Karnataka : ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ.. ಕನ್ನಡ ಧ್ವಜದಲ್ಲಿ ಹಳದಿ, ಕೆಂಪು ಬಣ್ಣ ಯಾಕಿದೆ, ಇಲ್ಲಿದೆ ಮಾಹಿತಿ

Karnataka information : ನಾಡಿನಾದ್ಯಂತ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕೂಡ ಅದ್ಧೂರಿಯಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಇಂಪಿಸಿದೆ. ಕನ್ನಡಿಗರು, ಕನ್ನಡ ನಾಡು ಇವೆಲ್ಲವೂ ನಮ್ಮ ಹೆಮ್ಮೆಯ ಸಂಕೇತ. ಆದರೆ ಈ ಕನ್ನಡ ನಾಡನ್ನು ಏಕೀಕರಣ ಚಳವಳಿಯ ಮೂಲಕ ಒಗ್ಗೂಡಿಸಿದ ಸುದೀರ್ಘ ಇತಿಹಾಸದ ಕತೆಯೊಂದು ಕರುನಾಡಿಗಿದೆ.

ಇಂದಿನ ಕರ್ನಾಟಕ ಮೊದಲು ಮೈಸೂರು ಎಂದು ಕರೆಯಲ್ಪಡುತ್ತಿತ್ತು. ಈಗಿನ ಕರ್ನಾಟಕವನ್ನು ಮೈಸೂರು ಎಂದು ಹೇಳಲಾಗುತ್ತಿತ್ತು. ದೇಶವು ಸ್ವಾತಂತ್ರ್ಯವನ್ನು ಗಳಿಸಿದ ಬಳಿಕ 19ನೇ ಶತಮಾನದಲ್ಲಿ ಏಕೀಕರಣ ಚಳವಳಿಯ ಭಾಗವಾಗಿ ಹೈದರಾಬಾದ್​, ಮದ್ರಾಸ್​​, ಬಾಂಬೆ ಹಾಗೂ ಕೂರ್ಗ್​ನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಿದರು. ಆಗ ಮೈಸೂರು ಎಂಬ ಹೆಸರನ್ನು ಹೊಂದಿದ್ದ ರಾಜ್ಯವನ್ನು ಕರ್ನಾಟಕ ಎಂಬ ಮರು ನಾಮಕರಣ ಮಾಡಲಾಯಿತು.

ಕರು ಎಂದರೆ ಕಪ್ಪು ನಾಡು ಎಂದರೆ ಪ್ರದೇಶ ಎಂದು ಅರ್ಥವಿದೆ. ಇದೇ ಕರುನಾಡು ಮುಂದುವರಿದು ಕರ್ನಾಟಕವಾಯ್ತು ಎಂದು ಹೇಳಲಾಗುತ್ತೆ. ಆದರೆ ಇದಕ್ಕೆ ಹಲವು ಭಿನ್ನ ಅಭಿಪ್ರಾಯ ಕೂಡ ಇದೆ. ಬಯಲು ಸೀಮೆಯ ಕಪ್ಪು ಹತ್ತಿ ಮಣ್ಣಿನಿಂದ ಈ ಹೆಸರು ಬಂತು ಎಂದು ಕೂಡ ಹಲಬರು ಹೇಳ್ತಾರೆ. ಇದರ ಜೊತೆಯಲ್ಲಿ ಬ್ರಿಟೀಷರ ಕಾಲದಲ್ಲಿ ಕಾರ್ನಾಟಿಕ್​ ಎಂದು ಕರೆಯಿಸಿಕೊಂಡಿದ್ದ ಕರುನಾಡು ಮುಂದುವರಿದು ಕರ್ನಾಟಕವಾಯ್ತು ಎಂದು ಸಹಹೇಳ್ತಾರೆ. ಇದನ್ನೂ ಓದಿ : T20 World Cup 2022: ಭಾರತದ ಕೈಯಲ್ಲಿ ಪಾಕ್ ಭವಿಷ್ಯ, ಟೀಮ್ ಇಂಡಿಯಾ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ


ಕರ್ನಾಟಕವೆಂಬ ರಾಜ್ಯವನ್ನು ಸ್ಥಾಪಿಸಿದ ಮೇಲೆ ರಾಜ್ಯಕ್ಕೊಂದು ಗುರುತು ಎಂಬಂತೆ ಬಾವುಟದ ಅವಶ್ಯಕತೆಯಿತ್ತು. ಇದಾದ ಬಳಿಕ ಕನ್ನಡ ಪರ ಹೋರಾಟಗಾರ ಎಂ.ರಾಮಮೂರ್ತಿ ಕನ್ನಡಾಂಬೆಯ ಅರಿಶಿಣ ಹಾಗೂ ಕುಂಕುಮ ಬಣ್ಣವನ್ನು ಪ್ರೇರಣೆಯಾಗಿ ಪಡೆದು ಹಳದಿ ಹಾಗೂ ಕೆಂಪು ಬಣ್ಣದ ಬಾವುಟವನ್ನು ಆಯ್ಕೆ ಮಾಡಿದರು. ಅಲ್ಲದೇ ಕನ್ನಡಿಗರು ಶಾಂತಿ ಪ್ರಿಯರು. ಅವಶ್ಯ ಬಿದ್ದರೆ ಹೋರಾಟಕ್ಕೂ ಸಿದ್ಧರು ಎಂಬ ಒಳಾರ್ಥ ಕೂಡ ಈ ಬಾವುಟಕ್ಕಿದೆ. ಮೊಟ್ಟ ಮೊದಲು ಕನ್ನಡ ಬಾವುಟ ಸಿದ್ಧಗೊಂಡಾಗ ತೆನೆಯ ಚಿತ್ರವನ್ನು ಕೂಡ ಬಾವುಟದ ಮಧ್ಯದಲ್ಲಿ ಇಡಲಾಗಿತ್ತು. ಆದರೆ ಮುದ್ರಣಕ್ಕೆ ಕಷ್ಟವಾದ ಹಿನ್ನೆಲೆಯಲ್ಲಿ ತೆನೆಯ ಚಿತ್ರವನ್ನು ತೆಗೆದು ಕೆಂಪು ಹಾಗೂ ಹಳದಿ ಬಣ್ಣ ಮಾತ್ರ ಧ್ವಜದಲ್ಲಿ ಇರಲಿ ಎಂದು ತೀರ್ಮಾನಿಸಲಾಯ್ತು. ಇದನ್ನು ಓದಿ : Fire in Bangalore Flight: ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ.. ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ

Karnataka information : How the state got the name Karnataka.. What are the yellow and red colors in the Kannada flag, here is the information

Comments are closed.