Gurha lahakshmi, Yuvanidhi, Gruha Jyothi Yojana canceled : ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳದ್ದೇ ಸದ್ದು. ನುಡಿದಂತೆ ನಡೆದ ಕಾಂಗ್ರೆಸ್ ಚುನಾವಣೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಹೀಗಾಗಿ ಜನರೂ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದಾರೆ. ಆದರೆ ಈ ಗ್ಯಾರಂಟಿಯ ಎಲ್ಲಿಯವರೆಗೆ ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿರೋದು ಸುಳ್ಳಲ್ಲ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಐದೂ ಗ್ಯಾರಂಟಿಗಳು ಲೋಕಸಭೆ ಚುನಾವಣೆ ಮುಗಿಯುವವರೆಗೆ ಮಾತ್ರ ಎನ್ನಲಾಗ್ತಿದ್ದು ಈ ಸಂಗತಿ ಈಗ ಜನರ ನಿದ್ದೆಗೆಡಿಸಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಘೋಷಣೆಗಳು ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದವು. ಆಡಳಿತಾರೂಢ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ. ನುಡಿದಂತೆ ನಡೆದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ಐದು ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸಕ್ಕೆ 3,27,747 ಕೋಟಿ ಹೆಚ್ಚುವರಿ ವೆಚ್ಚವಾಗುತ್ತಿದೆ. ಕೇವಲ ಫ್ರೀ ಬಸ್ ಸಂಚಾರ ಒಂದೇ ಯೋಜನೆಗಾಗಿ ಸರ್ಕಾರ 4000 ಕೋಟಿ ಹಣ ಮೀಸಲಿಟ್ಟಿದೆ.
ಸಿದ್ಧರಾಮಯ್ಯನವರ ಅಂದಾಜಿನಂತೆ ರಾಜ್ಯ ಸರ್ಕಾರ ಈ ಎಲ್ಲ ಯೋಜನೆಗಳ ಮೂಲಕ ರಾಜ್ಯದ ಒಂದು ಬಡ ಕುಟುಂಬಕ್ಕೆ ವರ್ಷಕ್ಕೆ 50 ರಿಂದ 55 ಸಾವಿರ ರೂಪಾಯಿ ನೀಡುತ್ತಿದೆ. ಈ ಯೋಜನೆ ಸದ್ಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಬಲತೆ ಒದಗಿಸಿದೆ. ಹೀಗಾಗಿ ಈ ಯೋಜನೆಗಳ ಬಲದ ಮೇಲೆಯೇ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಇಷ್ಟೇ ಅಲ್ಲ ಗ್ಯಾರಂಟಿಗಳ ಕಾರಣಕ್ಕೆ ಖುಷಿಯಾಗಿರೋ ಜನರಿಗೆ ಲೋಕಸಭೆ ಚುನಾವಣೆ ಬಳಿಕ ಶಾಕಿಂಗ್ ಸುದ್ದಿಯೊಂದು ಕಾದಿದೆ. ಒಂದೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀರಿಕ್ಷಿತ ಪ್ರಮಾಣದಲ್ಲಿ ಗೆಲುವು ಸಾಧಿಸದೇ ಹೋದಲ್ಲಿ ಈ ಎಲ್ಲ ಗ್ಯಾರಂಟಿಗಳು ಸ್ಥಗಿತವಾಗಲಿದೆ. ಯಾಕೆಂದರೇ ಈ ಯೋಜನೆಗಳಿಂದ ಈಗಾಗಲೇ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಕೊರತೆಯಾಗುತ್ತಿದೆ. ಆದರೂ ರಾಜ್ಯ ಸರ್ಕಾರ ಕಳೆದ ಲೋಕಸಭೆಯಲ್ಲಿ ಗೆದ್ದ ಒಂದೇ ಸೀಟ್ ನ್ನು ಎರಡಂಕಿಯಲ್ಲಿ ಬದಲಾಯಿಸಲು ಗ್ಯಾರಂಟಿ ಅಸ್ತ್ರ ಬಳಕೆಗೆ ಮುಂದಾಗಿದೆ.
ಒಂದೊಮ್ಮೆ ಮತ್ತೊಮ್ಮೆ ಮೋದಿ ಅಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಲ್ಲಿ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಲವು ಬದಲಾವಣೆಗಳಾಗೋ ಸಾಧ್ಯತೆಗಳಿವೆ. ಹೀಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದು ನಿಶ್ಚಿತ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವ ನೀರಿಕ್ಷೆಯಿಂದ ಕಾಂಗ್ರೆಸ್ ಬೊಕ್ಕಸಕ್ಕೆ ಹೊರೆಯಾದರೂ ಗ್ಯಾರಂಟಿಗಳ ಭಾರ ಹೊರುತ್ತಿದೆ.ಒಂದೊಮ್ಮೆ ಕಾಂಗ್ರೆಸ್ ಗೆಲ್ಲದೇ ಹೋದಲ್ಲಿ ಸಿಎಂ ಸಿದ್ಧರಾಮಯ್ಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡೋ ಸಾಧ್ಯತೆ ಇದೆ.
ಇದನ್ನೂ ಓದಿ : ಹೊಸ ರೂಲ್ಸ್ ! ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಮಾರ್ಚ್ 25 ಡೆಡ್‌ಲೈನ್ : ತಪ್ಪದೇ ಈ ಕೆಲಸ ಮಾಡಿ ಮುಗಿಸಿ
ಹೀಗಾಗಿ ಸಿಎಂ ಬದಲಾವಣೆಯಾದರೇ ಗ್ಯಾರಂಟಿಗಳನ್ನು ಇಷ್ಟು ಸಮರ್ಥವಾಗಿ ನಡೆಸಿಕೊಂಡು ಹೋಗಲು ಬೇರೆಯವರಿಂದ ಸಾಧ್ಯವಿಲ್ಲ. ಹೀಗಾಗಿ ಯುವನಿಧಿಯಿಂದ ಆರಂಭವಾಗಿ ಗೃಹಲಕ್ಷ್ಮಿ,ಗೃಹಜ್ಯೋತಿ ಹಾಗೂ ಬಸ್ ಟಿಕೇಟ್ ಫ್ರೀ ಯೋಜನೆಗಳು ಸ್ಥಗಿತಗೊಳ್ಳಲಿದೆ. ಪಡಿತರ ಅಕ್ಕಿ ವಿತರಣೆ ಹಾಗೂ ಬಾಕಿಹಣ ಪಾವತಿ ಯೋಜನೆಯೊಂದು ಪೂರ್ತಿ ಪ್ರಮಾಣದಲ್ಲಿ ಅಕ್ಕಿಯನ್ನೇ ವಿತರಿಸುವ ರೂಪದಲ್ಲಿ ಮುಂದುವರೆಯಲಿದೆ ಎನ್ನಲಾಗ್ತಿದೆ.
ಇದನ್ನೂ ಓದಿ : ರಾಜಕೀಯಕ್ಕೆ ನಟ ಸುದೀಪ್ ಎಂಟ್ರಿ : ಕಿಚ್ಚ ಈ ಬಗ್ಗೆ ಹೇಳಿದ್ದೇನು ?
ಸಿಎಂ ಸಿದ್ಧರಾಮಯ್ಯನವರು ಆರ್ಥಿಕ ತಜ್ಞರಾಗಿದ್ದು, ಬಜೆಟ್ ಮಂಡಿಸಿದ ಅನುಭವದ ಆಧಾರದ ಮೇಲೆ ಗ್ಯಾರಂಟಿ ಯೋಜನೆ ಮುನ್ನೆಡಿಕೊಂಡು ಹೋಗುತ್ತಿದ್ದರು. ಆದರೆ ಸಿದ್ಧರಾಮಯ್ಯನವರನ್ನು ಹೊರತುಪಡಿಸಿ ಇನ್ಯಾರಿಗೂ ಆ ಚಾಕಚಕ್ಯತೆ ಇಲ್ಲ. ಹೀಗಾಗಿ ಲೋಕಸಭಾ ಚುನಾವಣೆವರೆಗಷ್ಟೇ ಗ್ಯಾರಂಟಿ ಭವಿಷ್ಯ ಎಂಬ ಮಾತು ಕೇಳಿಬರ್ತಿದೆ.
ಕೇವಲ ವದಂತಿ ಮಾತ್ರವಲ್ಲ ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ನ ಹಲವು ಸಚಿವರು ಈಗಾಗಲೇ ಪರೋಕ್ಷವಾಗಿ ಹೇಳಿದ್ದಾರೆ. ಹೀಗಾಗಿ ಗ್ಯಾರಂಟಿ ಭವಿಷ್ಯ ಚುನಾವಣೆಯ ಗೆಲುವಿನ ಮೇಲೆ ನಿಂತಿದೆ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ.
Gurha lahakshmi, Yuvanidhi, Gruha Jyothi Yojana canceled! What is Lok Sabha Election 2024 Calculation ?