ಸೋಮವಾರ, ಏಪ್ರಿಲ್ 28, 2025
HomekarnatakaHanuman Birth Place : ನಿಜವಾಗಿಯೂ ಹನುಮ ಹುಟ್ಟಿದ್ದು ಎಲ್ಲಿ ? ಇಲ್ಲಿದೆ ವಿವರಣೆ

Hanuman Birth Place : ನಿಜವಾಗಿಯೂ ಹನುಮ ಹುಟ್ಟಿದ್ದು ಎಲ್ಲಿ ? ಇಲ್ಲಿದೆ ವಿವರಣೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಪಠ್ಯಪುಸ್ತಕ, ಹಿಜಾಬ್, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸಂಘರ್ಷ ತಾರಕ್ಕೇರಿರುವಾಗಲೇ, ಆಂಜನೇಯನ ಜನ್ಮಸ್ಥಳದ ( Hanuman Birth Place) ಬಗ್ಗೆಯೂ ವಿವಾದ ತೀವ್ರಗೊಂಡಿದೆ. ಹನುಮ ಜನ್ಮಭೂಮಿ ನಮ್ಮಲ್ಲಿದೆ ಎಂದು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಖ್ಯಾತೆ ತೆಗೆದಿವೆ. ಆದರೆ ಕರ್ನಾಟಕ ಮಾತ್ರ ಪುರಾಣದ ಆಧಾರ ಇಟ್ಟುಕೊಂಡು ಕೊಪ್ಪಳದ ಅಂಜನಾದ್ರಿಯೇ (anjanadri hill)ಹನುಮನ ಜನ್ಮಭೂಮಿ ಎಂದು ವಾದಿಸುತ್ತಿದೆ.

ಏನಿದು ಹನುಮಂತನ ಜನ್ಮಭೂಮಿ ವಿವಾದ ಎಂಬುದನ್ನು ಗಮನಿಸೋದಾದರೇ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದ ಆಚರಣೆ. ಇತಿಹಾಸ ತಜ್ಞರ ಪ್ರಕಾರವೂ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ. ಆದರೆ ಈಗ ಈ ನಂಬಿಕೆಗೆ ಧಕ್ಕೆ ತರುವಂತೆ ಅಕ್ಕ ಪಕ್ಕದ ರಾಜ್ಯಗಳು ಹನುಮ ಜನ್ಮಭೂಮಿ ನಮ್ಮ ರಾಜ್ಯದಲ್ಲಿದೆ ಎಂದು ವಾದಿಸಲಾರಂಭಿಸಿದೆ.

ಮೊದಲನೆಯದಾಗಿ ಆಂಧ್ರಪ್ರದೇಶ ಹನುಮಂತನ ಜನ್ಮಭೂಮಿ ಎಂದು ಟಿಟಿಡಿ ಖ್ಯಾತೆ ತೆಗೆದಿದೆ. ತಿರುಪತಿ ಬಳಿ ಇರುವ ಅಂಜನಾದ್ರಿ (anjanadri hill) ಹನುಮಂತನ ಜನ್ಮಸ್ಥಳ ಎಂದು ವಾದಿಸಿತ್ತು. ಅಲ್ಲದೇ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಆರಂಭಿಸಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಅಂಜನೇರಿ ಆಂಜನೇಯನ ಜನ್ಮಸ್ಥಳ ಎಂದು ಮಹಾರಾಷ್ಟ್ರ ವಾದಿಸುತ್ತಿದೆ. ಈ ವಾದಕ್ಕೆ ಆಯಾ ರಾಜ್ಯದ ಧಾರ್ಮಿಕ‌‌‌ ಚಿಂತಕರು, ಪ್ರಾಜ್ಞರು ಹಾಗೂ ಖಾವಿಧಾರಿಗಳು ಧ್ವನಿಗೂಡಿಸುತ್ತಿದ್ದಾರೆ.

