Ram Mandir’s Garbhagriha : ಅಯೋಧ್ಯೆ ರಾಮ ಮಂದಿಯ ಗರ್ಭಗುಡಿಗೆ ಯೋಗಿ ಆದಿತ್ಯನಾಥ್​ ಶಂಕುಸ್ಥಾಪನೆ

Ram Mandir’s Garbhagriha : ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರತಿಷ್ಠಿತ ರಾಮಮಂದಿರದ ಕಾಮಗಾರಿ ಕಾರ್ಯ ಭರದಿಂದ ಸಾಗಿದೆ. ಅಯೋಧ್ಯೆಗೆ ಇಂದು ಭೇಟಿ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​ ಗರ್ಭಗುಡಿಯ ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು. ಇಂದು ಗರ್ಭಗುಡಿ ಶಂಕುಸ್ಥಾಪನೆ ಕಾರ್ಯ ನೆರವೇರಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಗರ್ಭಗುಡಿ ಕಾಮಗಾರಿ ಕಾರ್ಯ ಆರಂಭಗೊಳ್ಳಲಿದೆ.

ಅಯೋಧ್ಯೆಯಲ್ಲಿ ರಾಮ ಮಂದಿಯ ಗರ್ಭಗುಡಿಗೆ ಶಂಕುಸ್ಥಾಪನೆ ಕಾರ್ಯ ಕೈಗೊಂಡ ಯೋಗಿ ಆದಿತ್ಯನಾಥ್​​ ಗರ್ಭಗುಡಿ ಜಾಗಕ್ಕೆ ಪೂಜೆಯನ್ನು ನೆರವೇರಿಸಿ ಬಳಿಕ ಕಲ್ಲುಗಳಿಗೆ ಸಿಮೆಂಟ್​ ಸುರಿದಿದ್ದಾರೆ. ಗರ್ಭಗುಡಿ ಶಂಕು ಸ್ಥಾಪನೆ ಕಾರ್ಯಕ್ಕೆ ಆಗಮಿಸುವ ಮುನ್ನ ಉತ್ತರ ಪ್ರದೇಶ ಸಿಎಂ ಅಯೋಧ್ಯೆಯ ಹನುಮಾನ್​ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

2020ರ ಆಗಸ್ಟ್​​ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ ಶಂಕು ಸ್ಥಾಪನೆ ಕಾರ್ಯ ನೆರವೇರಿಸಿದ್ದರು. ಇದಾದ ಬಳಿಕ ದೇವಾಲಯ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ರಾಮ ಮಂದಿರ ಗರ್ಭಗುಡಿಗೆ ಮೊದಲ ಶಿಲೆಯನ್ನಿಟ್ಟು ಪೂಜೆಯನ್ನು ಸಲ್ಲಿಸಿದರು.

ರಾಮಮಂದಿರ ಗರ್ಭಗುಡಿಗೆ ಶಂಕು ಸ್ಥಾಪನೆ ನೆರವೇರಿರುವ ಬಗ್ಗೆ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್​ ರೈ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಅಯೋಧ್ಯೆ ರಾಮ ಮಂದಿರದ ಶಂಕು ಸ್ಥಾಪನೆ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಅಯೋಧ್ಯೆಯ 90 ಸಂತರು ಹಾಗೂ ಮಹಾಪುರುಷರಿಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದಾರೆ .

ಇದನ್ನು ಓದಿ : Brijesh Kallappa resigns : ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ: 20 ವರ್ಷಗಳ ಸಂಬಂಧಕ್ಕೆ ಅಂತ್ಯ ಹಾಡಿದ ಬ್ರಿಜೇಶ್ ಕಾಳಪ್ಪ

ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

UP CM Yogi Adityanath Lays Foundation Stone For Ram Mandir’s Garbhagriha In Ayodhya

Comments are closed.