ಭಾನುವಾರ, ಜೂನ್ 15, 2025
HomeCrimeಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆಯಾಗಲು ಹೊರಟ ವರನಿಗೆ ಧರ್ಮದೇಟು

ಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆಯಾಗಲು ಹೊರಟ ವರನಿಗೆ ಧರ್ಮದೇಟು

- Advertisement -

ಹಾಸನ : Hassan marriage controversy: ಆತನಿಗೆ ಮೊದಲೇ ಮದುವೆಯಾಗಿತ್ತು. ಮೊದಲ ಪತ್ನಿಯ ಜೊತೆ ಜಗಳವಾಡಿಕೊಂಡಿದ್ದ ಭೂಪ ಮದುವೆ ವಿಚಾರವನ್ನು ಮುಚ್ಚಿಟ್ಟು ಎರಡನೇ ಮದುವೆಗೆ ಸಿದ್ದನಾಗಿದ್ದ. ಮದುವೆಯ ಮರುದಿನವೇ ಪತ್ನಿಯ ಜೊತೆಗೆ ಫಾರಿನ್ ಟ್ರಿಪ್ ಹೋಗೋದಕ್ಕೂ ತಯಾರಿ ಮಾಡಿಕೊಂಡಿದ್ದ. ಮದುವೆ ಮಂಟಪದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಹೊತ್ತಲ್ಲೇ ವರನ ಲೆಕ್ಕಾಚಾರ ಕೈಕೊಟ್ಟಿತ್ತು. ಮೊದಲ ಮದುವೆ ವಿಚಾರ ತಿಳಿಯುತ್ತಲೇ ವಧುವಿನ ಕಡೆಯವರು ಧರ್ಮದೇಟು ಕೊಟ್ಟಿದ್ದಾರೆ.

ಈ ಘಟನೆ ನಡೆದಿರೋ ಹಾಸನ ಜಿಲ್ಲೆಯಲ್ಲಿ ಬೆಂಗಳೂರಿನ ಚಿಕ್ಕಸಂದ್ರ ಮೂಲದ ಮಧುಸೂದನ್ ಎಂಬಾತನೇ ಧರ್ಮದೇಟು ತಿಂದ ಮದುಮಗ. ಮಧುಸೂದನ್ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ವಸುದಾ ಎಂಬವರನ್ನು ಮದುವೆಯಾಗಿದ್ದ. ನಂತರದಲ್ಲಿ ಪತ್ನಿಯ ಜೊತೆಗೆ ಆಗಾಗ ಜಗಳವಾಡುತ್ತಿದ್ದ. ಜೊತೆಗೆ ಪತ್ನಿಯ ಜೊತೆಗೆ ಜಗಳ ಮಾಡಿಕೊಂಡು ಹಾಸನದಲ್ಲಿ ಎರಡನೇ ಮದುವೆಯಾಗುವುದಕ್ಕೆ ಸಿದ್ದನಾಗಿದ್ದ.

ಮಧುಸೂದನ್ ಗೆ ಹಾಸನ ಹುಡುಗಿಯ ಜೊತೆಯಲ್ಲಿ ಇಂದು ಮದುವೆ ನಿಗದಿಯಾಗಿತ್ತು. ಸಂಬಂಧಿಕರು ಮದುವೆಗೆ ಆಗಮಿಸಿದ್ದರು. ಅದ್ದೂರಿಯಾಗಿಯೇ ಮದುವೆ ನಡೆಯುತ್ತಿದ್ದ ಹೊತ್ತಲ್ಲೇ ವಧುನಿನ ಕಡೆಯವರಿಗೆ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ಮಹಿಳೆ ಮಧುಸೂದನ್ ಗೆ ಮೊದಲೇ ಮದುವೆಯಾಗಿರುವ ವಿಚಾರವನ್ನು ತಿಳಿಸಿದ್ದಾಳೆ. ಅಷ್ಟೇ ಅಲ್ಲಾ ತಾನೇ ಆತನ ಮೊದಲ ಪತ್ನಿ ಅಂತಾನೂ ಹೇಳಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದ ಮಧುಸೂದನ್ ಮೊದಲ ಪತ್ನಿ ತನ್ನ ಮದುವೆಯ ಪೋಟೋವನ್ನು ಕೂಡ ಕಳುಹಿಸಿಕೊಟ್ಟಿದ್ದಾಳೆ.

ವಿಷಯ ತಿಳಿಯುತ್ತಲೇ ವಧುವಿನ ಕಡೆಯವರು ಮಧುಸೂದನ್ ಗೆ ಧರ್ಮದೇಟು ಕೊಟ್ಟಿದ್ದಾರೆ. ಈ ವೇಳೆಯಲ್ಲಿ ಮದುಮಗ ತನಗೆ ಮೊದಲೇ ಮದುವೆ ಆಗಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ವಧುವಿನ ಕಡೆಯುವರು ಮದುವೆಯನ್ನು ನಿಲ್ಲಿಸಿದ್ದಾರೆ. ಮಧುಸೂದನ್ ತನ್ನ ಪತ್ನಿಯ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು ಅನ್ನೋ ಕಾರಣಕ್ಕೆ, ಮದುವೆಯಾದ ಮರುದಿನವೇ ಫಾರಿನ್ ಗೆ ಹಾರುವ ಲೆಕ್ಕಾಚಾರ ಹಾಕಿದ್ದ. ಇದಕ್ಕಾಗಿಯೇ ಮಧುಸೂದನ್ ನಾಳೆ ತಂದೆ, ತಾಯಿ ಹಾಗೂ ಪತ್ನಿಯ ಜೊತೆಯಲ್ಲಿ ಮಾಲ್ಡಿವ್ಸ್ ಗೆ ಟ್ರಿಪ್ ಹೋಗಲು ಟಿಕೆಟ್‌ ಕೂಡ ಮಾಡಿಕೊಂಡಿದ್ದ. ಆದರೆ ಮಧುಸೂದನ್ ಲೆಕ್ಕಾಚಾರ ಇದೀಗ ಬುಡಮೇಲಾಗಿದೆ. ಹಾಸನದ ಬಡಾವಣೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : 13 year old Girl Dies Heart Attack: ಕುಂದಾಪುರ : ಓದುತ್ತಿದ್ದಾಗ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು

ಇದನ್ನೂ ಓದಿ : Girl’s auction: ರಾಜಸ್ಥಾನದಲ್ಲಿ ಸಾಲ ತೀರಿಸದಿದ್ದರೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತೆ ಇಂಥ ದೌರ್ಜನ್ಯ..!

Hassan marriage controversy Arrest of man who was ready for second marriage

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular