ಕೋಟ : ಗೆಳೆಯರ ಬಳಗ ಯುವಕ ಸಂಘ (ರಿ.) ದಾನಗುಂದು, ಹಂದಟ್ಟು ಗಣೇಶೋತ್ಸವವಕ್ಕೆ 25ರ ಸಂಭ್ರಮ (Handattu Chauthi- 25) . ಕಳೆದ 24 ವರ್ಷಗಳಿಂದ ಸಂಭ್ರಮ, ಸಡಗರದಿಂದ ಆಚರಿಸುತ್ತಿರುವ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಹಂದಟ್ಟು ಚೌತಿ 25ರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಹಂದಟ್ಟು ದಾನಗುಂದ ಗೆಳೆಯರ ಬಳಗ ಯುವಕ ಮಂಡಲದ ಸಭಾಭವನದಲ್ಲಿ ಬೆಳ್ಳಿಹಬ್ಬದ ಪೋಸ್ಟರ್ ಅನಾವರಣಗೊಂಡಿದೆ.
ಹಂದಟ್ಟು ಚೌತಿ (Handattu Chauthi- 25) ಬೆಳ್ಳಿ ಹಬ್ಬದ ಪ್ರಯುಕ್ತ ಆಗಸ್ಟ್ 27 ರಿಂದ 31 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ. ಮಾತ್ರವಲ್ಲ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಗೆಳೆಯರ ಬಳಗ ಯುವಕ ಸಂಘ (ರಿ.) ದಾನಗುಂದು, ಹಂದಟ್ಟು “ದಿ. ಹಂದಟ್ಟು ಬಲರಾಮ ಹಂದೆ ಸಭಾಭವನ” ಲೋಕಾರ್ಪಣೆ ನಡೆಯಲಿದೆ.

Also Read : Ujjwala Yojana : ಉಜ್ವಲ ಯೋಜನೆ : ಕೇವಲ 300 ರೂ.ಗೆ ಸಿಗಲಿದೆ ಎಲ್‌ಪಿಜಿ ಸಿಲಿಂಡರ್
ಅಗಸ್ಟ್ 30ರಂದು ಲೋಕಕಲ್ಯಾಣಾರ್ಥ “ಸಹಸ್ರ ನಾರಿಕೇಳ ಗಣಯಾಗ ನಡೆಯಲಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಮಹಾ ಅನ್ನಸಂತರ್ಪಣೆ ನೆರವೇರಲಿದೆ. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್ ಬಾರಿಕೆರೆ ಬೆಳ್ಳಿಹಬ್ಬದ ಪೋಸ್ಟರ್ ಬಿಡುಗಡೆಗೊಳಿಸಿದರು.

ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಜಾನಕಿ ಹಂದೆ, ಹಿರಿಯರಾದ ಶ್ರೀ ಆನಂದರಾಮ ಉರಾಳ, ಶ್ರೀ ಸೂರ್ಯನಾರಾಯಣ ಉರಾಳ, ಶ್ರೀ ನಾರಾಯಣ ಪೂಜಾರಿ, ಶ್ರೀ ಶೇಖರ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಾಸು ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ರತ್ನ.
Also Read : LPG Gas Booking: ನೀವು ಎಲ್ ಪಿ ಜಿ ಗ್ರಾಹಕರೇ , ಹಾಗಾದರೆ ಈ ಸುದ್ದಿ ನಿಮಗಾಗಿ
ಪಂಚವರ್ಣ ಮಹಿಳಾ ಘಟಕದ ಉಪಾಧ್ಯಕ್ಷೆ ಪುಷ್ಪ ಹಂದಟ್ಟು, ಅಘೋರೇಶ್ವರ ಕಲಾರಂಗದ ಶ್ರೀ ಉಮೇಶ್ ನಾಯರಿ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಸುಜಾತ ಬಾಯರಿ, ಗೆಳೆಯರ ಬಳಗ ಯುವಕ ಸಂಘ ಮತ್ತು ಹಂದಟ್ಟು ಮಹಿಳಾ ಬಳಗದ ಎಲ್ಲಾ ಸದಸ್ಯರು, ಊರ ಪರವೂರ ಮಹನೀಯರು ಉಪಸ್ಥಿತರಿದ್ದರು.
Handattu Geleyara Balaga Handattu Chauthi- 25 Silver Jubilee Poster Released udupi News