂಚೆ ಇಲಾಖೆ

1.10 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳು

ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವದಲ್ಲಿಯೇ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದರೆ ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಜಾರಿ ವಿಳಂಭವಾಗಿತ್ತು. ಈಗಾಗಲೇ ರಾಜ್ಯದಲ್ಲಿನ ಬರೋಬ್ಬರಿ 1.10 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಯೋಜನೆಗಾಗಿ ರಾಜ್ಯ ಸರಕಾರ ಬರೋಬ್ಬರಿ 17,500 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ. ರಾಜ್ಯದಲ್ಲಿನ ಸುಮಾರು 1.25 ಕೋಟಿ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಲಿದ್ದು, ವಾರ್ಷಿಕವಾಗಿ ಸುಮಾರು 32,000 ಕೋಟಿ ರೂಪಾಯಿಯನ್ನು ಈ ಯೋಜನೆಗಾಗಿ ವಿನಿಯೋಗ ಮಾಡಲಾಗುತ್ತದೆ.

ಗೃಹ ಲಕ್ಷ್ಮೀಗೆ ಯಾರೆಲ್ಲಾ ಅರ್ಹರು ?

ರಾಜ್ಯ ಸರಕಾರ ಮಹತ್ವದ ಗೃಹಜ್ಯೋತಿ ಯೋಜನೆಯ ಎಪಿಎಲ್‌, ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುದರರೂ ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಮನೆಯ ಯಜಮಾನಿ ಮಾತ್ರವೇ ಈ ಯೋಜನೆಯಿಂದ ಪ್ರತೀ ತಿಂಗಳು 2000 ರೂ. ಹಣವನ್ನು ಪಡೆಯಲಿದ್ದಾರೆ. ಆದರೆ ಮನೆಯ ಯಜಮಾನಿ ಅಥವಾ ಆಕೆಯ ಪತಿ ಜಿಎಸ್‌ಟಿ ಪಾವತಿದಾರರಾಗಿದ್ದರೆ ಅಂತವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.

ಗೃಹಲಕ್ಷ್ಮೀ ಅರ್ಜಿಗೆ ಏನೆಲ್ಲಾ ದಾಖಲೆ ಬೇಕು

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಆಧಾರ್‌ ಕಾರ್ಡ್‌, ಪತಿಯ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಬಿಪಿಎಲ್‌ ಕಾರ್ಡ್‌, ಎಪಿಎಲ್‌ ಅಥವಾ ಅಂತ್ಯೋದಯ ದಾಖಲೆಗಳು ಅಗತ್ಯವಾಗಿ ಬೇಕಾಗಿದೆ. ಅಲ್ಲದೇ ಫಲಾನುಭವಿಗಳ ಮೊಬೈಲ್‌ ಸಂಖ್ಯೆ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಆಗಿರಬೇಕು. ಇದನ್ನೂ ಓದಿ : Aadhaar Card Update : ತುರ್ತಾಗಿ ಆಧಾರ್‌ ಕಾರ್ಡ್‌ ನವೀಕರಣ ಮಾಡಿಸಿ : ಜಾರಿಯಾಯ್ತು ಹೊಸ ರೂಲ್ಸ್‌

ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗುತ್ತಾ ಗೃಹಲಕ್ಷ್ಮೀ 2000 ರೂ. ?

ಗೃಹಲಕ್ಷ್ಮೀ ಯೋಜನೆಯ ಲಾಭ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪ್ರಮುಖವಾಗಿ ಕೇವಲ ಬಿಪಿಎಲ್‌ ಕಾರ್ಡುದಾರರಿಗೆ ಗೃಹಲಕ್ಷ್ಮೀ ಸೌಲಭ್ಯ ದೊರೆಯಲಿದೆ. ಬಾಡಿಗೆ ಉಪಯೋಗಕ್ಕೆ ಹೊರತು ಪಡಿಸಿ, ಸ್ವತಃಕ್ಕೆ ಕಾರು ಹೊಂದಿರುವವರಿಗೆ ಈ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ. ಜಿಎಸ್‌ಟಿ ಪಾವತಿ ಮಾಡುತ್ತಿರುವ ಮಹಿಳೆಯರು, ಆದಾಯ ತೆರಿಗೆ ಪಾವತಿಸುವ ಕುಟುಂಬದವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ವೃತ್ತಿ ತೆರಿಗೆ ಪಾವತಿದಾರರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸರಕಾರಿ ಉದ್ಯೋಗಿಗಳು, ಪಿಂಚಣಿ ಪಡೆಯುತ್ತಿರುವವರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

ಪ್ರತೀ ತಿಂಗಳು ಯಾವ ದಿನದಂದು ಜಮೆಯಾಗುತ್ತೆ ಗೃಹಲಕ್ಷ್ಮೀ ಹಣ ?

ಇನ್ನು ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ ದೊರೆಯಲಿದ್ದು, ಸಾಂಕೇತಿಕವಾಗಿ ಮಹಿಳೆಯ ಖಾತೆಗಳಿಗೆ ಹಣ ಜಮೆಯಾಗಲಿದೆ. ಉಳಿದಂತೆ ಪ್ರತೀ ತಿಂಗಳು 5 ಅಥವಾ 6 ನೇ ತಾರೀಕಿನಂದು ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿಯು 2000 ರೂಪಾಯಿ ಹಣವನ್ನು ಪಡೆಯಲಿದ್ದಾರೆ. ಪ್ರತೀ ತಿಂಗಳು ಮೊದಲ ವಾರದಲ್ಲಿಯೇ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲು ರಾಜ್ಯ ಸರಕಾರ ಯೋಜನೆ ಹಾಕಿಕೊಂಡಿದೆ.

Gruha Lakshmi Scheme Transfer Of Money To Beneficiaries Banks Accounts From Aug 30

Comments are closed.