ಇವೆಲ್ಲವೂ ಪಕ್ಕದ ರಾಜ್ಯದ ವಾದವೇ ವಿನಃ ಅಲ್ಲಿ ಆಂಜನೇಯ ಹುಟ್ಟಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ.‌ಆದರೆ ಕರ್ನಾಟಕದ ಕೊಪ್ಪಳದಲ್ಲಿ ಆಂಜನೇಯ ಹುಟ್ಟಿದ್ದ ಎನ್ನುವುದಕ್ಕೆ ಐತಿಹಾಸಿಕ,ಪೌರಾಣಿಕ, ಪಾಕೃತಿಕ ಕುರುಹುಗಳು ದಾಖಲೆ‌ ಒದಗಿಸುತ್ತಿದೆ. ಇದಲ್ಲದೇ ಕರ್ನಾಟಕದಲ್ಲಿ ಆಂಜನೇಯನ ಜನ್ಮಸ್ಥಳವಿದೆ ಎಂಬುದನ್ನು ಗಣ್ಯರು ನಂಬಿದ್ದು ದೇಶದ ಪ್ರಧಾನಿ ಮೋದಿಯವರ ಪತ್ನಿ ಜಶೋಧಾಬೆನ್, ಪ್ರವೀಣ ತೂಗಾಡಿಯಾ ಸೇರಿದಂತೆ ಹಲವರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಮಹಾರಾಷ್ಟ್ರದ ಆಂಜನೇರಿ ಆಂಜನೇಯನ ಜನ್ಮಭೂಮಿ ಎಂಬ ಮಹಾರಾಷ್ಟ್ರದ ವಾದ ಹಾಗೂ ಟಿಟಿಡಿ ಬಳಿಯೇ ಆಂಜನೇಯ‌ ಜನಿಸಿದ್ದ ಆಂಧ್ರದ ವಾದ ಎರಡೂ ಜನರ ಭಕ್ತಿಯನ್ನು ಕಮರ್ಷಿಯಲ್ ಮಾಡುವ ಚಿಂತನೆ ಎಂದು ಕರ್ನಾಟಕದ ಹನುಮ ಭಕ್ತರು ಆರೋಪಿಸುತ್ತಿದ್ದಾರೆ.

ಇನ್ನೂ ರಾಜ್ಯ ಸರ್ಕಾರವೂ ಕೊಪ್ಪಳದ ಅಂಜನಾದ್ರಿಯನ್ನೇ ಹನುಮಜನ್ಮಭೂಮಿ ಎಂದು ನಂಬಿದ್ದು ಹನುಮ ಜನ್ಮಭೂಮಿ ಅಭಿವೃದ್ಧಿಗಾಗಿ ಬಜೆಟ್ 100 ಕೋಟಿ ರೂಪಾಯಿ ಮೀಸಲಿರಿಸಿದೆ. ಈ‌ ಮಧ್ಯೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಹನುಮ ಜನ್ಮಭೂಮಿ ನಿರ್ಣಯಕ್ಕಾಗಿ ಮಹತ್ವದ ಸಭೆ ಕೂಡ ನಡೆದಿದ್ದು ಕರ್ನಾಟಕದಿಂದ ನಿಯೋಗವೊಂದು ಭಾಗವಹಿಸಿದೆ. ಆದರೆ ಈ ಸಭೆಯಲ್ಲೂ ಸ್ಪಷ್ಟ ನಿರ್ಣಯಕೈಗೊಳ್ಳುವಲ್ಲಿ ವಿಫಲವಾಗಿದೆ.

ಇದನ್ನೂ ಓದಿ : Aprameya Temple : ತೊಟ್ಟಿಲು ಹರಕೆಯನ್ನು ಕಟ್ಟಿದರೆ, ಸಂತಾನ ಭಾಗ್ಯ ಕರುಣಿಸುವ ಅಪ್ರಮೇಯ ಸ್ವಾಮಿ

ಇದನ್ನೂ ಓದಿ : Ram Mandir’s Garbhagriha : ಅಯೋಧ್ಯೆ ರಾಮ ಮಂದಿಯ ಗರ್ಭಗುಡಿಗೆ ಯೋಗಿ ಆದಿತ್ಯನಾಥ್​ ಶಂಕುಸ್ಥಾಪನೆ

Hanuman Birth Place anjanadri hill here is the great information

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular